ಬ್ರೇಕಿಂಗ್ ನ್ಯೂಸ್
29-01-24 02:40 pm Mangalore Correspondent ಕರಾವಳಿ
ಮಂಗಳೂರು, ಜ.29: ಪ್ರಧಾನಿ ಮೋದಿಯವರ ಜಾತಿ ಬಗ್ಗೆ ಅವಹೇಳನ ಮಾಡಿರುವ ವೀರಪ್ಪ ಮೊಯ್ಲಿ ಹಿಂದು ಸಮಾಜದ ಮುಂದೆ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದೇ ಇದ್ದರೆ ಕಾನೂನು ಕ್ರಮ ಎದುರಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದ್ದಾರೆ.
ಕದ್ರಿಯ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರ ಉಪವಾಸ ವ್ರತದ ಬಗ್ಗೆ ಮೊಯ್ಲಿಯವರು ಲಘುವಾಗಿ ಮಾತನಾಡಿದ್ದಾರೆ. ಮೋದಿಯವರು ಉಪವಾಸ ಮಾಡದೆ ಗರ್ಭಗುಡಿಗೆ ಹೋಗಿದ್ದರಿಂದ ಆ ಸ್ಥಳ ಅಪವಿತ್ರವಾಗುತ್ತದೆ, ರಾಮನ ಪ್ರತಿಷ್ಠಾಪನೆಗೆ ಮೋದಿಯವರನ್ನು ಗರ್ಭಗುಡಿಗೆ ಬಿಡಬಾರದಿತ್ತು ಎಂದು ಮೊಯ್ಲಿ ಹೇಳಿಕೆ ನೀಡಿದ್ದರು. ರಾಮಾಯಣ ದರ್ಶನಂ ರೀತಿಯ ಮಹಾಕಾವ್ಯ ಬರೆದಿರುವ ವ್ಯಕ್ತಿಯೇ ಇಂತಹ ಹೇಳಿಕೆ ನೀಡಿ, ರಾಮನ ಕುರಿತು ತನ್ನೊಳಗಿರುವ ದುರಭಿಮಾನವನ್ನು ತೋರಿಸಿದ್ದಾರೆ. ರಾಮನ ಭಕ್ತರಿಗೆ ಇದರಿಂದ ನೋವಾಗಿದೆ. ಇದು ಸಮಸ್ತ ಭಾರತೀಯರಿಗೆ ಮಾಡಿರುವ ಅವಮಾನ. ಮಾತ್ರವಲ್ಲದೆ ಹಿಂದುಳಿದ ವರ್ಗದ ಮೋದಿಯವರ ಜಾತಿಯನ್ನು ನಿಂದಿಸಿರುವುದು ಸಂವಿಧಾನ, ಕಾನೂನಿಗೆ ವಿರುದ್ಧ. ಇವರನ್ನು ಕೂಡಲೇ ಪೊಲೀಸರು ಬಂಧಿಸಬೇಕು ಎಂದಿದ್ದಾರೆ.

ಶಿಷ್ಟಾಚಾರ ಪಾಲಿಸಿ, ವ್ರತದಲ್ಲಿದ್ದವರು ಯಾವುದೇ ಜಾತಿಯಾಗಿರಲಿ, ಗರ್ಭಗುಡಿಗೆ ಹೋಗಿ ಪೂಜೆ ಮಾಡಿದರೆ ಅದು ಅಪವಿತ್ರವಾಗುವುದಿಲ್ಲ. ಬ್ರಾಹ್ಮಣರು ಅಥವಾ ಯಾವುದೋ ಒಂದು ನಿರ್ದಿಷ್ಟ ಜಾತಿಯವರು ಮಾತ್ರ ಪೂಜೆ ಮಾಡಬೇಕು ಎಂದು ಹಿಂದೂ ಸಮಾಜ ಬಯಸುವುದಿಲ್ಲ. ರಾಮ, ಕೃಷ್ಣ ದೇವರು ಕೂಡ ಬ್ರಾಹ್ಮಣರಾಗಿರಲಿಲ್ಲ. ಮಹಾಭಾರತ ಬರೆದ ವ್ಯಾಸ ಮಹರ್ಷಿ ಬೆಸ್ತ ಜನಾಂಗದವರು, ರಾಮಾಯಣ ಬರೆದ ವಾಲ್ಮೀಕಿ ಬೇಟೆಗಾರ ಜನಾಂಗಕ್ಕೆ ಸೇರಿದ್ದವರು. ಹಿಂದು ಸಮಾಜ ಜಾತಿ ನೋಡುವುದಿಲ್ಲ, ಬದಲಾಗಿ ನೀತಿ ಮಾತ್ರ ನೋಡುತ್ತದೆ. ಮೊಯ್ಲಿಯವರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಧರ್ಮ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ವಿಎಚ್‌ಪಿ ಬಲವಾಗಿ ಖಂಡಿಸುತ್ತದೆ. ಅವರು ಕೂಡಲೇ ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಮಂಡ್ಯದ ಕೆರಗೋಡು ಗ್ರಾಮದಲ್ಲಿ ರಾಮಭಕ್ತರು ಹಾರಿಸಿದ ಹನುಮಧ್ವಜವನ್ನು ಸರಕಾರ ತೆಗೆಸಿರುವುದು ಖಂಡನೀಯ. ಹನುಮಧ್ವಜ ಹಾರಿಸಲು ಅನುಮತಿ ಪಡೆಯಲಾಗಿತ್ತು. ಆದರೆ ರಾಜ್ಯ ಸರಕಾರ ಓಟು ಬ್ಯಾಂಕ್ ರಾಜಕೀಯಕ್ಕಾಗಿ ಅದನ್ನು ತೆಗೆಸಿದ್ದು ಅದೇ ಜಾಗದಲ್ಲಿ ಹನುಮಧ್ವಜ ಹಾರಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಬೀದಿ ಬೀದಿಗಳಲ್ಲಿ ಹನುಮಧ್ವಜ ಅಭಿಯಾನ ನಡೆಸಲಾಗುವುದು. ರಾಷ್ಟ್ರಧ್ವಜಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದನ್ನು ಹಾಕುವುದಕ್ಕೂ ಒಂದು ನೀತಿಸಂಹಿತೆ, ನಿಯಮವಿದೆ. ಅಧಿಕಾರಿಗಳು ಹನುಮ ಧ್ವಜ ತೆಗೆಸಿ ರಾಷ್ಟ್ರಧ್ವಜ ಹಾಕಿರುವುದು ಅವಮಾನಕರ. ಇದಕ್ಕೆ ಕಾರಣರಾದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಉಪಸ್ಥಿತರಿದ್ದರು.
Veerappa Moily should tender a public apology to the Hindu community for his derogatory remarks against Prime Minister Narendra Modi's caste. Otherwise, legal action will be taken," VHP state working president M B Puranik said.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm