ಬ್ರೇಕಿಂಗ್ ನ್ಯೂಸ್
13-01-24 10:56 pm Mangalore Correspondent ಕರಾವಳಿ
ಬಂಟ್ವಾಳ, ಜ.13: ಹೆಲ್ಮೆಟ್ ಹಾಕದೆ ಸಂಚಾರ ಮಾಡುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ಬೈಕ್ ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಹೋಗಿದ್ದಾರೆ ಎಂಬ ಕಾರಣಕ್ಕಾಗಿ ಅಟ್ಟಿಸಿಕೊಂಡು ಬಂದು ಬೈಕ್ ಗೆ ಲಾಕ್ ಹಾಕಿದ್ದಕ್ಕೆ ಸಾರ್ವಜನಿಕರು ಹಾಗೂ ಟ್ರಾಫಿಕ್ ಎ.ಎಸ್.ಐ. ಮಧ್ಯೆ ಜಟಾಪಟಿ ನಡೆದ ಘಟನೆ ಬಿಸಿರೋಡಿನ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಟ್ರಾಫಿಕ್ ಎಎಸ್ಐ ಜನಾರ್ದನ ಹಾಗೂ ಸಾರ್ವಜನಿಕರ ನಡುವೆ ವಾಗ್ವಾದ ನಡೆದಿದ್ದು ಕೊನೆಗೆ ಬೈಕ್ ಗೆ ಹಾಕಿದ್ದ ಲಾಕ್ ಅನ್ನು ತೆಗದು ಹೋಗಿದ್ದಾರೆ. ಭಾಸ್ಕರ ಮಣಿಹಳ್ಳ ಎಂಬವರು ಬೈಕ್ ರಿಪೇರಿಗಾಗಿ ಕೈಕುಂಜೆಯ ಮೆಕ್ಯಾನಿಕ್ ಬಳಿ ಇಟ್ಟಿದ್ದರು. ಇವರ ಬೈಕ್ ಯಾವುದೋ ಪ್ರಕರಣದಲ್ಲಿ ಪೋಲೀಸ್ ಠಾಣೆಯಲ್ಲಿ ಹಲವು ಸಮಯದಿಂದ ಇದ್ದು, ಬ್ಯಾಟರಿ ಸಹಿತ ಇನ್ನಿತರ ಸಾಮಾಗ್ರಿಗಳು ಕೆಟ್ಟುಹೋಗಿತ್ತು. ಠಾಣೆಯಿಂದ ಬಿಡುಗಡೆಗೊಳಿಸಿದ ಬೈಕ್ ನ್ನು ರಿಪೇರಿಗಾಗಿ ಅವರು ಶಬರಿಮಲೆ ಯಾತ್ರೆ ಹೋಗುವ ವೇಳೆ ಮೆಕ್ಯಾನಿಕ್ ಬಳಿ ಇಟ್ಟಿದ್ದರು.





ಶಬರಿಮಲೆಯಿಂದ ಆಗಮಿಸಿ ಶನಿವಾರ ಬೆಳಗ್ಗೆ ಬೈಕ್ ಟೆಸ್ಟ್ ರೈಡ್ ಮಾಡುವ ಉದ್ದೇಶದಿಂದ ಕೈಕುಂಜೆ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಸಂಚಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಟ್ರಾಫಿಕ್ ಪೋಲೀಸರು ಬೈಕ್ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಬೈಕ್ ಸವಾರ ಭಾಸ್ಕರ್ ಅವರು ಬೈಕ್ ನಿಲ್ಲಿಸದೆ ಹೋಗಿದ್ದಾರೆ. ಈ ಕಾರಣಕ್ಕೆ ಎ.ಎಸ್.ಐ. ಹಾಗೂ ಸಿಬ್ಬಂದಿಯವರು ಸವಾರನನ್ನು ಬೆನ್ನಟ್ಟಿ ಬಂದು ತಾಲೂಕು ಪಂಚಾಯತ್ ಎದುರು ಮರದ ಅಡಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕ್ ಗೆ ಲಾಕ್ ಹಾಕಿದ್ದಾರೆ. ಇದರಿಂದ ಕುಪಿತರಾದ ಬೈಕ್ ಸವಾರ ಹಾಗೂ ಸಾರ್ವಜನಿಕರು ಇವರ ನಡೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರು.
ಲಾಕ್ ಮಾಡಲು ಅವಕಾಶ ಇದೆಯಾ?
ಸವಾರರನ್ನು ಬೆನ್ನಟ್ಟಿ ವಾಹನಗಳಿಗೆ ಲಾಕ್ ಹಾಕುವ ಅವಕಾಶ ಟ್ರಾಫಿಕ್ ಪೋಲೀಸರಿಗೆ ಇದೆಯಾ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡಿದ್ದಾರೆ.
ವಾಗ್ವಾದ ಸಂದರ್ಭದಲ್ಲಿ ಟ್ರಾಫಿಕ್ ಎಎಸ್ಐ ಬಳಕೆ ಮಾಡಿದ ಬೈಕಿನ ವಿಮೆ ಪಾಲಿಸಿಯ ಅವಧಿ ಮುಗಿದಿದೆ ಎಂದು ಆನ್ ಲೈನ್ ತೋರಿಸುತ್ತಿದೆ ಎಂದು ಆರೋಪ ಮಾಡಿದರು. ವಿಮೆ ಇಲ್ಲದೆ ಪೋಲೀಸರ ವಾಹನ ರಸ್ತೆಗೆ ಇಳಿಯಬಹುದಾ ಎಂದು ಪ್ರಶ್ನಿಸಿ ತರಾಟೆಗೆತ್ತಿಕೊಂಡರು.
The public and the Traffic ASI have been suspended for not stopping the bike when the traffic police instructed them to stop it while they were not wearing a helmet. The incident took place in front of the taluk panchayat office on BC Road.
01-10-26 10:50 pm
HK News Staffer
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
02-10-26 05:28 pm
HK News Staffer
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
ವಿಮಾನ ಅಪಘಾತದ ತನಿಖಾ ವರದಿಗಳೇ ನೆರವಾಯ್ತು..! ದುಬೈ...
01-10-26 11:46 am
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
02-10-26 05:20 pm
HK News Staffer
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
ಏಶ್ಯನ್ ಗೇಮ್ಸ್ ನಲ್ಲಿ ಪೂವಮ್ಮಗೆ ಚಿನ್ನ ; ರಾಜ್ಯ ಸರ...
01-10-26 08:10 pm
Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ...
01-10-26 06:19 pm
02-10-26 05:24 pm
HK News Staffer
113 ಕೆಜಿ ಚಿನ್ನ ಕಳ್ಳಸಾಗಣೆ ಕೇಸ್ ; ರನ್ಯಾ ರಾವ್ಗೆ...
01-10-26 02:31 pm
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm