ಬ್ರೇಕಿಂಗ್ ನ್ಯೂಸ್
24-04-24 06:32 pm Mangalore Correspondent ಕರಾವಳಿ
ಮಂಗಳೂರು, ಎ.24: ಮಂಗಳೂರು ನಗರ ಮುಂಬೈ ರೀತಿಯಲ್ಲಿ ಬೆಳೆಯಲು ಎಲ್ಲ ಅವಕಾಶ ಇದೆ. ಮುಂಬೈ ನಗರ 20 ಗಂಟೆ ಹೇಗೆ ತೆರೆದಿರುತ್ತದೋ ಅದೇ ಸ್ಥಿತಿ ತರಬೇಕಾಗಿದೆ. ಮಂಗಳೂರನ್ನು ಹಿಂದಿನ ರೀತಿಯಲ್ಲೇ ಸಾಮರಸ್ಯದ ಊರಾಗಿಸುವ ಕೆಲಸ ಆಗಬೇಕಾಗಿದೆ. 33 ವರ್ಷಗಳಿಂದ ಕೋಮುಸೂಕ್ಷ್ಮ ಎಂಬ ಹಣೆಪಟ್ಟಿ ಕಟ್ಟುವ ಸ್ಥಿತಿಯನ್ನು ಹೋಗಲಾಡಿಸುತ್ತೇನೆ ಎಂದು ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದೇನೆ ಎಂಬ ಭಾವನೆ ಬರದಂತೆ ಕಾರ್ಯಕರ್ತರು ಸಾಥ್ ಕೊಟ್ಟಿದಾರೆ, ಕಾಂಗ್ರೆಸ್ ಪಕ್ಷ ದ್ವೇಷ ಹಂಚಿಲ್ಲ. ಕಾರ್ಯಕರ್ತರು ಮನೆ ಮನೆಗೆ ಹೋಗಿ ಪಕ್ಷದ ಪರವಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಆಭಾರಿಯಾಗಿದ್ದೇನೆ. ಕಳೆದ 33 ವರ್ಷಗಳಿಂದ ನಮ್ಮ ನಾಯಕರಿಗೆ ಸೋಲಾಗಿದೆ ಅಂತ ನಾನು ಒಪ್ಪುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಈ ಬಾರಿ ಬದಲಾವಣೆ ಬಯಸಿದ್ದು ಸೋಲಿನ ಸರಪಣಿಯಿಂದ ಹೊರಬಂದು ವಿಜಯ ಸಾಧಿಸುತ್ತೇವೆ ಎಂದರು.
ಮಂಗಳೂರಿನಲ್ಲಿ ಬಂದರು, ಏರ್ಪೋರ್ಟ್, ಕೆಆರ್ ಇಸಿ ಹೀಗೆ ಏನೆಲ್ಲ ಆಗಿದೆಯೋ ಅದು ಕಾಂಗ್ರೆಸ್ ಕಾಲದಲ್ಲಿ ಆಗಿತ್ತು. 33 ವರ್ಷಗಳಿಂದ ಬಿಜೆಪಿ ಸಂಸದರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಯೇ ಇಲ್ಲ. ಸಾಮರಸ್ಯದ ತುಳುನಾಡನ್ನು ದ್ವೇಷದ ಕಂದಕಕ್ಕೆ ದೂಡಿದ್ದು ಬಿಜೆಪಿ. ಇನ್ನೊಬ್ಬರ ಕಣ್ಣೊರೆಸುವ ಹಿಂದು ಧರ್ಮ ನನಗೆ ಜ್ಞಾನ ಕೊಟ್ಟಿದೆ. ಬಿಜೆಪಿಯ ಹಿಂದುತ್ವ ಧರ್ಮದ ಅಮಲೇರಿದ ಸ್ಥಿತಿ. ಯಾರನ್ನೋ ಕೊಲೆ ಮಾಡಿ ಜೈಲಿಗೆ ಹಾಕಿಸುವುದು. ನಿರಂತರ ಕೋಮು ಗಲಭೆ ಆಗುತ್ತಿದ್ದುದರಿಂದ ಈ ಜಿಲ್ಲೆಗೆ ಕೋಮು ಸೂಕ್ಷ್ಮ ಜಾಗವೆಂಬ ಟ್ಯಾಗ್ ಲೈನ್ ಬಿದ್ದಿದೆ. ಹೀಗಾಗಿ ಹೊರಗಿನ ಕಂಪನಿಗಳು ಹೂಡಿಕೆ ಮಾಡುತ್ತಿಲ್ಲ. ನಮ್ಮಲ್ಲಿ ಉದ್ಯೋಗ ಸಿಗದೆ ಮಕ್ಕಳು ವಿದೇಶಕ್ಕೆ ಹೋಗುವ ಸ್ಥಿತಿಯಿದೆ. ಮಂಗಳೂರು ನಗರ ಅಭಿವೃದ್ಧಿಯಾಗಲು ತುಂಬ ಅವಕಾಶ ಇದೆ. ಕಂಬಳ, ಸಂಸ್ಕೃತಿ ಹೆಸರಿನಲ್ಲಿ ಟೂರಿಸಂ ಬೆಳೆಯಲು ಅವಕಾಶ ಇದೆ. ಆದರೆ ಬಿಜೆಪಿ ಇಲ್ಲಿನ ಅಭಿವೃದ್ಧಿ ಬಿಟ್ಟು ಭ್ರಮಾತ್ಮಕ ವಿಚಾರಗಳನ್ನು ಮಾತ್ರ ಮುಂದಿಡುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದು ಜನರಿಗೆ ತಲುಪಿದೆ. ಹೀಗಾಗಿ ಎಲ್ಲ ಕಡೆ ನಮ್ಮನ್ನು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ ಅವರು, 33 ವರ್ಷಗಳಲ್ಲಿ ಬಿಜೆಪಿ ಸಂಸದರು ಮಾಡಿದ ಸಾಧನೆ ಶೂನ್ಯ. ಒಂದು ಹೈವೇ ಮಾಡೋದಕ್ಕೂ ಇವರಿಂದ ಆಗಿಲ್ಲ. ಕಲ್ಲಡ್ಕ ರಸ್ತೆಯಲ್ಲಿ ಎಷ್ಟು ಅಪಘಾತ ಆಗಿದೆ, ಎಷ್ಟು ಜನ ಕೈಕಾಲು ಕಳಕೊಂಡಿದ್ದಾರೆ ಎನ್ನುವುದು ಅಲ್ಲಿನ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಪಕ್ಕದ ಕಾಸರಗೋಡು ಜಿಲ್ಲೆಯ ಹೈವೇ ಹೇಗಿದೆ ಅಂತ ನೋಡಿಕೊಂಡು ಬರಬೇಕು ಎಂದು ಹೇಳಿದರು.
ಪದ್ಮರಾಜ್ ಜೊತೆಗೆ ಪೂಜಾರಿ ಹಾಕಿದ್ದು ಯಾಕೆಂಬ ಪ್ರಶ್ನೆಗೆ, ನಾನು ಬಿಲ್ಲವ ಜಾತಿಯವನೇ ಅಲ್ಲ ಎಂದು ಪ್ರಶ್ನಿಸಲು ಮುಂದಾಗಿದ್ದರು. ಅದಕ್ಕಾಗಿ ಹೆಸರಲ್ಲಿ ಪೂಜಾರಿ ಸೇರಿಸಬೇಕಾಗಿ ಬಂತು ಎಂದರು.
Will make Mangalore like Mumbai in development says congress MP candidate Padmaraj. District Congress MP candidate Padmaraj R said, "Elections are a festival of democracy. I extend my gratitude to all national, state, and district leaders of the Congress for their unwavering support in appointing me as the MP candidate of the district."
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm