ಬ್ರೇಕಿಂಗ್ ನ್ಯೂಸ್
25-04-24 11:52 am Udupi Correspondent ಕರಾವಳಿ
ಉಡುಪಿ, ಎ.25: ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಪ್ರಖ್ಯಾತ ಭಾಗವತ, ಗಾನ ವಿಶಾರದ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ನಸುಕಿನ 4 ಗಂಟೆ ವೇಳೆಗೆ ಬೆಂಗಳೂರಿನ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತ, ಸಂಗೀತದ ಸೊಗಡಿನ ಮೂಲಕ ಹೊಸ ಯಕ್ಷಗಾನ ಪ್ರಿಯರಲ್ಲಿ ಹೊಸ ಅಭಿಮಾನಿ ಬಳಗ ಸೃಷ್ಟಿಸಿದ್ದ ಸುಬ್ರಹ್ಮಣ್ಯ ಧಾರೇಶ್ವರ ಪೆರ್ಡೂರು ಮೇಳಕ್ಕೆ ಹೊಸ ಖ್ಯಾತಿ ತಂದುಕೊಟ್ಟಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದ ಅವರು ಕಳೆದೊಂದು ವರ್ಷದಲ್ಲಿ ಅಸೌಖ್ಯದ ಕಾರಣ ವಿಶ್ರಾಂತಿಯಲ್ಲಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಕಾಲ ಪ್ರಧಾನ ಭಾಗವತರಾಗಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲಿಯೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳ ಸೇರಿಕೊಂಡು ಯಶಸ್ಸಿನ ಶಿಖರ ತಲುಪಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಮೊದಲಿಗೆ ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡಲು ತೊಡಗಿದ್ದರು.
ಇದರ ನಡುವೆಯೇ, ಇಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಮಾಡಲು ಮುಂದಾಗಿದ್ದರು. ಬಳಿಕ ಇವರ ಸಂಗೀತ ವಿದ್ವಾನ್ ಕಂಡು ಪ್ರಾಚಾರ್ಯ ನಾರಣಪ್ಪ ಉಪ್ಪೂರರು ಯಕ್ಷಗಾನ ಹಿಮ್ಮೇಳಕ್ಕೆ ಸೇರಿಸಿದ್ದರು. ಹೊಸ ಪ್ರಸಂಗಗಳನ್ನು ರಚಿಸಿ, ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎಂಬ ಬಿರುದು ಪಡೆದಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳದ ತಿರುಗಾಟ ನಿಲ್ಲಿಸಿ ಹತ್ತು ವರ್ಷಗಳ ಕಾಲ ಧಾರೇಶ್ವರ ಯಕ್ಷ ಬಳಗದ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಬಳಿಕ ಪೆರ್ಡೂರು ಮೇಳದಲ್ಲಿಯೇ ಇದ್ದು ಹೊಸ ಪ್ರಸಂಗ ರಚನೆ, ಭಾಗವತಿಕೆ ಮೂಲಕ ಮಿಂಚು ಹರಿಸಿದ್ದರು.
ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಉಡುಪಿ ಜಿಲ್ಲೆಯ ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಬೈಂದೂರು, ಉಡುಪಿ ವ್ಯಾಪ್ತಿಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅಲ್ಲದೆ, ಕಾಳಿಂಗ ನಾವಡರ ಅಕಾಲಿಕ ಮೃತ್ಯು ಬಳಿಕ ಆ ಜಾಗವನ್ನು ಯಶಸ್ವಿಯಾಗಿ ತುಂಬಿದ್ದಲ್ಲದೆ, ತಮ್ಮದೇ ಧಾಟಿ, ತಮ್ಮದೇ ಆದ ಸ್ವರಚಿತ ಪ್ರಸಂಗಗಳ ಮೂಲಕ ಹೊಸ ಕ್ರಾಂತಿ ಎಬ್ಬಿಸಿದ್ದರು. ಈಗಿನ ಜನಮಾನಸದಲ್ಲಿ ಯಕ್ಷಗಾನ ರಂಗದಲ್ಲಿ ಇಷ್ಟೊಂದು ಹೆಸರು ಮಾಡಿದ್ದ ಭಾಗವತ ಮತ್ತು ಪ್ರಸಂಗ ಕರ್ತ ಇನ್ನೊಬ್ಬರಿಲ್ಲ.
Renowned Yakshagana Bhagavath, Subramanya Dhareshwara (67), passed away early Thursday morning, April 25, at his son's residence in Bengaluru after a brief illness.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm