ಬ್ರೇಕಿಂಗ್ ನ್ಯೂಸ್
27-01-24 12:57 pm Mangalore Correspondent ಕರಾವಳಿ
ಮಂಗಳೂರು, ಜ.27: ಮರಕಡ ಬಳಿಯ ಮಿಲಾತ್ ನಗರ್ ಎಂಬಲ್ಲಿ ನಿನ್ನೆ ತಡರಾತ್ರಿ ಮಸೀದಿಯೊಂದಕ್ಕೆ ಕೂಲಿ ಕಾರ್ಮಿಕ ವ್ಯಕ್ತಿಯೊಬ್ಬ ಕುಡಿದು ಬಂದು ಒಳಗೆ ನುಗ್ಗಿದ್ದು, ಅಲ್ಲಿದ್ದವರನ್ನು ಅವಾಚ್ಯವಾಗಿ ನಿಂದಿಸಿ ಅಸಭ್ಯ ವರ್ತಿಸಿದ ಘಟನೆ ನಡೆದಿದೆ.
ಆರೋಪಿಯನ್ನು ಬಾಗಲಕೋಟ ಮೂಲದ ಕೂಲಿ ಕಾರ್ಮಿಕ ಹನುಮಂತು ಎಂಬಾತನೆಂದು ಪೊಲೀಸರು ಗುರುತಿಸಿದ್ದು, ವಶಕ್ಕೆ ಪಡೆದಿದ್ದಾರೆ. ನಡುರಾತ್ರಿ 1 ಗಂಟೆ ವೇಳೆಗೆ ಮಸೀದಿಯ ಒಳಕ್ಕೆ ಬಂದಿದ್ದು ಮಾನಸಿಕ ಸ್ಥಿಮಿತ ಇಲ್ಲದಂತೆ ವರ್ತಿಸಿದ್ದಾನೆ. ಕುಡಿದ ಮತ್ತಿನಲ್ಲಿ ತೂರಾಡುತ್ತಾ ಏನೇನೋ ಅವಾಚ್ಯ ಶಬ್ದಗಳಿಂದ ಮಸೀದಿ ಸಿಬಂದಿಯನ್ನು ನಿಂದಿಸಿದ್ದಾನೆ. ಮಸೀದಿ ಸಿಬಂದಿ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು, ಕಾವೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಕಾರ್ಮಿಕನನ್ನು ಎಳೆದೊಯ್ದಿದ್ದಾರೆ.
ವಿಚಾರಣೆ ನಡೆಸಿದಾಗ 20 ದಿನಗಳ ಹಿಂದೆ ಬಾಗಲಕೋಟೆಯಿಂದ ಬಂದಿದ್ದು, ಮಂಗಳೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದ. ಕಾವೂರು ಠಾಣೆಯಲ್ಲಿ ಆರೋಪಿ ವಿರುದ್ಧ ಸೆಕ್ಷನ್ 447, 295 ಮತ್ತು 295 ಎ ಅಡಿ ಪ್ರಕರಣ ದಾಖಲಿಸಲಾಗಿದೆ.
Mangalore One arrested at Kavoor for entering mosque by drinking and misbehaving.
01-10-26 10:50 pm
HK News Staffer
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
02-10-26 05:28 pm
HK News Staffer
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
ವಿಮಾನ ಅಪಘಾತದ ತನಿಖಾ ವರದಿಗಳೇ ನೆರವಾಯ್ತು..! ದುಬೈ...
01-10-26 11:46 am
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
02-10-26 05:20 pm
HK News Staffer
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
ಏಶ್ಯನ್ ಗೇಮ್ಸ್ ನಲ್ಲಿ ಪೂವಮ್ಮಗೆ ಚಿನ್ನ ; ರಾಜ್ಯ ಸರ...
01-10-26 08:10 pm
Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ...
01-10-26 06:19 pm
02-10-26 10:19 pm
HK News Staffer
ಕೊಲ್ಲೂರು ; ಬೀಡಾಡಿ ದನವನ್ನು ಕಾರಿನಲ್ಲಿ ತುಂಬಿಸಿಕೊ...
02-10-26 05:24 pm
113 ಕೆಜಿ ಚಿನ್ನ ಕಳ್ಳಸಾಗಣೆ ಕೇಸ್ ; ರನ್ಯಾ ರಾವ್ಗೆ...
01-10-26 02:31 pm
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm