ಬ್ರೇಕಿಂಗ್ ನ್ಯೂಸ್
23-01-24 05:20 pm Mangalore Correspondent ಕರಾವಳಿ
ಉಳ್ಳಾಲ, ಜ.23: ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹತ್ತು ಹಾಸಿಗೆಗಳ ಸುಸಜ್ಜಿತ ಡಯಾಲಿಸಿಸ್ ಘಟಕ ನಿರ್ಮಾಣಗೊಳ್ಳುತ್ತಿದ್ದು ನೂತನ ಘಟಕದ ಕಾಮಗಾರಿಯನ್ನು ಕ್ಷೇತ್ರದ ಶಾಸಕರೂ ವಿಧಾನಸಭಾ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಪರಿಶೀಲನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್ ಅವರು ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕೇಂದ್ರದಿಂದ 8 ಕಿ.ಮೀ ಅಂತರದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು ರಾಜ್ಯ ಅಥವಾ ರಾಷ್ಟ್ರದಲ್ಲೇ ಕಾಣಲು ಸಿಗೋದಿಲ್ಲ. ಹಾಗಾಗಿ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರವು ರಾಷ್ಟ್ರಕ್ಕೆ ಮಾದರಿಯಾಗಿದೆ. ನಾನು ರಾಜ್ಯದ ಆರೋಗ್ಯ ಸಚಿವನಾಗಿದ್ದಾಗ ಕ್ಯಾಬಿನೆಟ್ಟಲ್ಲಿ ಅವಕಾಶ ಇಲ್ಲದಿದ್ದರೂ ಕೇಂದ್ರದ ವಿಶೇಷ ಅನುಮತಿಯಿಂದ ಉಳ್ಳಾಲ ಸಮುದಾಯ ಆಸ್ಪತ್ರೆಯನ್ನ ಕಟ್ಟಿಸಿದ್ದೆ. ಎಷ್ಟೇ ಉತ್ತಮ ಕಟ್ಟಡ ಮತ್ತು ಸೌಕರ್ಯ ಒದಗಿಸಿದರೂ ವೈದ್ಯರು, ಸಿಬ್ಬಂದಿ ಕೊರತೆಯಿಂದ ಆರೋಗ್ಯ ಕೇಂದ್ರದ ಸೇವೆಗಳಲ್ಲಿ ಕುಂಠಿತ ಕಂಡಿವೆ. ಕೆಲವೊಂದು ಉತ್ತಮ ಡಾಕ್ಟರ್ ಗಳು ಸ್ಥಳೀಯರ ಟೀಕೆ, ಟಿಪ್ಪಣಿಗಳಿಂದ ಕೆಲಸವೇ ಬೇಡವೆಂದು ಬಿಟ್ಟು ಹೋಗಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಯೆನಪೋಯ ಆಸ್ಪತ್ರೆ ಮತ್ತು ಸರಕಾರಿ ವೈದ್ಯರೂ ಜನರಿಗೆ ಉಚಿತ ಆರೋಗ್ಯ ಸೇವೆಯನ್ನ ನೀಡುತ್ತಿದ್ದಾರೆ.
ನನ್ನ ಶಾಸಕ ನಿಧಿಯಿಂದ ನೂತನ ಡಯಾಲಿಸಿಸ್ ಸೆಂಟರ್ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ದಾನಿಗಳ ನೆರವಿನಿಂದ ಅತಿ ಶೀಘ್ರವೇ ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸಿ ಘಟಕವನ್ನ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗುವುದು. ಕೋವಿಡ್ ಸಮಯದಲ್ಲಿ ನನೆಗುದಿಗೆ ಬಿದ್ದಿದ್ದ ಆಕ್ಸಿಜನ್ ಘಟಕವನ್ನೂ ಉಪಯೋಗಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಆಸ್ಪತ್ರೆ ಆವರಣದಲ್ಲಿರುವ ಶವಾಗಾರವನ್ನೂ ಸಾರ್ವಜನಿಕರು ಬಳಸುವಂತೆ ನವೀಕರಿಸುತ್ತಿರುವುದಾಗಿ ಖಾದರ್ ಹೇಳಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದೊಳಗೆ ಆಯುಷ್, ಯುನಾನಿ, ಆಯುರ್ವೇದ, ಆಲೋಪತಿ, ಹೋಮಿಯೋಪಥಿಕ್, ಡೆಂಟಲ್ ಸರ್ವೀಸ್, ಯೋಗ, ಡಯಾಲಿಸಿಸ್ ಹೀಗೆ ಎಲ್ಲಾ ಸೇವೆಗಳೂ ಸಾರ್ವಜನಿಕರಿಗೆ ಲಭಿಸಲಿದೆ ಎಂದು ಖಾದರ್ ಹೇಳಿದರು.
Mangalore Ullal community health centre inspected by Speaker UT Khader. 10 beds to have special dialysis units for treatment.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm