ಬ್ರೇಕಿಂಗ್ ನ್ಯೂಸ್
26-04-24 11:58 am Mangalore Correspondent ಕರಾವಳಿ
ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಂಗಳೂರಿನ ರಥಬೀದಿಯ ಸರಕಾರಿ ಹೆಣ್ಮಕ್ಕಳ ಶಾಲೆಯಲ್ಲಿ ಮತ ಚಲಾಯಿಸಿದರು.
ಕ್ಯಾ. ಬ್ರಿಜೇಶ್ ಚೌಟ ಅವರು ಬೂತ್ ಸಂಖ್ಯೆ 17ರಲ್ಲಿ ತಮ್ಮ ತಂದೆ, ತಾಯಿ ಜೊತೆಗೆ ಮತ ಚಲಾವಣೆಗೆ ಬಂದಿದ್ದರು. ಮತ ಚಲಾಯಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಚೌಟ, ಭಾರತದ ಭವಿಷ್ಯಕ್ಕಾಗಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಬೆಳಗ್ಗಿನಿಂದಲೇ ಮತದಾರರು ಭಾರೀ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.
ಈ ಬಾರಿ ತಾಯಂದಿರಲ್ಲಿ ಒಂದು ವಿಶೇಷ ವಿನಂತಿ ಮಾಡಿದ್ದೆ. ದೇಶದ ಭವಿಷ್ಯಕ್ಕಾಗಿ, ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ತಾಯಂದಿರು ತಮ್ಮ ನಾರಿಶಕ್ತಿಯನ್ನು ತೋರಿಸಲು ಮತಗಟ್ಟೆಗೆ ಮೊದಲು ತೆರಳಿ ಮತ ಹಾಕಬೇಕೆಂದು ಹೇಳಿದ್ದೆ. ಜಿಲ್ಲೆಯಾದ್ಯಂತ ಮಹಿಳಾ ಮತದಾರರು ಭಾರೀ ಖುಷಿಯಲ್ಲಿ ಮತ ಚಲಾವಣೆಗೆ ಬಂದಿದ್ದಾರೆ. ಅಭೂತಪೂರ್ವ ಸ್ಪಂದನೆ ಸಿಗುತ್ತಾ ಇದೆ. ನವದುರ್ಗೆಯರಾಗಿ ಮತ ಚಲಾಯಿಸಿ ಮೋದಿ ಅವರನ್ನು ಆಶೀರ್ವದಿಸಲು ಬಂದಿದ್ದಾರೆ. ಎಲ್ಲ ಕಡೆ ಬೂತ್ ಗಳಲ್ಲಿ ಮಹಿಳೆಯರು ನಾರಿಶಕ್ತಿಯರಾಗಿ ಬಂದು ಮೊದಲ ಮತ ಹಾಕುತ್ತಿರುವ ಮಾಹಿತಿ ನನಗೆ ಸಿಗುತ್ತಿದೆ.
ಈ ದೇಶದ ಅಖಂಡತೆಗೆ ಗ್ಯಾರಂಟಿ ನರೇಂದ್ರ ಮೋದಿ, ಈ ದೇಶದ ಸೈನಿಕರಿಗೆ, ರೈತರಿಗೆ, ಅಭಿವೃದ್ಧಿಗೆ, ದೇಶದ ಭದ್ರತೆಗೆ, ಯುವ ಸಮೂಹಕ್ಕೆ ಗ್ಯಾರಂಟಿ ನರೇಂದ್ರ ಮೋದಿ. ಅವರನ್ನು ದೇಶದ ಜನತೆ ಮತ್ತೊಮ್ಮೆ ಪ್ರಧಾನಿ ಸ್ಥಾನಕ್ಕೆ ಒಯ್ಯುತ್ತಾರೆಂಬ ಸಂಪೂರ್ಣ ವಿಶ್ವಾಸ ಇದೆ. ಮತದಾರರು ಸುಳ್ಳು, ಅಪಪ್ರಚಾರದ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸ ಇದೆಯೆಂದು ಕ್ಯಾ. ಬ್ರಿಜೇಶ್ ಚೌಟ ನುಡಿದರು.
Bjp Candidate Brijesh Chowta casts vote at car Street school in Mangalore. He came along with his Father and mother. Am very happy to see ladies coming in large number to cast their votes he added.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
12-02-25 12:27 pm
HK News Desk
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm