ಶಾಸಕರು ಸಚಿವರಾಗಲು ಬಯಸುವುದು ತಪ್ಪಲ್ಲ ; ಡಿಸಿಎಂ ಅಶ್ವತ್ಥ ನಾರಾಯಣ

28-11-20 01:52 pm       Mangalore Correspondent   ಕರಾವಳಿ

ಸಂಪುಟ ವಿಸ್ತರಣೆ ಮಾಡುವುದು, ಅಪೇಕ್ಷಿತರನ್ನು ಸೇರಿಸಿಕೊಳ್ಳುವುದು ಮುಖ್ಯಮಂತ್ರಿಗಳ ಪರಾಮಾಧಿಕಾರ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಮಂಗಳೂರು, ನ.28 : ಸಂಪುಟ ವಿಸ್ತರಣೆ ಮಾಡುವುದು, ಅಪೇಕ್ಷಿತರನ್ನು ಸೇರಿಸಿಕೊಳ್ಳುವುದು ಮುಖ್ಯಮಂತ್ರಿಗಳ ಪರಾಮಾಧಿಕಾರ. ಹಾಗೆಂದು ಶಾಸಕರು ಸಚಿವರಾಗಬೇಕೆಂದು ಬಯಸುವುದು ತಪ್ಪಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕೆಲವು ಶಾಸಕರು ಸಚಿವ ಸ್ಥಾನಕ್ಕಾಗಿ ರಹಸ್ಯ ಸಭೆ ನಡೆಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಅಲ್ಲದೆ,  ಯಾರು ಸಚಿವರಾಗಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಅಶ್ವತ್ಥ ಹೇಳಿದರು. 

ಇದೇ ವೇಳೆ, ಡಿಸಿಎಂ ಮಾತಿಗೆ ದನಿಗೂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಶಾಸಕರು ಸಚಿವರಾಗಲು ಬಯಸುವುದು ತಪ್ಪಲ್ಲ. ರಾಜಕಾರಣದಲ್ಲಿ ಅಪೇಕ್ಷೆ ಮತ್ತು ಗುರಿ ಇರಬೇಕು. ಆದರೆ, ಸಚಿವ ಸ್ಥಾನ ಕೊಡೋದು ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು.‌ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ರೀತಿಯ ಚರ್ಚೆಯಾಗಿಲ್ಲ. ಯಾವುದೇ ನಾಯಕರು ಈ ಬಗ್ಗೆ ಚರ್ಚೆ ನಡೆಸಿದ್ದು , ಪ್ರಶ್ನೆ ಮಾಡಿದ್ದು ಇಲ್ಲ.

ನಾಲ್ಕು ತಿಂಗಳಿನಿಂದ ನಾಯಕತ್ವದ ಬದಲಾವಣೆ ಇಲ್ಲ ಇಂತಹ ಪ್ರಶ್ನೆಗಳು ಬರುತ್ತಲೇ ಇದ್ದು ಪ್ರತಿ ಬಾರಿ ಸ್ಪಷ್ಟಪಡಿಸುತ್ತಲೇ ಇದ್ದೇನೆ. ಈ ರೀತಿಯ ಯಾವುದೇ ಚರ್ಚೆಗಳು ದೆಹಲಿ ಮಟ್ಟದಲ್ಲೂ ಯಾವುದೇ ನಾಯಕರಿಂದಲೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ‌

ಇನ್ನು ಲಿಂಗಾಯಿತರಿಗೆ ಮೀಸಲಾತಿ ವಿಚಾರಕ್ಕೆ ಜಯಮೃತ್ಯಂಜಯ ಸ್ವಾಮೀಜಿ ಡೆಡ್ ಲೈನ್ ಹಾಕಿರುವ ಪ್ರಶ್ನೆಗೆ, ಈ ಸಮಸ್ಯೆ ನಿನ್ನೆಗೆ ಬಗೆಹರಿದಿದೆ. ಸಿಎಂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ತೆರೆ ಎಳೆದರು.

MLA'S Evolving as Ministers is not a trouble states Dcm Ashwath Narayan in the press meet held at Mangalore BJP office here on November 28, Saturday, 2020.