ಬೋಟ್ ದುರಂತ ; ಕೋಸ್ಟ್ ಗಾರ್ಡ್ ನಿರ್ಲಕ್ಷ್ಯ ಖಂಡಿಸಿ ಮಂಗಳೂರಿನಲ್ಲಿ ಮೀನು ವಹಿವಾಟು ಬಂದ್ !!

02-12-20 01:09 pm       Mangalore Correspondent   ಕರಾವಳಿ

ಬೋಟ್ ಮುಳುಗಿ ದುರಂತ ಸಂಭವಿಸಿದ್ದರೂ, ಕೋಸ್ಟ್ ಗಾರ್ಡ್ ನಿರ್ಲಕ್ಷ್ಯ ಖಂಡಿಸಿ ಮಂಗಳೂರಿನಲ್ಲಿ ಮೀನು ವಹಿವಾಟು ಬಂದ್ ಮಾಡಿ ಮುಷ್ಕರ ನಡೆಸಲಾಗಿದೆ. 

ಮಂಗಳೂರು, ಡಿ.02 : ಅರಬ್ಬೀ ಸಮುದ್ರದಲ್ಲಿ ಬೋಟ್ ಮುಳುಗಿ ದುರಂತ ಸಂಭವಿಸಿದ್ದರೂ, ಕೋಸ್ಟ್ ಗಾರ್ಡ್ ನಿರ್ಲಕ್ಷ್ಯ ವಹಿಸಿದ್ದನ್ನು ಖಂಡಿಸಿ ಮಂಗಳೂರಿನಲ್ಲಿ ಮೀನು ವಹಿವಾಟು ಬಂದ್ ಮಾಡಿ ಮುಷ್ಕರ ನಡೆಸಲಾಗಿದೆ. 

ಮಂಗಳೂರಿನ ದಕ್ಕೆ ಸೇರಿದಂತೆ ಬಹುತೇಕ ಮಾರುಕಟ್ಟೆಗಳಲ್ಲಿ ಮೀನು ವಹಿವಾಟು ಸಂಪೂರ್ಣ ಬಂದ್ ಆಗಿದೆ. ಮೀನಿನ ಮಾರುಕಟ್ಟೆಗಳಿಗೆ ಮೀನು ಪೂರೈಕೆ ಆಗಿಲ್ಲ‌. ಮೀನುಗಾರರು ಮತ್ತು ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಮುಷ್ಕರ ಹೂಡಿದ್ದಾರೆ. 

ದುರಂತದ ಬಳಿಕ ಕಾರ್ಯಾಚರಣೆ ಮಾಡುವಂತೆ ಅಧಿಕಾರಿಗಳು ಕೇವಲ ಪೋಸ್ ಕೊಟ್ಟಿದ್ದಾರೆ‌. ಯಾವುದೇ ಕಾರ್ಯಾಚರಣೆ ಮಾಡಿಲ್ಲ. ಮೀನುಗಾರರೇ ಕಾರ್ಯಾಚರಣೆ ಮಾಡಿದ್ದು. ಕೋಸ್ಟ್ ಗಾರ್ಡ್ ಪಡೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೀನುಗಾರ ಮುಖಂಡರು ಆರೋಪಿಸಿದ್ದಾರೆ. 

ಮುಷ್ಕರ ಹೂಡಿ, ಬೆಳಗ್ಗೆ ನೂರಾರು ಜನರು ದಕ್ಕೆಯಲ್ಲಿ ಜಮಾಯಿಸಿದ್ದರು. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ.

Mangalore Boat Capsized in Deep Sea, Fishermen stage protest and close harbour stating Negligence of Coast Gaurd in the rescue operation.