ಬ್ರೇಕಿಂಗ್ ನ್ಯೂಸ್
30-11-20 09:47 pm Mangaluru Crime Correspondent ಕರಾವಳಿ
ಮಂಗಳೂರು, ನ.30: ಮಂಗಳೂರಿನಲ್ಲಿ ಉಗ್ರರ ಪರವಾದ ಗೋಡೆ ಬರಹ ಪೊಲೀಸರಿಗೇ ಸವಾಲಾಗಿ ಪರಿಣಮಿಸಿದೆ. ರಾಜ್ಯ ಸರಕಾರದ ಪ್ರಮುಖರು ಆರೋಪಿಗಳನ್ನು ಹಾಗೇ ಬಿಡುವುದಿಲ್ಲ ಎಂದು ವೀರಾವೇಷ ತೋರುತ್ತಿದ್ದರೆ, ಇತ್ತ ಇಲಾಖೆಯ ಪೊಲೀಸ್ ಅಧಿಕಾರಿಗಳು ಮತ್ತು ತನಿಖೆಯ ಉಸ್ತುವಾರಿ ಹೊತ್ತ ಪೊಲೀಸರು ಚಳಿಯಲ್ಲೂ ಬೆವರುತ್ತಿದ್ದಾರೆ. ಯಾಕಂದ್ರೆ, ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಿಂದ ಹಾಕಿರುವ ಬಹುತೇಕ ಸಿಸಿಟಿವಿಗಳೇ ವರ್ಕ್ ಆಗ್ತಾ ಇಲ್ಲ..!
ಯಾವುದೇ ಅಪರಾಧ ಚಟುವಟಿಕೆ ಆದ್ರೂ ಪೊಲೀಸರು ಮೊದಲು ಟ್ರೇಸ್ ಮಾಡುವುದು ಸಿಸಿಟಿವಿಗಳನ್ನು. ನಗರದ ಪ್ರತೀ ಸ್ಟೇಜಿನಲ್ಲೂ ಸಿಸಿಟಿವಿಗಳನ್ನು ಪೊಲೀಸ್ ಕಮಿಷನರೇಟ್ ವತಿಯಿಂದ ಹಾಕಲಾಗಿದ್ದು, ಅವುಗಳನ್ನು ಆಧರಿಸಿಯೇ ಕ್ರೈಂ ಪತ್ತೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅಗತ್ಯವಾಗಿ ಬೇಕಾಗಿದ್ದ ಸಿಸಿಟಿವಿಗಳೇ ಕೈಕೊಟ್ಟಿವೆ. ಮಂಗಳೂರಿನ ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಇಂಥ ಸ್ಥಿತಿಯಾಗಿದೆ ಎನ್ನಲಾಗುತ್ತಿದೆ.
ಮಂಗಳೂರಿನ ಬಿಜೈ ಬಳಿಯ ಅಪಾರ್ಟ್ ಮೆಂಟ್ ಗೋಡೆಯಲ್ಲಿ ವಿವಾದಾತ್ಮಕ ಬರಹ ಕಂಡುಬಂದ ಎರಡೇ ದಿನದಲ್ಲಿ ಜಿಲ್ಲಾ ನ್ಯಾಯಾಲಯದ ಬಳಿಯ ಪೊಲೀಸ್ ಔಟ್ ಪೋಸ್ಟ್ ಗೋಡೆಯಲ್ಲಿ ಮತ್ತೊಂದು ಬರಹ ಪತ್ತೆಯಾಗಿತ್ತು. ಎರಡು ಕಡೆಯೂ ಒಂದೇ ತಂಡ ಕೃತ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ರಾತ್ರೋರಾತ್ರಿ ಕೃತ್ಯ ಎಸಗಿದ್ದರೂ, ಸಿಸಿಟಿವಿಗಳಲ್ಲಿ ಚಲನವಲನಕ್ಕೆ ಸಾಕ್ಷಿ ಸಿಗುತ್ತಿತ್ತು. ಆದರೆ, ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಿಂದಲೇ ಹಾಕಲಾಗಿರುವ ಬಹುತೇಕ ಸಿಸಿಟಿವಿಗಳೇ ಸ್ತಬ್ಧ ಆಗಿವೆ ಎನ್ನುವ ಮಾಹಿತಿ ಸಿಕ್ಕಿದೆ.
ಮಾಹಿತಿ ಪ್ರಕಾರ ನಗರದಲ್ಲಿ ಮೂರು ವರ್ಷಗಳ ಹಿಂದೆ ಟ್ರಾಫಿಕ್ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆಗಾಗಿ 190ಕ್ಕೂ ಹೆಚ್ಚು ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಟ್ರಾಫಿಕ್ ನಿರ್ವಹಣೆ ನೋಡಿಕೊಳ್ಳಲು ಹಾಕಿದ್ದ 105 ಕ್ಯಾಮರಾಗಳಲ್ಲಿ ಕೇವಲ 15 ರಿಂದ 20 ಕ್ಯಾಮರಾಗಳಷ್ಟೆ ವರ್ಕಿಂಗ್ ಇವೆಯಂತೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆಯಕಟ್ಟಿನ ಜಾಗಗಳಲ್ಲಿ ಹಾಕಿದ್ದ 85 ಹೈ ಪವರ್ ಕ್ಯಾಮರಾಗಳೂ ಕೆಲಸ ಮಾಡುತ್ತಿಲ್ಲ. ಕಿಡಿಗೇಡಿಗಳು ಬೈಕಿನಲ್ಲಿ ಬಂದಿದ್ದಾರೆ ಎನ್ನುವ ಪೊಲೀಸರಿಗೆ ಈಗ ಅವರನ್ನು ಪತ್ತೆ ಮಾಡುವುದೇ ಕಷ್ಟವಾಗಿದ್ದು , ಸಿಸಿಟಿವಿ ದೃಶ್ಯಕ್ಕಾಗಿ ಪೊಲೀಸರು ಖಾಸಗಿ ಕಟ್ಟಡಗಳ ಕದ ತಟ್ಟುತ್ತಿದ್ದಾರೆ. ದೈನೇಸಿಯಾಗಿ ನಿಂತು ಖಾಸಗಿ ಕಟ್ಟಡಗಳ ಸಿಸಿಟಿವಿ ನೋಡುವ ಸ್ಥಿತಿ ಎದುರಾಗಿದೆ.
ಇಲಾಖೆಯ ಮಾಹಿತಿ ಪ್ರಕಾರ, ಮೂರು ವರ್ಷಗಳ ಹಿಂದೆ ಸಿಸಿ ಕ್ಯಾಮರಾಗಳ ನಿರ್ವಹಣೆಗಾಗಿ ಕಂಪನಿ ಒಂದಕ್ಕೆ ಗುತ್ತಿಗೆ ನೀಡಲಾಗಿತ್ತು. ಮೂರು ವರ್ಷಗಳ ಗುತ್ತಿಗೆ ಮೂರು ತಿಂಗಳ ಹಿಂದೆ ಮುಗಿದಿದೆ ಎನ್ನಲಾಗುತ್ತಿದ್ದು, ಅದರ ನವೀಕರಣವನ್ನು ಪೊಲೀಸ್ ಇಲಾಖೆಯಿಂದ ಮಾಡಿಲ್ವಂತೆ. ಹೀಗಾಗಿ 90 ಶೇಕಡಾ ಕ್ಯಾಮರಾಗಳು ವರ್ಕಿಂಗ್ ಇಲ್ಲದೆ ಖಾಲಿ ಬಿದ್ದಿವೆ. ಮೂರು ವರ್ಷಗಳ ಹಿಂದೆ ಟ್ರಾಫಿಕ್ ಉಲ್ಲಂಘಿಸುವವರ ಪತ್ತೆಗಾಗಿ 60 ಲಕ್ಷ ವೆಚ್ಚದಲ್ಲಿ ಆಟೋಮೇಶನ್ ಸೆಂಟರ್ ಮತ್ತು 70.50 ಲಕ್ಷ ವೆಚ್ಚದಲ್ಲಿ ಹೆಚ್ಚುವರಿ ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ಈಗ ಸಿಸಿ ಕ್ಯಾಮರಾ ತಡಕಾಡಿದರೆ ಕತೆಯೇ ಗೋವಿಂದ ಅನ್ನುವ ಸ್ಥಿತಿ.
ಇದೇ ವೇಳೆ, ಗೋಡೆ ಬರಹದ ಕೃತ್ಯದಲ್ಲಿ ಆರೋಪಿಗಳ ಪತ್ತೆ ಕಾರ್ಯ ವಿಳಂಬ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಪ್ರತಿಪಕ್ಷಗಳ ನಾಯಕರು ಆರೋಪಿಗಳ ಪತ್ತೆಗೆ ಪೊಲೀಸರು ಮತ್ತು ರಾಜ್ಯ ಸರಕಾರದ ವಿರುದ್ಧ ಗಡುವು ವಿಧಿಸುತ್ತಿದ್ದಾರೆ. ಸದ್ಯಕ್ಕೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಕಂಡುಬಂದಿದೆ. ಇದರ ಬದಲಿಗೆ, ವಿಧ್ವಂಸಕ ಕೃತ್ಯಗಳೇ ಆಗಿ ಹೋದಲ್ಲಿ ನಮ್ಮ ಪೊಲೀಸರು ಮತ್ತು ಆಡಳಿತ ಏನು ಮಾಡುತ್ತೋ, ಹರೋಹರ ಎನ್ನುವ ಮಾತು ಕೇಳಿಬರುತ್ತಿದೆ.
ಹೊಸ ಕಮಿಷನರ್ ಬಂದ ಮೇಲೆ ಠಾಣಾ ಹಂತದ ಪೊಲೀಸರು ನಿಯಂತ್ರಣ ಕಳಕೊಂಡಿದ್ದಾರೋ ಎನ್ನುವ ಮಾತು ಕೇಳಿಬರುತ್ತಿದೆ. ಪದೇ ಪದೇ ಅಪರಾಧ ಕೃತ್ಯಗಳು ಮರುಕಳಿಸುತ್ತಿದ್ದರೂ, ಕಮಿಷನರ್ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದೀಗ ಉಗ್ರರ ಪರ ಗೋಡೆ ಬರಹಗಳು ಗಂಭೀರ ಪ್ರಕರಣವಾಗಿದ್ದರೂ, ಕಮಿಷನರ್ ಅದಕ್ಕೊಂದು ತಂಡ ರಚನೆ ಮಾಡಿ ಕೈತೊಳೆದು ಬಿಟ್ಟಿದ್ದಾರೆ. ಪತ್ತೆ ಕಾರ್ಯ ಮಾಡುವುದು ಕೆಳಸ್ತರದ ಅಧಿಕಾರಿಗಳು ಆಗಿರುವುದರಿಂದ ಇದರ ತಲೆನೋವು ಹಿರಿಯರ ತಲೆಗೆ ಬಂದಿಲ್ಲವೋ ಎನ್ನುವ ಮಾತು ಕೆಳಹಂತದಲ್ಲಿ ಹರಿದಾಡುತ್ತಿದೆ.
Pro-Terror Graffiti in Mangalore, the Police department is struggling for Video footages from CCTV cameras as most of them in the city is under Maintenance. Police are visiting buildings after buildings searching for footages.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm