ಬ್ರೇಕಿಂಗ್ ನ್ಯೂಸ್
23-01-24 10:21 pm Mangalore Correspondent ಕರಾವಳಿ
ಮಂಗಳೂರು, ಜ.23: ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಬಿಜೆಪಿ ಕಾರ್ಯಕರ್ತರು ತಡೆದು ಗೂಂಡಾಗಿರಿ ನಡೆಸಿದ್ದಾರೆಂದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರದ ಚಿತಾವಣೆಯಿಂದಲೇ ಈ ಕೃತ್ಯ ನಡೆದಿದೆ. ರಾಹುಲ್ ಗಾಂಧಿ ಯಾತ್ರೆಯನ್ನು ತಡೆಯುವ ಯತ್ನವಾಗಿ ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ. ಅಸ್ಸಾಂನಲ್ಲಿ ಕಾಂಗ್ರೆಸಿನಲ್ಲಿ ಎಲ್ಲವನ್ನೂ ಅನುಭವಿಸಿ ಐಟಿ, ಇಡಿ ದಾಳಿಯಾದಾಗ ಬಿಜೆಪಿ ಹೋಗಿ ತನ್ನ ಮೇಲಿನ ಕೇಸನ್ನು ಹಿಂಪಡೆಯುವ ಯತ್ನ ಮಾಡಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಬಿಸ್ವಾಸ್ ಶರ್ಮಾ, ಆತನ ಪತ್ನಿಯ ಹೆಸರನ್ನು ಮೋದಿ ಸರ್ಕಾರವೇ ಉಲ್ಲೇಖಿಸಿ ಕೇಸ್ ಹಾಕಿತ್ತು. ಈಗ ಬಿಜೆಪಿ ಸೇರಿ, ಕಾಂಗ್ರೆಸ್ ಯಾತ್ರೆಯನ್ನೇ ತಡೆಯುವ ಯತ್ನ ಮಾಡಿದ್ದಾರೆ.
ಅಸ್ಸಾಂನಲ್ಲಿ ಯುನಿವರ್ಸಿಟಿಗೆ ರಾಹುಲ್ ಗಾಂಧಿ ಹೋಗಬಾರದೆಂದು ತಡೆಯುವ ಕೆಲಸ ಮಾಡಿದ್ದಾರೆ. ಆದರೆ ವಿದ್ಯಾರ್ಥಿಗಳು ರಾಹುಲ್ ಗಾಂಧಿ ಇದ್ದಲ್ಲಿಗೇ ಬಂದಿದ್ದಾರೆ. ರಾಹುಲ್ ಅವರು ರಸ್ತೆಯಲ್ಲೇ ನಿಂತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ. ಬಿಸ್ವಾಸ್ ಶರ್ಮಾ ಮತ್ತು ಬಿಜೆಪಿ ಸರಕಾರ ತಡೆಯುವ ಕೆಲಸ ಮಾಡಿದರೆ, ಜನರೇ ನಮ್ಮ ಬಳಿಗೆ ಬರುತ್ತಿದ್ದಾರೆ. ಯಾತ್ರೆ ತಡೆದು ನಿಲ್ಲಿಸಿದ್ದನ್ನು ನಾವು ಖಂಡಿಸುತ್ತೇವೆ ಎಂದು ರಮಾನಾಥ ರೈ ಹೇಳಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಮಿಥುನ್ ರೈ, ರಕ್ಷಿತ್ ಶಿವರಾಮ್, ಶಾಲೆಟ್ ಪಿಂಟೋ, ಶಾಹುಲ್ ಹಮೀದ್, ವಿಶ್ವಾಸ್ ದಾಸ್, ವಸಂತ್ ಬೆರ್ನಾಡ್, ಲುಕ್ಮಾನ್ ಬಂಟ್ವಾಳ, ಬೇಬಿ ಕುಂದರ್, ಪ್ರಕಾಶ್ ಸಾಲ್ಯಾನ್, ಸುರೇಂದ್ರ ಕಂಬಳಿ, ಪ್ರವೀಣ್ ಚಂದ್ರ ಆಳ್ವಾ, ಪುರುಷೋತ್ತಮ ಚಿತ್ರಾಪುರ ಮತ್ತಿತರರಿದ್ದರು.
police halt Rahul Gandhi Bharath Jodo Nyay Yatra at Guwahati, Protest held in Mangalore by Ramanath Rai. Congress workers staged a protest in Mangaluru alleging that BJP workers stopped Rahul Gandhi's Bharat Jodo Nyay Yatra in Assam. High tension gripped Khanapara area on the Guwahati border as police halted Rahul Gandhi's Bharath Jodo Nyay Yatra on Tuesday. Amidst chaos between police and Congress workers attempting to enter the city, despite having sought permission, the administration has denied entry on seemingly frivolous grounds.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm