ಬ್ರೇಕಿಂಗ್ ನ್ಯೂಸ್
22-04-24 11:50 am Mangalore Correspondent ಕರಾವಳಿ
ಮಂಗಳೂರು, ಎ.22: ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಸೀಸನ್ 5ರಲ್ಲಿ ಮಂಗಳೂರಿನ ರಿಷಿಕಾ ಕುಂದೇಶ್ವರ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್‌ನ ವಿಷ್ಣು ಡ್ರಾಮಾ ಜೂನಿಯರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ರಾತ್ರಿ ಸೀಸನ್ 5ರ ವಿಜೇತರು ಯಾರು ಎಂಬುದನ್ನು ಘೋಷಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಕಂಡಿದೆ. ಈ ಸಲ ಇಬ್ಬರನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದ 31 ಜಿಲ್ಲೆಗಳಿಂದ ಹಲವಾರು ಬಾಲ ಪ್ರತಿಭೆಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಲಾಗಿತ್ತು. ಮೊದಲ ವಾರದಿಂದಲೇ ಶುರುವಾದ ಮಕ್ಕಳ ಆಟ, ಫಿನಾಲೆ ಹಂತಕ್ಕೆ ಬರುವ ವರೆಗೂ ಬರೋಬ್ಬರಿ 200ಕ್ಕೂ ಅಧಿಕ ಸ್ಕಿಟ್‌ಗಳನ್ನು ಮಾಡಿ ಮುಗಿಸಿದ್ದರು. ಪುಟಾಣಿಗಳು. ಪೌರಾಣಿಕ, ಸಾಮಾಜಿಕ, ಹಾಸ್ಯ ಪ್ರಧಾನ ಎಲ್ಲ ಬಗೆಯ ಶೋಗಳಿಂದಲೇ ಈ ಸಲದ ವೇದಿಕೆಯನ್ನು ರಂಗಾಗಿಸಿದ್ದರು. 21 ವಾರ ಕರುನಾಡನ್ನು ಮನರಂಜಿಸಿದ 14 ಮಕ್ಕಳ ಪೈಕಿ ಯಾರು ವಿಜೇತರು ಎಂಬ ಕೌತುಕಕ್ಕೆ ಭಾನುವಾರ ತೆರೆಬಿದ್ದಿದೆ. ಈ ಬಾರಿ ಎಲ್ಲ14 ಮಂದಿ ಪುಟಾಣಿಗಳು ಫಿನಾಲೆ ಸುತ್ತಿನಲ್ಲಿದ್ದರು. ಆ ಪೈಕಿ ಫಿನಾಲೆ ರೌಂಡ್‌ನಲ್ಲಿ ಭದ್ರಾವತಿಯ ಇಂಚರ, ಶಿವಮೊಗ್ಗದ ಮಹಾಲಕ್ಷ್ಮೀ, ಮಂಗಳೂರಿನ ರಿಶಿಕಾ, ಕುಣಿಗಲ್‌ನ ವಿಷ್ಣು ಆಯ್ಕೆಯಾದರು. ಈ ನಾಲ್ವರಲ್ಲಿ ಇಂಚರ ಎರಡನೇ ರನ್ನರ್ ಅಪ್ ಆದರು. ಅದಾದ ಬಳಿಕ ರಿಷಿಕಾ ಕುಂದೇಶ್ವರ ಮತ್ತು ವಿಷ್ಣು ಅವರನ್ನು ಡ್ರಾಮಾ ಜೂನಿಯರ್ಸ್ ಸೀಸನ್ 5ರ ಜಂಟಿ ವಿಜೇತರು ಎಂದು ಹಿರಿಯ ನಟ, ತೀರ್ಪುಗಾರಲ್ಲಿ ಒಬ್ಬರಾದ ರವಿಚಂದ್ರನ್ ಘೋಷಿಸಿದರು.
ಮಹಾಲಕ್ಷ್ಮೀ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. ಇದಷ್ಟೇ ಅಲ್ಲದೆ, ಡ್ರಾಮಾ ಜೂನಿಯರ್ಸ್ ಸೀಸನ್ 5ರ ಎಂಟರ್‌ಟ್ರೇನರ್ ಆಗಿ ಆಲ್‌ರೌಂಡರ್ ಆರ್ಯ ಸ್ವರೂಪ್ ಹೊರಹೊಮ್ಮಿದರು. ವಿಜೇತರಿಗೆ 30*40 ಸೈಟ್ ಬಹುಮಾನವಾಗಿ ಬಂದರೆ, ಮೊದಲ ರನ್ನರ್ ಅಪ್ ಸ್ಥಾನ ಪಡೆದ ಮಹಾಲಕ್ಷ್ಮೀಗೆ 3 ಲಕ್ಷ ನಗದು ಬಹುಮಾನ, ಎರಡನೇ ರನ್ನರ್ ಅಪ್ ಆದ ಇಂಚರಾಗೆ 1 ಲಕ್ಷ ಬಹುಮಾನ ನೀಡಲಾಗಿದೆ. ಇನ್ನು ಕಲರ್‌ಫುಲ್ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಹಿರಿಯ ನಟಿ ಲಕ್ಷ್ಮೀ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಎಂದಿನಂತೆ ತೀರ್ಪುಗಾರರಾಗಿ ವೇದಿಕೆ ಮೇಲಿದ್ದರು. ಅರುಣ್ ಸಾಗರ್ ಮತ್ತು ರಾಜು ತಾಳಿಕೋಟೆ ಸಹ ಮಕ್ಕಳನ್ನು ತಿದ್ದಿ ತೀಡಿ ಹುರಿದುಂಬಿಸಿದ್ದರು.
ಕಳೆದ 21 ವಾರಗಳಿಂದ ಜೀ ಕನ್ನಡದಲ್ಲಿ ಡ್ರಾಮಾ ಜೂನಿಯರ್ಸ್ ಸೀಸನ್ 5 ಪ್ರಸಾರ ಕಾಣುತ್ತ ಬಂದಿದ್ದು ಈ ಅವಧಿಯಲ್ಲಿ ಸಾಕಷ್ಟು ಪುಟಾಣಿಗಳು ತಮ್ಮ ಪ್ರತಿಭೆ ಮೂಲಕವೇ ನಾಡಿನ ಮನೆ ಮಾತಾಗಿದ್ದಾರೆ. ರಿಷಿಕಾ ಮಂಗಳೂರಿನ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅವರ ಪುತ್ರಿಯಾಗಿದ್ದು ನಾಟ್ಯ, ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾಳೆ.
Drama Juniors kannada Season 5 winners Mangalore, Rishika Kundeswar and Kunigal Vishnu. In a surprise announcement, veteran actor Ravichandran declared Rishika Kundeswara and Vishnu as the joint winners of Drama Juniors Season 5, showcasing the remarkable talent and dedication displayed by these young stars throughout the competition.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm