ಬ್ರೇಕಿಂಗ್ ನ್ಯೂಸ್
19-01-24 06:00 pm Mangalore Correspondent ಕರಾವಳಿ
ಉಳ್ಳಾಲ, ಜ.19: ಉಳ್ಳಾಲ ತಾಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದ ಶಾರದಾ ವಿದ್ಯಾಗಣಪತಿ ಶಾಲೆಯಲ್ಲಿ ಇಂದಿನಿಂದ ಮೂರು ದಿವಸಗಳ ಕಾಲ "ಕೃಷಿ ಮೇಳ 2024" ಉತ್ಸವವು ನಡೆಯಲಿದ್ದು, ಕೃಷಿ ಮೇಳದಲ್ಲಿ ಹೈಬ್ರೀಡ್, ಸಾವಯವ ತರಕಾರಿ ಮತ್ತು ಪುಷ್ಪಗಳ ಸಸ್ಯರಾಶಿ ಗ್ರಾಹಕರ ಮನಸೆಳೆದರೆ ತುಳುನಾಡ ಸಂಸ್ಕೃತಿಯನ್ನ ಮೆಲುಕಿಸುವ ಬೃಹತ್ ಪ್ರಾಚೀನ ವಸ್ತು ಸಂಗ್ರಹಾಲಯವು ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
ಕೈರಂಗಳ ಪುಣ್ಯಕೋಟಿ ನಗರದ ಶಾರದಾ ವಿದ್ಯಾಗಣಪತಿ ಶಾಲೆಯಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಕೃಷಿ ಮೇಳವನ್ನ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರು ಶುಕ್ರವಾರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ನಮ್ಮ ದೇಶ ಕೃಷಿ ಪ್ರಧಾನ. ಕೃಷಿಯೇ ದೇಶದ ಬೆನ್ನೆಲುಬು ಎಂದು ಹೆಮ್ಮೆಯಿಂದ ಹೇಳುತ್ತಾ ಬರಲಾಗಿದೆ. ಆದರೆ ನಮ್ಮಲ್ಲಿ ಕೃಷಿಕನಿಗೆ ಗೌರವವೇ ಇಲ್ಲ, ಗೌರವ ಏನಿದ್ದರೂ ಅಂಬಾನಿ, ಅದಾನಿಯಂಥ ಕೈಗಾರಿಕೋದ್ಯಮಿಗಳಿಗೆ ಮಾತ್ರ. ನಾವು ಕೃಷಿಯತ್ತ ಆಸಕ್ತರಾಗದಿದ್ದರೆ ನಮ್ಮ ಸರ್ವನಾಶ ಖಂಡಿತ ಎಂದರು.
ಕೃಷಿ ಮೇಳದಲ್ಲಿ ತುಳುನಾಡಿನ ಸಂಸ್ಕೃತಿಯನ್ನ ಮೆಲುಕಿಸುವ ಬೃಹತ್ ಪ್ರಾಚೀನ ವಸ್ತು ಸಂಗ್ರಹಾಲಯವು ಎಲ್ಲರ ಗಮನ ಸೆಳೆದಿದೆ. ಕೃಷಿ ಮೇಳದಲ್ಲಿ 102 ಸ್ಟಾಲ್ ಗಳನ್ನ ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷರು, ಶಾರದಾ ವಿದ್ಯಾಗಣಪತಿ ಶಾಲಾ ಸಂಚಾಲಕರಾದ ಟಿ.ಜಿ ರಾಜಾರಾಮ್ ಭಟ್ ಹೇಳಿದ್ದಾರೆ.
ಮೇಳದಲ್ಲಿ ಸಾವಯವ ಗೊಬ್ಬರ, ಸಾವಯವ ಬೀಜ, ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿಯನ್ನ ರೈತರಿಗೆ ತಿಳಿಸಲಾಗುತ್ತಿದೆ. ಕೃಷಿಕರಿಗೆ ಹೊಸ ಆವಿಷ್ಕಾರ, ಯಾಂತ್ರೀಕರಣದಿಂದ ಕೃಷಿಯಿಂದ ಹೆಚ್ಚಿನ ಲಾಭ ಪಡೆಯುವುದರ ಬಗ್ಗೆ ಕೃಷಿ ಮೇಳದಲ್ಲಿ ಅರಿವು ಮೂಡಿಸಲಾಗುವುದೆಂದು ರಾಜಾರಾಮ್ ಭಟ್ ತಿಳಿಸಿದ್ದಾರೆ.
ಕೃಷಿಕ ವರುಷದಲ್ಲಿ ಎರಡು ತಿಂಗಳು ಬೀಜ ಬಿತ್ತಿ ಉಳುಮೆ ಮಾಡಿದರೆ ಬಾಕಿ ಹತ್ತು ತಿಂಗಳು ಕುಳಿತು ಊಟ ಮಾಡಬಹುದು. ಆದರೆ ಸಾಫ್ಟ್ ವೇರ್ ಇಂಜಿನಿಯರ್ ಅಥವಾ ಡಾಕ್ಟರ್ ಗಳು ವರ್ಷವಿಡೀ ಒತ್ತಡದಿಂದಲೇ ದುಡಿಯಬೇಕಾಗಿರುವುದು ಅನಿವಾರ್ಯ. ಈ ವಿಚಾರಗಳನ್ನ ವಿದ್ಯಾರ್ಥಿಗಳು ಅರ್ಥ ಮಾಡಿದರೆ ಕೃಷಿಯಲ್ಲಿ ಮಹತ್ತರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಮಂಗಳೂರು ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಕೈರಂಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಚೌಟ, ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ವಿಘ್ನೇಶ್ವರ ವರ್ಮುಡಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೆನಿಲ ಅಶೋಕ್ ಭಟ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ನವೀನ್ ಪಾದಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
Mangalore Three days krushi mele 2023 at Ullal Kairangala.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm