ಬ್ರೇಕಿಂಗ್ ನ್ಯೂಸ್
10-02-24 08:22 pm Mangalore Correspondent ಕರಾವಳಿ
ಉಳ್ಳಾಲ, ಫೆ.10: ಕನಸು ನನಸಾಗಲು ಪ್ರಯತ್ನ ಬೇಕು. ಬಡವನಾಗಿ ಹುಟ್ಟಬಹುದು ಬಡವನಾಗಿಯೇ ಸಾಯಬೇಕೆಂದೇನಿಲ್ಲ, ಮಕ್ಕಳು ಉತ್ತಮ ಶಿಕ್ಷಣ ಪಡೆದರಷ್ಟೇ ಕುಟುಂಬದ ಸಮಸ್ಯೆಗಳನ್ನ ಪರಿಹರಿಸಲು ಸಾಧ್ಯ. ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಸಲುವಾಗಿ ಕಿನ್ಯಾ ಗ್ರಾಮವೊಂದಕ್ಕೆ ಶಿಕ್ಷಣಕ್ಕಾಗಿ 80 ಲಕ್ಷ ರೂ. ಮೀಸಲಿಟ್ಟಿರುವುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಕಿನ್ಯ ಗ್ರಾಮದ ಬೆಳರಿಂಗೆ ಪ್ರಾಥಮಿಕ ಶಾಲೆಗೆ ವಿವೇಕ ಶಾಲಾ ಯೋಜನೆಯಡಿ ನಿರ್ಮಾಣಗೊಂಡ ಸುಸಜ್ಜಿತ ನೂತನ ಕಟ್ಟಡವನ್ನ ಅವರು ಉದ್ಘಾಟಿಸಿದರು. 2022ರ ಮೇ ತಿಂಗಳಲ್ಲಿ ಸುರಿದ ಮೊದಲ ಧಾರಾಕಾರ ಮಳೆಗೆ ಬೆಳರಿಂಗೆ ಪ್ರಾಥಮಿಕ ಶಾಲೆಯ ಹಂಚಿನ ಛಾವಣಿಯ ಕಟ್ಟಡವು ಧರೆಗುರುಳಿತ್ತು. ಶಾಲಾರಂಭದ ಹಿಂದಿನ ರಾತ್ರಿ ಘಟನೆ ನಡೆದುದರಿಂದ ಗಂಡಾಂತರ ತಪ್ಪಿತ್ತು. ಕಟ್ಟಡ ಶಿಥಿಲಗೊಂಡಿದ್ದರೂ ಅಧಿಕಾರಿಗಳ ಅಸಡ್ಡೆಯಿಂದ ಘಟನೆ ಸಂಭವಿಸಿದ್ದು ಭಾರೀ ಜನಾಕ್ರೋಶ ಉಂಟಾಗಿತ್ತು. ಪಕ್ಕದ ಮದರಸದ ಕೊಠಡಿಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು.










ಸ್ಥಳೀಯ ಶಾಸಕ ಯು.ಟಿ ಖಾದರ್ ಮುತುವರ್ಜಿಯಲ್ಲಿ ಇದೀಗ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾಗಿದೆ. ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಖಾದರ್, ನಮ್ಮ ಕುಟುಂಬದ ಸಮಸ್ಯೆಗಳನ್ನ ಸರಕಾರ ಪರಿಹರಿಸಲು ಸಾಧ್ಯವಿಲ್ಲ. ಮನೆಯ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಹೆತ್ತವರ ಕನಸನ್ನ ನನಸು ಮಾಡಿದಾಗಲೇ ಕುಟುಂಬದ ಸಮಸ್ಯೆ ಪರಿಹಾರ ಆಗಲು ಸಾಧ್ಯ. ಕಿನ್ಯ ಗ್ರಾಮವೊಂದಕ್ಕೆ ಶಿಕ್ಷಣಕ್ಕಾಗಿ 80 ಲಕ್ಷ ಅನುದಾನ ಮೀಸಲಿಟ್ಟಿದ್ದು ವಿದ್ಯಾರ್ಥಿಗಳು ಯೋಜನೆಗಳ ಸದುಪಯೋಗ ಪಡೆಯಬೇಕೆಂದರು.
ಕೇವಲ ಎಂಟು ತಿಂಗಳಲ್ಲೇ ಬೆಳರಿಂಗೆ ಶಾಲೆಗೆ ಈ ರೀತಿಯ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲು ಜನರು ಕೊಟ್ಟ ಮತಗಳೇ ಕಾರಣ. ಶಾಲೆಗೆ ಅಂಗನವಾಡಿ ಕಟ್ಟಡ, ಆವರಣ ಗೋಡೆಯನ್ನ ಶೀಘ್ರ ನಿರ್ಮಿಸಲಾಗುವುದೆಂದರು. ಕಿನ್ಯಾ ಗ್ರಾಮದ ಮೀನಾದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಸ್ಪೀಕರ್ ಖಾದರ್ ಉದ್ಘಾಟಿಸಿದರು. ಕಿನ್ಯ ಗ್ರಾಮದ ಉಕ್ಕುಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೂ ಶಿಲಾನ್ಯಾಸಗೈದರು. ಕಿನ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷರಾದ ಫಾರೂಕ್ ಕಿನ್ಯ, ಮಾಜಿ ಅಧ್ಯಕ್ಷ ಸಿರಾಜ್ ಕಿನ್ಯ, ಪಿಡಿಒ ತುಳಸಿ, ಕೆಡಿಪಿ ಸದಸ್ಯರಾದ ಹಮೀದ್ ಕಿನ್ಯ, ಕಾಂಗ್ರೆಸ್ ಮುಖಂಡ ಎನ್.ಎಸ್ ಕರೀಂ ಮೊದಲಾದವರು ಉಪಸ್ಥಿತರಿದ್ದರು.
In order to give more thrust to education, a sum of Rs 80 lakh has been sanctioned to the school that was collapsed at Kinya for education. Assembly Speaker U T Khader said the reservation was made.
23-07-26 08:05 pm
HK News Desk
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
24-07-26 03:25 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
ಮೋದಿ ಮೌನ ಹೊಸದೇನಲ್ಲ, 'ನಾವು ತಪ್ಪು ಮಾಡಿದ್ದೇವೆ' ಎ...
23-07-26 05:57 pm
ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ;...
23-07-26 05:48 pm
23-07-26 10:27 pm
Mangaluru Staffer
ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ದೇಶದ ಭವಿಷ್ಯದ ಮೇಲಿನ...
22-07-26 09:18 pm
2,000 ರೂ. ಆಸೆಗೆ ಬಿದ್ದು ಬ್ಯಾಂಕ್ ಅಕೌಂಟ್ ಹಸ್ತಾಂತ...
21-07-26 11:02 pm
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
24-07-26 03:03 pm
HK News Staffer
14 ವರ್ಷಗಳ ಹಿಂದೆ ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್...
24-07-26 02:18 pm
ಸುಳ್ಯದಲ್ಲಿ ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ...
22-07-26 10:24 pm
ಎಸ್ಐಆರ್ ಪರಿಷ್ಕರಣೆ ನೆಪದಲ್ಲಿ ಎಪಿಕೆ ಫೈಲ್ ಕಳುಹಿಸಿ...
22-07-26 09:03 pm
ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ...
22-07-26 07:37 pm