ಬ್ರೇಕಿಂಗ್ ನ್ಯೂಸ್
30-01-24 10:31 pm Mangalore Correspondent ಕರಾವಳಿ
ಮಂಗಳೂರು, ಜ.30: ಸಿದ್ದರಾಮಯ್ಯನವರ ಭಾಷೆ, ನಡವಳಿಕೆಗಳು ಬದಲಾಗಿವೆ. ಇಲ್ಲಿಯವರೆಗೆ ಅಹಿಂದ ನಾಯಕ ಅಂತಿದ್ದವರು ಈಗ ಅಲ್ಪಸಂಖ್ಯಾತ ನಾಯಕ ಆಗಿದ್ದಾರೆ. ಅವರು ಅಲ್ಪಸಂಖ್ಯಾತ ನಾಯಕ ಅಲ್ಲ ಅಂತ ಹೇಳಲಿ ನೋಡೋಣ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದ್ದಾರೆ.
ದ.ಕ ಜಿಲ್ಲಾ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಈಗೀಗ ಅವರ ಭಾಷೆ, ಸಂಸ್ಕಾರ, ನಡವಳಿಕೆಗಳು ಕೆಳಮಟ್ಟಕ್ಕೆ ಇಳಿದಿದೆ. ರಾಷ್ಟ್ರಪತಿಯವರನ್ನೇ ಏಕ ವಚನದಲ್ಲಿ ಕರೆದ ಮೊದಲ ರಾಜಕಾರಣಿ ಇವರು. ನಾವು, ಇಡೀ ದೇಶ ಅತ್ಯಂತ ಗೌರವಿಸುವ ವ್ಯಕ್ತಿಗಳನ್ನು ಏಕವಚನದಲ್ಲಿ ಕರೀತಿನಿ ಅಂತ ಸಿದ್ದರಾಮಯ್ಯ ಹೇಳ್ತಿದಾರೆ. ಹಾಗಾದರೆ ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನ ಏಕವಚನದಲ್ಲಿ ಕರೆದಿದ್ದೀರಾ? ಯಾವತ್ತಾದ್ರೂ ಅವರನ್ನು ಏಕವಚನದಲ್ಲಿ ಕರೆಯೋ ಧೈರ್ಯ ಮಾಡಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಮಂಡ್ಯದಲ್ಲಿ ಭಗವಾಧ್ವಜ ಅನ್ನೋ ಒಂದೇ ಕಾರಣಕ್ಕೆ ಸರ್ಕಾರ ಅದನ್ನು ಕೆಳಗಿಳಿಸಿತ್ತು. ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆ ಹನುಮ ಭಕ್ತರು ಮತ್ತು ಟಿಪ್ಪು ಭಕ್ತರ ನಡುವಿನ ಚುನಾವಣೆ ಎನ್ನುತ್ತೇನೆ. ರಾಜ್ಯದಲ್ಲಿ ಹನುಮ ಭಕ್ತರು ಮತ್ತು ಟಿಪ್ಪು ಭಕ್ತರಲ್ಲಿ ರಾಮಭಕ್ತರೇ ಗೆಲ್ಲಲಿದ್ದಾರೆ. ರಾಮನ ಆಶೀರ್ವಾದದಿಂದ ಬಿಜೆಪಿ ಈ ಬಾರಿ ಮತ್ತೆ ಗೆಲ್ಲಲಿದೆ.
ಸಿದ್ದರಾಮಯ್ಯ ಅವರು ಕಾಂತರಾಜು ಆಯೋಗದ ವರದಿ ಸ್ವೀಕರಿಸುತ್ತೇವೆಂದು ಹೇಳಲು ಸರ್ಕಾರಿ ಖರ್ಚಿನಲ್ಲಿ ಸಮಾವೇಶ ಮಾಡಬೇಕಿತ್ತೇ.. ಜಾತಿ ಗಣತಿ ವರದಿಯನ್ನು ಚುನಾವಣೆಗೆ ಮೊದಲು ಬಿಡುಗಡೆ ಮಾಡಲ್ಲ. ಸಮಿತಿಯ ಅಧಿಕಾರವನ್ನು ಈಗ ಒಂದು ತಿಂಗಳು ವಿಸ್ತರಿಸಿದ್ದಾರೆ. ಇನ್ನೊಂದು ತಿಂಗಳಲ್ಲಿ ಚುನಾವಣೆ ಘೋಷಣೆ ಆಗತ್ತೆ. ಆನಂತರ ಚುನಾವಣೆ ಘೋಷಣೆ ಆಯ್ತು,ನೀತಿ ಸಂಹಿತೆ ಇದೆಯೆಂದು ಹೇಳ್ತಾರೆ ಎಂದು ಅಣಕಿಸಿದರು.


ದೂರುಗಳಿದ್ದರೆ ನನಗೇ ನೇರವಾಗಿ ಹೇಳಿ, ಅಭ್ಯರ್ಥಿ ಯಾರೆಂದು ಬೇಕಿಲ್ಲ, ಚುನಾವಣೆಗೆ ಸಿದ್ಧರಾಗಿ
ನೂತನ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸತೀಶ್ ಕುಂಪಲ, ಬೂತ್ ಮಟ್ಟದಿಂದಲೂ ಕಾರ್ಯದರ್ಶಿ ಆಗಿಯೇ ಬಂದವನು. ಮೂರು ಬಾರಿ ಜಿಲ್ಲಾ ಕಾರ್ಯದರ್ಶಿ ಆಗಿದ್ದೆ, ಮಂಡಲ ಕಾರ್ಯದರ್ಶಿಯೂ ಆಗಿದ್ದೆ. ಈ ನಡುವೆ, ರಾಜಕೀಯ ಭವಿಷ್ಯವೇ ಮುಗಿದು ಹೋಯ್ತು ಅಂದ್ಕೊಂಡಿದ್ದೆ. ನಾನು ಯಾವತ್ತೂ ಮೇಲೆ ಕುಳಿತವನಲ್ಲ. ಕೆಳಗೆ ಕುಳಿತೇ ನನಗೆ ಅಭ್ಯಾಸ. ಅಧ್ಯಕ್ಷನಾದ್ರೂ ಅಹಂ ಇಲ್ಲ. ಯಾರಿಗೇ ಆದ್ರು ತೊಂದರೆಯಾದ್ರೆ ನನಗೆ ನೇರವಾಗಿ ಹೇಳಿ, ಯಾರಿಗೂ ಮುಜುಗರ ಬೇಕಿಲ್ಲ ಎಂದರು.

ಜಿಲ್ಲೆಯ ಜವಾಬ್ದಾರಿ 21 ಜನರಿಗೆ ಮಾತ್ರ ಕೊಡಲು ಸಾಧ್ಯ. 300 ಜನರಿಗೂ ಕೊಡಬೇಕು ಎಂಬ ಮನಸ್ಸಿದೆ. ಎಲ್ಲರೂ ಜವಾಬ್ದಾರಿ ಪಡೆಯಲು ಆಸಕ್ತರಿದ್ದಾರೆ. ಅದರೆ ಕೊಡೋದು ಹೇಗೆ ಸಾಧ್ಯ. ಈಗ ನಮ್ಮ ಮುಂದಿರುವುದು ಲೋಕಸಭೆ ಚುನಾವಣೆ. ಅಭ್ಯರ್ಥಿ ಯಾರೆಂದು ನಮಗೆ ಬೇಕಿಲ್ಲ. ಬಿಜೆಪಿ ಗೆಲ್ಲಿಸುವುದಷ್ಟೆ ನಮ್ಮ ಗುರಿ. ಕಳೆದ ಬಾರಿ 2.70 ಲಕ್ಷ ಮತಗಳಿಂದ ಗೆದ್ದಿರುವುದನ್ನು ಈ ಸಲ 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಬೇಕು. ಅದನ್ನು ನಮ್ಮ ನೂತನ ರಾಜ್ಯಾಧ್ಯಕ್ಷರಿಗೆ ಅರ್ಪಣೆ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಮಾಜಿ ಶಾಸಕರು ಉಪಸ್ಥಿತರಿದ್ದರು. ಬಹುಕಾಲದಿಂದ ದೂರವೇ ಉಳಿದಿದ್ದ ಕೃಷ್ಣ ಪಾಲೆಮಾರ್, ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ ಸೇರಿದಂತೆ ಹಿರಿ - ಕಿರಿಯ ನಾಯಕರೆಲ್ಲ ಸಭೆಗೆ ಬಂದಿದ್ದರು. ಅಡ್ಯಾರ್ ಗಾರ್ಡನ್ ಸಭಾಂಗಣ ತುಂಬಿ ತುಳುಕಿತ್ತು. ಯುವ ಕಾರ್ಯಕರ್ತರು ತಮ್ಮ ನಾಯಕರ ಹೆಸರು ಬಂದಾಗ ಜೈಕಾರ ಕೂಗಿದರು.
ಸಭೆಯಲ್ಲಿ ಬೃಜೇಶ್ ಚೌಟ ಪರ ಸಿಳ್ಳೆ, ಜೈಕಾರ
ಸಭೆಯಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಮಾಜಿ ಶಾಸಕರು ಉಪಸ್ಥಿತರಿದ್ದರು. ಕೆಲವು ಸಮಯದಿಂದ ಜಿಲ್ಲಾ ಬಿಜೆಪಿಯಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಕೃಷ್ಣ ಪಾಲೆಮಾರ್, ನಾಗರಾಜ ಶೆಟ್ಟಿ, ಮೋನಪ್ಪ ಭಂಡಾರಿ ಸೇರಿದಂತೆ ಹಿರಿ - ಕಿರಿಯ ನಾಯಕರೆಲ್ಲ ಸಭೆಗೆ ಬಂದಿದ್ದರು. ರಾಜ್ಯ ಕಾರ್ಯದರ್ಶಿ ಬೃಜೇಶ್ ಚೌಟ, ಶರಣ್ ಪಲ್ಲಿಕೇರಿ, ರಾಜ್ಯ ಮಾಧ್ಯಮ ವಿಭಾಗದ ಸಹ ಸಂಚಾಲಕ ಪ್ರಶಾಂತ್ ಕಡೆಂಜ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆವಿ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ನಡುವೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಮಾಜಿ ಸಚಿವ ಅಶ್ವತ್ಥ ನಾರಾಯಣ ಬಂದು ಕೆಲಹೊತ್ತು ಇದ್ದು ಅರ್ಧದಲ್ಲೇ ನಿರ್ಗಮಿಸಿದರು. ಅಡ್ಯಾರ್ ಗಾರ್ಡನ್ ಸಭಾಂಗಣ ಕಾರ್ಯಕರ್ತರಿಂದ ತುಂಬಿ ತುಳುಕಿತ್ತು. ಸಭೆಯಲ್ಲಿ ರಾಜ್ಯ ನಾಯಕರು ರಾಜ್ಯ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ ಹೆಸರೇಳುತ್ತಿದ್ದಂತೆ ಮಂಗಳೂರಿನ ಯುವ ಕಾರ್ಯಕರ್ತರು ಜೈಕಾರ ಕೂಗಿದರು. ನಳಿನ್ ಕುಮಾರ್ ಮತ್ತು ಸತೀಶ್ ಕುಂಪಲ ಅವರು ತಮ್ಮ ಮಾತಿನ ಮಧ್ಯೆ ಬೃಜೇಶ್ ಚೌಟ ಅವರ ಹೆಸರೆತ್ತಿದಾಗ ಕಾರ್ಯಕರ್ತರು ಸಿಳ್ಳೆ, ಚಪ್ಪಾಳೆ ಹಾಕಿ ರಾಜ್ಯ ನಾಯಕರ ಗಮನಸೆಳೆದಿದ್ದಾರೆ.
Siddaramaiah's language and behaviour have changed. Those who were hitherto an Ahinda leader are now a minority leader. Let's see if he says he is not a minority leader," said Kota Srinivas Poojary, leader of opposition in the Legislative Council.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm