ಬ್ರೇಕಿಂಗ್ ನ್ಯೂಸ್
19-04-24 02:30 pm Mangalore Correspondent ಕರಾವಳಿ
ಬಂಟ್ವಾಳ, ಎ.18 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು.
ಗುರುವಾರ ಬೆಳಗ್ಗಿನಿಂದಲೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಅಂಗಡಿ - ಮಳಿಗೆ, ಮನೆಗಳಿಗೆ ತೆರಳಿ ಮತ ಯಾಚನೆ ನಡೆಸಿದರು. ಅಭ್ಯರ್ಥಿ ತಮ್ಮ ಊರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಹೂ ಮಾಲೆ ಹಾಕಿ, ಶಾಲು ಹೊದಿಸಿ, ಕೆಲವೆಡೆ ಪಟಾಕಿ ಸಿಡಿಸಿ ಬರಮಾಡಿಕೊಂಡರು.
ಬಡಗಬೆಳ್ಳೂರು, ಅಮ್ಮುಂಜೆ - ಬಡಕಬೈಲು ಜಂಕ್ಷನ್, ಕಳ್ಳಿಗೆ - ಬ್ರಹ್ಮರಕೂಟ್ಲು, ಶೇಡಿಗುರಿ, ಬಾಳ್ತಿಲ, ಸೂರಿಕುಮೇರು, ಮಾಣಿ, ಬುಡೋಳಿ, ಪೆರ್ಲಾಪು- ಕಡೇಶ್ವಾಲ್ಯ, ನೇರಳಕಟ್ಟೆ, ಅನಂತಾಡಿ, ಮಂಗಿಲಪದವು, ಕಲ್ಲಡ್ಕ, ಅಮ್ಟೂರು, ಬೊಳ್ಳಾಯಿ, ಮಿತನಡ್ಕ, ಕನ್ಯಾನ, ಕೊಡುಂಗಾಯಿ, ಸಾಲೆತ್ತೂರು, ಬೋಳಂತೂರು, ಮಂಚಿ - ಕುಕ್ಕಾಜೆ ಜಂಕ್ಷನ್, ಸಜೀಪ ಮುನ್ನೂರು - ನಂದಾವರ ಜಂಕ್ಷನ್, ಪಾಣೆಮಂಗಳೂರು - ಮೆಲ್ಕಾರ್ ಜಂಕ್ಷನ್ ನಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು.
ಗೆಲುವಿಗೆ ನಾಂದಿ ಹಾಡಿ ಎಂದ ರಮಾನಾಥ ರೈ
ಮಾಜಿ ಸಚಿವ, ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಬಡವರ ಪರ ಕೆಲಸ ಮಾಡಿದ ಪಕ್ಷ. ಹಾಗಾಗಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಅಗತ್ಯವಿದೆ. ಲೋಕಸಭಾ ಚುನಾವಣೆಯ ಗೆಲುವಿನ ಮೂಲಕ ಕಾಂಗ್ರೆಸ್'ನ ಗೆಲುವಿಗೆ ನಾಂದಿ ಹಾಡಿ ಎಂದರು.
ನಿಮ್ಮ ಕಾವಲುಗಾರನಾಗಿ ನಾನಿರುವೆ: ಪದ್ಮರಾಜ್
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರ ಗ್ಯಾರೆಂಟಿ ಸಹಿತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಮನೆಮನೆಗೆ ತಲುಪಿಸಿ. ಇದರೊಂದಿಗೆ ಉದ್ಯೋಗ ಸೃಷ್ಟಿಯ ಕೆಲಸವನ್ನೂ ಜಿಲ್ಲೆಯಲ್ಲಿ ನಡೆಸಲಾಗುವುದು. ನಿಮ್ಮ ಸಮಸ್ಯೆಗಳ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ. ಸಂಸತ್ ಸದಸ್ಯನಾಗಿ ನಿಮ್ಮ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಸುದರ್ಶನ್ ಜೈನ್, ಸಂಜೀವ ಪೂಜಾರಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಯೂತ್ ಕಾಂಗ್ರೆಸ್ ಮಾಧ್ಯಮ ವಕ್ತಾರೆ ಸುರಯ್ಯ ಅಂಜುಮ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಕೊಳ್ನಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಪವಿತ್ರ ಪೂಂಜಾ, ಉಪಾಧ್ಯಕ್ಷ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್, ಜಿಪಂ ಮಾಜಿ ಸದಸ್ಯ ಕೃಷ್ಙ ನಾಯ್ಕ, ದೇವಕಿ, ಶಾಹುಲ್ ಹಮೀದ್, ಮೊಯಿದ್ದೀನ್, ಗಂಗಾಧರ, ವಸಂತ ಬೆಳ್ಚಾಡ, ಕೃ಼ಷ್ಣಯ್ಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
Congress MP Padmaraj Campaigns at Bantwal along with senior leader Ramanth Rai.
22-09-25 10:54 am
HK News Desk
ಪಂಚಮಸಾಲಿ ಲಿಂಗಾಯತರಲ್ಲಿ ಮತ್ತೆ ಒಡಕು ; ಲಿಂಗಾಯತ ಪೀ...
21-09-25 10:23 pm
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
22-09-25 10:50 am
HK News Desk
ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಗೆ ದಾದಾ ಸಾಹೇಬ್...
20-09-25 11:03 pm
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm