ಬ್ರೇಕಿಂಗ್ ನ್ಯೂಸ್
28-11-20 08:00 pm Mangaluru Crime Correspondent ಕರಾವಳಿ
ಮಂಗಳೂರು, ನವೆಂಬರ್ 28: ಕೈಕಂಬದಲ್ಲಿ ಎಸ್ಸೆಸ್ಸೆಫ್ ಮುಖಂಡರಾಗಿದ್ದ ವೆನ್ಝ್ ಅಬ್ದುಲ್ಲಾರನ್ನು ಕಂದಾವರ ಮಸೀದಿ ಆವರಣದಲ್ಲೇ ಮುಗಿಸಲು ಪ್ಲಾನ್ ನಡೆದಿತ್ತು. ಆದರೆ, ಸ್ವಲ್ಪದರಲ್ಲೇ ಅಬ್ದುಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದರು. ನ.15ರಂದು ರಾತ್ರಿ ಈ ಘಟನೆ ನಡೆದಿದ್ದರೆ, ವಾರದ ಅಂತರದಲ್ಲಿ ಮಂಗಳೂರಿನ ಯುನಿಟಿ ಆಸ್ಪತ್ರೆ ಮುಂಭಾಗದಲ್ಲಿ ಅಬ್ದುಲ್ಲಾ ಅಳಿಯನ ಮೇಲೆ ತಲವಾರು ಬೀಸಲಾಗಿತ್ತು. ಅಬ್ದುಲ್ಲಾರನ್ನು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದ ನೌಶಾದ್, ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು.
ಅಬ್ದುಲ್ಲಾ ಮೇಲೆ ದಾಳಿ ನಡೆದು 15 ದಿನಗಳಾಗುತ್ತಿದ್ದರೆ, ನೌಶಾದ್ ಮೇಲಿನ ದಾಳಿಯಾಗಿ ವಾರ ಕಳೆಯುತ್ತಾ ಬಂತು. ಮಂಗಳೂರಿನ ಕದ್ರಿ ಮತ್ತು ಬಜ್ಪೆ ಠಾಣೆಯಲ್ಲೆ ಎರಡೂ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾಗಿ ಹೇಳುತ್ತಲೇ ಬಂದಿದ್ದಾರೆ. ಬಿಜೆಪಿ ಕಾರ್ಯಕರ್ತರೂ ಆಗಿರುವ ವೆನ್ಝ್ ಅಬ್ದುಲ್ಲಾ ಅಜೀಜ್, ಕೈಕಂಬ, ಕಂದಾವರ ಪರಿಸರದಲ್ಲಿ ಜನಪ್ರಿಯ ವ್ಯಕ್ತಿ. ಮುಸ್ಲಿಮರಿಗೂ, ಹಿಂದುಗಳಿಗೂ ಜನಸ್ನೇಹಿಯಾಗಿದ್ದವರು. ಅಬ್ದುಲ್ಲಾ ಅಂದು ರಾತ್ರಿ ಕಂದಾವರ ಮಸೀದಿಯಿಂದ ನಮಾಜ್ ಮುಗಿಸಿ ಹೊರಬರುತ್ತಿದ್ದಂತೆ ಇಬ್ಬರು ಬಂದು ತಲವಾರು ಹಾಕಿದ್ದರು. ತಲೆ, ಕಾಲು, ತೊಡೆಯ ಭಾಗಕ್ಕೆ ಗಾಯಗೊಂಡಿದ್ದ ಅಬ್ದುಲ್ಲಾ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಘಟನೆ ಬಗ್ಗೆ ಬಜ್ಪೆ ಪೊಲೀಸರಿಗೆ, ಮಸೀದಿ ಕಮಿಟಿಯಲ್ಲಿರುವ ಎಂಟು ಮಂದಿಯ ಬಗ್ಗೆ ಸಂಶಯ ಇರುವುದಾಗಿ ದೂರಿನಲ್ಲಿ ಹೇಳಿದ್ದರು. ಆದರೆ, ಈವರೆಗೂ ಬಜ್ಪೆ ಪೊಲೀಸರು ಪ್ರಕರಣದಲ್ಲಿ ಯಾವುದೇ ಆರೋಪಿಯನ್ನು ಬಂಧಿಸಲು ಮುಂದಾಗಿಲ್ಲ. ಕೃತ್ಯದ ದೃಶ್ಯ ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದರೂ, ಪೊಲೀಸರಿಗೆ ಆರೋಪಿಗಳ ಪತ್ತೆ ಕಾರ್ಯ ಸಾಧ್ಯವಾಗಿಲ್ಲ.
ಈ ನಡುವೆ, ಆರೋಪಿಗಳನ್ನು ಬಂಧಿಸಲು ಮುಂದಾಗದ ಪೊಲೀಸರ ಬಗ್ಗೆ ಅಸಮಾಧಾನಗೊಂಡ ಅಬ್ದುಲ್ಲಾ ಪರ ಇರುವ ಗುಂಪು ವಾರದ ಹಿಂದೆ ಪ್ರತಿಭಟನೆಗೆ ತಯಾರಿ ನಡೆಸಿತ್ತು. ಬಳಿಕ ಎಸಿಪಿ ಬೆಳ್ಳಿಯಪ್ಪ ಎಸ್ಸೆಸ್ಸೆಫ್ ಪ್ರಮುಖರನ್ನು ಕರೆದು ಸಮಾಧಾನ ಮಾಡಿದ್ದೂ ಆಗಿತ್ತು.
ಘಟನೆ ಬಗ್ಗೆ ಬಜ್ಪೆ ಸರ್ಕಲ್ ಬಳಿ ಕೇಳಿದರೆ, ನಾವು ಮಸೀದಿ ಕಮಿಟಿಯವರನ್ನು ವಿಚಾರಣೆ ಮಾಡಿದ್ದೇವೆ. ಅವರೇನು ಕೃತ್ಯ ಮಾಡಿದ್ದಲ್ಲ. ಅದರಲ್ಲಿ ಬೇರೆಯದ್ದೇ ಕೈವಾಡ ಇದೆ. ನಾವು ತನಿಖೆ ಮಾಡುತ್ತಿದ್ದೇವೆ. ಮಂಗಳೂರಿನಲ್ಲಿ ಆಗಿರುವ ಘಟನೆಗೂ ಇದಕ್ಕೂ ಲಿಂಕ್ ಇದೆ ಎಂದು ಹೇಳಿದ್ದಾರೆ.
SKSSF - SSF ಪ್ರತಿಷ್ಠೆಯ ತಿಕ್ಕಾಟ:
ವೆನ್ಝ್ ಅಬ್ದುಲ್ಲಾ ಎಸ್ಸೆಸ್ಸೆಫ್ ಸಂಘಟನೆಯ ಮುಖಂಡರು. ಕಂದಾವರ, ಬೈಲುಪೇಟೆ ಸೇರಿ ಕೈಕಂಬ ಆಸುಪಾಸಿನಲ್ಲಿ ಎಸ್ಸೆಸ್ಸೆಫ್ ಬೆಂಬಲಿತರು ಇದ್ದಾರೆ. ಎಸ್ಕೆಎಸ್ಸೆಫ್ ಬೆಂಬಲಿತ ಗುಂಪುಗಳೂ ಇವೆ. 2016ರ ಬಳಿಕ ಇವೆರಡು ಗುಂಪುಗಳ ಮಧ್ಯೆ ತಿಕ್ಕಾಟ ಏರ್ಪಟ್ಟಿದೆ. ಜಕರಿಯಾ ಎಂಬ ಇನ್ನೊಬ್ಬರು ಎಸ್ಕೆಎಸ್ಸೆಫ್ ಸಂಘಟನೆಯ ಸ್ಥಳೀಯ ನಾಯಕರಾಗಿದ್ದು, ತಾವು ಹೋದ ಮಸೀದಿಗಳಲ್ಲಿ ತಮ್ಮದೇ ಸಂಘಟನೆ ಸ್ಥಾಪಿಸಲು ಪ್ರಯತ್ನ ನಡೆಸುತ್ತಿದ್ದಾರೆಂಬ ಆರೋಪ ಇದೆ. ಇದಕ್ಕೆ ವೆನ್ಝ್ ಅಬ್ಬುಲ್ಲಾ ಮತ್ತು ತಂಡ ವಿರೋಧಿಸುತ್ತ ಬಂದಿದ್ದರು. 2016ರಲ್ಲಿ ಬೈಲುಪೇಟೆ ಮಸೀದಿ ಅಭಿವೃದ್ಧಿ ಮತ್ತು ಉರೂಸ್ ಉತ್ಸವಕ್ಕೆಂದು ವಕ್ಫ್ ಮತ್ತು ವಿವಿಧ ಇಲಾಖೆಗಳಿಂದ 97 ಲಕ್ಷ ರೂ. ಬಂದಿತ್ತು. ಆದರೆ, ಅದೇ ಸಂದರ್ಭದಲ್ಲಿ ಅಬ್ದುಲ್ಲಾ ಮತ್ತು ಜಕರಿಯಾ ನಡುವೆ ತಿಕ್ಕಾಟ ಏರ್ಪಟ್ಟಿತ್ತು.
ಮಸೀದಿ ಪುಸ್ತಕವನ್ನು ಪೋರ್ಜರಿ ಮಾಡಿದ್ದಾಗಿ ಮಸೀದಿ ಕಮಿಟಿಯ ಅಧ್ಯಕ್ಷ ಜಕರಿಯಾ ಮತ್ತು ಪದಾಧಿಕಾರಿಗಳ ವಿರುದ್ಧ ಅಬ್ದುಲ್ಲಾ ಬಜ್ಪೆ ಠಾಣೆಗೆ ದೂರು ನೀಡಿದ್ದರು. ಇದೇ ವಿಚಾರ ಮುಂದಿಟ್ಟು ಅಬ್ದುಲ್ಲಾ ವಕ್ಫ್ ಇಲಾಖೆ, ಜಿಲ್ಲಾಡಳಿತ ಸೇರಿ ವಿವಿಧ ಇಲಾಖೆಗಳಿಗೆ ದೂರು ನೀಡಿದ್ದರು. ಅಲ್ಲದೆ, ವಕ್ಫ್ ಇಲಾಖೆಗೆ ದೂರು ನೀಡಿ, ಮಸೀದಿಗೆ ಬಂದಿದ್ದ 97 ಲಕ್ಷ ರೂ. ಅನುದಾನಕ್ಕೂ ತಡೆ ಹಾಕಿದ್ದರು ಎನ್ನಲಾಗುತ್ತಿದೆ. ಇದೇ ವಿಚಾರ ಎರಡು ಬಣಗಳ ನಡುವೆ ತಿಕ್ಕಾಟ ಏರ್ಪಟ್ಟು ಬಜ್ಪೆ ಠಾಣೆಯಲ್ಲಿ ದೂರು- ಪ್ರತಿದೂರು ಆಗುವಂತಾಗಿತ್ತು. ಹೀಗೆ ಶುರುವಾಗಿದ್ದ ತಿಕ್ಕಾಟವೇ ಇದೀಗ ಕೊಲೆಯತ್ನಕ್ಕೆ ಕಾರಣ ಎನ್ನುವ ಮಾತನ್ನು ಅಬ್ದುಲ್ಲಾ ಹೇಳುತ್ತಿದ್ದಾರೆ.
ಈ ನಡುವೆ, ಅಬ್ದುಲ್ಲಾ ಸಂಬಂಧಿಕರ ಮಧ್ಯೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಹತ್ತಿರದ ಸಂಬಂಧಿಕರಾದ ದುಬೈನಲ್ಲಿರುವ ನಿಜಾಮ್ ಮತ್ತು ಮಗ್ದುಮ್ ನಡುವಿನ ವೈಮನಸ್ಸನ್ನು ಬಿಡಿಸಲು ಹೋಗಿದ್ದ ಅಬ್ದುಲ್ಲಾ ಮೇಲೆಯೇ ಈಗ ಕೆಲವರು ತಿರುಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಹಣದ ವಿಚಾರದ ದ್ವೇಷವೋ, ಮಸೀದಿ ಕಮಿಟಿಯೊಳಗಿನ ಸಂಘರ್ಷವೋ ಒಂದೇ ತಾಯ ಮಕ್ಕಳಂತಿದ್ದವರ ನಡುವೆ ದ್ವೇಷ ಹುಟ್ಟಿಕೊಂಡಿದೆ. ಒಂದು ಕ್ಷಣದ ದ್ವೇಷದಲ್ಲಿ ಪ್ರಾಣವನ್ನೇ ತೆಗೆಯಲು ಮುಂದಾಗುತ್ತಿದ್ದಾರೆ. ಮಂಗಳೂರಿನ ನಡುಬೀದಿಯಲ್ಲಿ ತಲವಾರು ಹಿಡಿದು ರಾಜಾರೋಷವಾಗೇ ಕಡಿದು ಹಾಕುವ ಹಂತಕ್ಕೆ ಮುಂದಾಗಿದ್ದಾರೆ.
ಇವೆಲ್ಲ ನಡೀತಿದ್ದರೂ, ಪೊಲೀಸರು ಇದನ್ನು ನೋಡಿ ಮೌನವಾಗಿರುವುದೇ ಭಾರೀ ಸಂಶಯಕ್ಕೆ ಕಾರಣವಾಗಿದೆ. ಆರೋಪಿಗಳ ಕಡೆಯಿಂದ ಪೊಲೀಸರ ಮೇಲೆ ದೊಡ್ಡ ಮಟ್ಟದ ಒತ್ತಡ ಬಿದ್ದಿದೆಯಾ ಎನ್ನುವ ಅನುಮಾನವನ್ನು ಗಾಯಾಳುಗಳ ಸಂಬಂಧಿಕರು ವ್ಯಕ್ತ ಮಾಡುತ್ತಿದ್ದಾರೆ.
A detailed Crime report by Headline Karnataka on the Murder attack of Businessman Abdul Azeez (59) by unidentified assailants at kandavara, Bajpe, Mangalore.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm