ಬ್ರೇಕಿಂಗ್ ನ್ಯೂಸ್
01-04-24 02:09 pm Mangalore Correspondent ಕರಾವಳಿ
ಮಂಗಳೂರು, ಎ.1: ಮುಡಿಪು ಪೇಟೆಯ ರಾಜ್ಯ ಹೆದ್ದಾರಿಯನ್ನೇ ತಡೆದು ಇಫ್ತಾರ್ ಕೂಟ ಆಯೋಜಿಸಿದ ಬಗ್ಗೆ ತೀವ್ರ ಆಕ್ಷೇಪ ಕೇಳಿಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಇಫ್ತಾರ್ ಆಯೋಜಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಮೊನ್ನೆ ಶುಕ್ರವಾರ ಸಂಜೆ ಮುಡಿಪುವಿನ ಆಟೋ ಚಾಲಕರ ಸಂಘ, ರಾಜಕನ್ಮಾರ್ ಸಂಘಟನೆ ವತಿಯಿಂದ ರಸ್ತೆ ಬಂದ್ ಮಾಡಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಇಫ್ತಾರ್ ಕೂಟದಲ್ಲಿ ಹಿಂದುಗಳು ಸೇರಿ ಎಲ್ಲ ಸಮುದಾಯದವರು ಪಾಲ್ಗೊಂಡಿದ್ದರು. ರಸ್ತೆಯನ್ನು ಬಂದ್ ಮಾಡಿ ರಂಜಾನ್ ಹಿನ್ನೆಲೆಯಲ್ಲಿ ಇಫ್ತಾರ್ ಮಾಡಿರುವ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಜಾಲತಾಣದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.
ರಸ್ತೆ ಮಧ್ಯೆ ಸಹ ಭೋಜನ ಮಾಡಿದ್ದರಿಂದ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹಿಂದು ಜಾಗರಣ ವೇದಿಕೆಯವರು ಸಹಾಯಕ ಚುನಾವಣಾ ಅಧಿಕಾರಿ, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಅವರಿಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಇಫ್ತಾರ್ ಆಯೋಜಿಸಿದ್ದ ಆಟೋ ಚಾಲಕರ ಸಂಘದ ಅಧ್ಯಕ್ಷ ಅಬುಬಕ್ಕರ್ ಅವರಿಗೆ ಸಹಾಯಕ ಕಮಿಷನರ್ ನೋಟಿಸ್ ನೀಡಿದ್ದು ಅನುಮತಿ ಇಲ್ಲದೆ ರಸ್ತೆಯನ್ನು ಬಂದ್ ಮಾಡಿ ಇಫ್ತಾರ್ ಕೂಟ ಆಯೋಜಿಸಿದ್ದನ್ನು ಗಂಭೀರ ಪರಿಗಣಿಸಲಾಗಿದೆ. ರಸ್ತೆ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿರುವ ವಿಚಾರದಲ್ಲಿ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಶೋಕಾಸ್ ನೋಟಿಸ್ ಮಾಡಿದ್ದಾರೆ.
Iftar party organisers get notice from election commission for organising party at mudipu in Mangalore.
11-08-25 11:01 pm
Bangalore Correspondent
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
Forced Marriage, Chitradurga: ನನಗಿನ್ನೂ ಹದಿನಾರ...
11-08-25 11:18 am
ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ 5 ಲಕ್ಷ ರೂ. ಕೊಡ...
10-08-25 09:12 pm
11-08-25 08:55 pm
HK News Desk
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
ಭಾರತದ ವಿರುದ್ಧ ಟ್ರಂಪ್ ಸುಂಕಾಸ್ತ್ರಕ್ಕೆ ಅಮೆರಿಕದ ತ...
09-08-25 11:09 pm
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
11-08-25 07:39 pm
Mangalore Correspondent
Padmalatha Murder Case, Dharmasthala, SIT: 19...
11-08-25 03:33 pm
Ground Penetrating Radar, Dharmasthala: ಧರ್ಮಸ...
11-08-25 11:49 am
Kudla Rampage YouTuber, Ajay Anchan Case: ಬೈಕ...
11-08-25 11:38 am
ಹೊಸ್ತಿಲು ಬರೆದು, ಪಾತ್ರೆ ತೊಳೆದು, ದೇವರ ಸ್ತೋತ್ರ ಹ...
10-08-25 04:32 pm
11-08-25 12:37 pm
Mangalore Correspondent
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm