ಬ್ರೇಕಿಂಗ್ ನ್ಯೂಸ್
30-01-24 10:08 pm Mangalore Correspondent ಕರಾವಳಿ
ಮಂಗಳೂರು, ಜ.30: ಇಡೀ ಜಗತ್ತಿನಲ್ಲಿ ಜನರು ಮೋದಿ ಮತ್ತು ಭಾರತವನ್ನು ಗಮನಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಈ ದೇಶದ ಭವಿಷ್ಯ ರೂಪಿಸುವ ಮಹತ್ತರ ಘಟ್ಟವಾಗಿದ್ದು, ಯಾರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂಬ ಕುತೂಹಲದಲ್ಲಿ ಇಡೀ ಜಗತ್ತು ಇದೆ. ಯಾಕಂದ್ರೆ, ವಿವೇಕಾನಂದರ ಬಳಿಕ ಭಾರತವನ್ನು ಇಡೀ ಜಗತ್ತು ಆಕರ್ಷಿಸುವಂತೆ ಮಾಡಿದ್ದು ಮೋದಿ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಸತೀಶ್ ಕುಂಪಲ ಪದಗ್ರಹಣ ಸಮಾರಂಭದಲ್ಲಿ ವಿಜಯೇಂದ್ರ ಭಾಷಣ ಮಾಡಿದರು. ದೇಶದ ಭವಿಷ್ಯ ಜನರ ಕೈಯಲ್ಲಿದೆ. ಮೋದಿ ಮೂರನೇ ಬಾರಿಗೆ ಈ ದೇಶದ ಪ್ರಧಾನಿಯಾಗುತ್ತಾರೆ. ಅದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗಂತ, ಕಾರ್ಯಕರ್ತರು ಮೈಮರೆಯುವುದು ಬೇಡ. ಪ್ರತಿ ಲೋಕಸಭೆ ಕ್ಷೇತ್ರವನ್ನೂ ಅತಿ ಹೆಚ್ಚು ಅಂತರದಿಂದ ಗೆಲ್ಲುವುದು ನಮ್ಮ ಗುರಿಯಾಗಬೇಕು. ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ನಾವು ಎದುರಿಸಲು ಸಜ್ಜಾಗಿರಬೇಕು ಎಂದು ಹೇಳಿದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ತಮ್ಮದೇ ಗೆಲುವು ಎಂದು ಬೀಗುತ್ತಿದ್ದ ಪಕ್ಷಗಳಿಗೆ ಪ್ರತ್ಯುತ್ತರ ನೀಡಿದ್ದಾರೆ. ಈಗ ದೇಶದ ಆಡಳಿತದ ಕನಸು ಕಾಣುತ್ತಿರುವ ಐಎನ್ ಡಿಐಎ ಒಕ್ಕೂಟದಲ್ಲಿ ದಿನಕ್ಕೊಂದರಂತೆ ಒಂದೊಂದೇ ದಳಗಳು ಉದುರತೊಡಗುತ್ತಿವೆ. ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸಿನಲ್ಲಿರುವ ನಾಯಕರೇ ಹೊರಬರುತ್ತಾರಾ ನೋಡಬೇಕು ಎಂದು ವ್ಯಂಗ್ಯವಾಡಿದರು.
ರಾಜ್ಯಾಧ್ಯಕ್ಷನಾಗಿ ಆದೇಶ ಬಂದ ಕೂಡಲೇ ತಂದೆಯವರು ಒಂದು ಮಾತು ಹೇಳಿದ್ದರು. ಹಿರಿಯರು ನಿನ್ನ ಮೇಲೆ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಇನ್ನು ಒಂದು ದಿನವೂ ಮನೆಯಲ್ಲಿ ಕೂರಬಾರದು, 28ಕ್ಕೆ 28 ಲೋಕಸಭೆ ಕ್ಷೇತ್ರ ಗೆಲ್ಲಬೇಕು ಎಂದಿದ್ದಾರೆ. ತಂದೆಯ ಸಂಕಲ್ಪ ಈಡೇರಿಸಲು ರಾತ್ರಿ, ಹಗಲು ಎನ್ನದೆ ಓಡಾಟ ಮಾಡುತ್ತಿದ್ದೇನೆ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ತಿಂಗಳು ಆಗಿಲ್ಲ. ಅಷ್ಟರಲ್ಲಿ ಬೆಂಗಳೂರಿನಲ್ಲಿ ಐಟಿ ದಾಳಿಯಾಗಿ 150 ಕೋಟಿ ನಗದು ಸಿಕ್ಕಿತ್ತು. ಆದರೆ ಕಾಂಗ್ರೆಸ್ ನಾಯಕರು ಅದು ಕಪ್ಪು ಹಣ, ಆರೋಪಿಗಳನ್ನು ಅರೆಸ್ಟ್ ಮಾಡಿ ಅಂತ ಹೇಳಿಲ್ಲ. ಅದರಲ್ಲೇ ಅದು ಯಾರ ಹಣ ಅನ್ನೋದು ಗೊತ್ತಾಗಿತ್ತು ಎಂದರು.
ಮಾತೆತ್ತಿದರೆ ನಾವು ದಲಿತರ ಪರ ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಒಂದು ಪ್ರಶ್ನೆ ಕೇಳುತ್ತೇನೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರು ಸತ್ತಾಗ ಶವ ಸಂಸ್ಕಾರಕ್ಕು ಜಾಗ ಕೊಡದೇ ಸತಾಯಿಸಿದ್ದು ಕಾಂಗ್ರೆಸ್. ಆದರೆ ಮೋದಿಯವರು ಲಂಡನ್ನಲ್ಲಿ ಹೋಗಿ ಅಂಬೇಡ್ಕರ್ ಇದ್ದ ಜಾಗವನ್ನು ಮ್ಯೂಸಿಯಂ ಆಗುವಂತೆ ಮಾಡಿದ್ದಾರೆ. ಗುಜರಾತ್ ಸೇರಿ ದೇಶದ ಐದು ಕಡೆ ಅಂಬೇಡ್ಕರ್ ಸಂಬಂಧಿಸಿದ ಜಾಗಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸಿಗರು ದಲಿತ ಎಂದಿದ್ದು ಬಿಟ್ಟರೆ ಮಾಡಿದ್ದೇನು ಎಂದು ಪ್ರಶ್ನಿಸಿದರು.
loksabha election 2024 will be a benchmark, world is looking at Modi says B Y Vijayendra in Mangalore.For the past 5-6 months, the whole country and other countries as well are curious about the results in the upcoming Lok Sabha elections because of Prime Minister Narendra Modi's vision. Eight months back during the elections, whether it was our mistake or people's mistake, or Congress misled people, which they were successful in, people taught a lesson to Congress.
30-05-26 06:45 pm
HK News Staffer
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ! ವಿಧಾನಸೌಧ ಮೆಟ...
29-05-26 10:41 pm
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
30-05-26 09:52 pm
HK News Desk
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
Master Travels Bus, Mangalore: ಕಾವೂರಿನಲ್ಲಿ ಬಸ...
30-05-26 02:10 pm
ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮ...
28-05-26 02:45 pm
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am