ಬ್ರೇಕಿಂಗ್ ನ್ಯೂಸ್
13-07-26 09:16 pm HK News Staffer ಕರಾವಳಿ
ಬಂಟ್ವಾಳ, ಜು.13: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಜನತೆಯ ಬಹುದಿನಗಳ ಕನಸಾಗಿದ್ದ ಬಂಟ್ವಾಳ ರೈಲ್ವೆ ನಿಲ್ದಾಣದ ನವೀಕರಣ ಕಾರ್ಯ ಕೊನೆಗೂ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದ 'ಅಮೃತ ಭಾರತ ಸ್ಟೇಷನ್ ಸ್ಕೀಮ್' ಯೋಜನೆಯಡಿ ₹26.18 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಮರುನಿರ್ಮಾಣಗೊಂಡಿರುವ ನಿಲ್ದಾಣವನ್ನು ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
2024ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಅಮೃತ ಭಾರತ ಸ್ಟೇಷನ್ ಸ್ಕೀಮ್‌ನ ಎರಡನೇ ಹಂತದಡಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಸಂಪೂರ್ಣ ಕಾಯಕಲ್ಪ ನೀಡಲಾಗಿದ್ದು, ನೈಋತ್ಯ ರೈಲ್ವೆ ವಲಯದಲ್ಲಿ ಸಮಗ್ರ ಆಧುನೀಕರಣಗೊಂಡ ಪ್ರಮುಖ ನಾಲ್ಕು ನಿಲ್ದಾಣಗಳಲ್ಲಿ ಇದು ಒಂದಾಗಿದೆ.
ಈ ಯೋಜನೆಯಡಿ ನಿಲ್ದಾಣವನ್ನು ಕೇವಲ ಸುಂದರಗೊಳಿಸುವುದಲ್ಲದೆ, ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಹಾಗೂ ಆಧುನಿಕ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪ್ರಮುಖ ಸೌಲಭ್ಯಗಳು
ಡಿಜಿಟಲ್ ಸೌಲಭ್ಯಗಳೂ ಲಭ್ಯ
ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಹಲವು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ದೇಶಾದ್ಯಂತ 75 ನಿಲ್ದಾಣಗಳ ಏಕಕಾಲದ ಲೋಕಾರ್ಪಣೆ
ಅಮೃತ ಭಾರತ ಸ್ಟೇಷನ್ ಯೋಜನೆಯ ಎರಡನೇ ಹಂತದಡಿ ದೇಶದಾದ್ಯಂತ ಮರುನಿರ್ಮಾಣಗೊಂಡಿರುವ 75 ರೈಲ್ವೆ ನಿಲ್ದಾಣಗಳನ್ನು ಜುಲೈ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲದಲ್ಲಿ ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಬಂಟ್ವಾಳ ನಿಲ್ದಾಣದ ಜೊತೆಗೆ, ಹುಬ್ಬಳ್ಳಿ ವಿಭಾಗದ ಕೊಪ್ಪಳ, ಬಾದಾಮಿ ಮತ್ತು ಅಳ್ನಾವರ ರೈಲ್ವೆ ನಿಲ್ದಾಣಗಳೂ ಇದೇ ವೇಳೆ ಉದ್ಘಾಟನೆಯಾಗಲಿವೆ. ಬಂಟ್ವಾಳ ರೈಲ್ವೆ ನಿಲ್ದಾಣದ ಈ ಆಧುನಿಕ ಮೇಕ್‌ಓವರ್ ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷಿತ, ಸುಲಭ ಹಾಗೂ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲಿದೆ.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm