ಬ್ರೇಕಿಂಗ್ ನ್ಯೂಸ್
28-04-24 11:03 pm Udupi Correspondent ಕರಾವಳಿ
ಉಡುಪಿ, ಎ.28: ಜಗತ್ತಿನ ಮುಂಚೂಣಿ ಸಾಫ್ಟ್‌ವೇರ್ ಕಂಪನಿಗಳಾದ ಮೈಕ್ರೋಸಾಫ್ಟ್, ಆಲ್ಬಾ ಬೆಟ್, ನೊವಾರ್ಟಿಸ್, ಎಡೋಬ್, ಐಬಿಎಂ ಸಹಿತ 30ಕ್ಕೂ ಹೆಚ್ಚು ಕಂಪನಿಗಳಿಗೆ ಭಾರತೀಯರೇ ಕಾರ್ಯ ನಿರ್ವಹಣಾಧಿಕಾರಿಗಳು. ಈಗ ಉಡುಪಿ ಮೂಲದ ಕಾರ್ತಿಕ್ ರಾವ್ ಅಮೆರಿಕದ ಪ್ರತಿಷ್ಠಿತ ಕಂಪನಿಗೆ ಸಿಇಓ ಆಗಿದ್ದಾರೆ.
ಅಮೆರಿಕದ ಕಂಟೆಂಟ್‌ಫುಲ್ (ಡೆನ್ವರ್ ಆಂಡ್ ಸಾನ್ ಫ್ರಾನ್ಸಿಸ್ಕೊ ಆಂಡ್ ಬರ್ಲಿನ್) ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿ ಕಾರ್ತಿಕ್ ರಾವ್ ಅಧಿಕಾರ ವಹಿಸಿಕೊಂಡಿದ್ದಾರೆ. 2019ರಿಂದ ಸಿಇಒ ಆಗಿದ್ದ ಸ್ಟೀವ್ ಫ್ಲೋವನ್ ಬದಲಿಗೆ ಕಾರ್ತಿಕ್ ಅವರನ್ನು ಕಂಪನಿ ಆಯ್ಕೆ ಮಾಡಿಕೊಂಡಿದೆ.
ಉಡುಪಿ ತಾಲೂಕು ಅಲೆವೂರು ಮೂಲದ, ಸದ್ಯ ಅಮೆರಿಕ ನಿವಾಸಿ, ದಿ.ಡಾ. ಸುಬ್ರಹ್ಮಣ್ಯ ರಾವ್ ಅವರ ಪುತ್ರ ಕಾರ್ತಿಕ್ ರಾವ್ (46) ಅಮೆರಿಕದಲ್ಲಿ ಹುಟ್ಟಿದವರು. ಸ್ಯಾನ್ ಫೋರ್ಡ್ ವಿವಿಯಿಂದ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಷಯದಲ್ಲಿ ಎಂಎಸ್ ಪದವಿ ಪೂರೈಸಿದ್ದಾರೆ. 20 ವರ್ಷಗಳಿಂದ ಕಂಪನಿಯ ಸ್ಥಾಪನೆಯಿಂದ ತೊಡಗಿ ಕಾರ್ಯ ನಿರ್ವಾಹಕನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಾರ್ತಿಕ್ ಸಂಸ್ಥಾಪಕ ಮತ್ತು ಸಿಇಒ ಆಗಿದ್ದ ಕೌಡ್ ಮಾನಿಟರಿಂಗ್ ಸಂಬಂಧಿತ ಸಿಗ್ನಲ್ ಎಫ್ ಎಕ್ಸ್ ಎನ್ನುವ ಕಂಪನಿಯನ್ನು ಇತ್ತೀಚೆಗೆ ಸ್ಪ್ಲಂಕ್ ಕಂಪನಿಯು 1.05 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿತ್ತು.
ಕಾರ್ತಿಕ್ ಅವರ ತಂದೆ, ಉಡುಪಿ ಅಲೆವೂರಿನ ದಿವಂಗತ ಡಾ.ಎಲ್. ಸುಬ್ರಹ್ಮಣ್ಯ ರಾವ್ ಚೆನ್ನೈನ ಸ್ಪ್ಯಾನ್ಸಿ ಮೆಡಿಕಲ್ ಕಾಲೇಜಿನಿಂದ ಚಿನ್ನದ ಪದಕ ಪಡೆದಿದ್ದು, ಕ್ಯಾನ್ಸರ್ ಸ್ಪೆಷಲಿಸ್ಟ್ ಆಗಿ ಹೆಸರು ಮಾಡಿದ್ದರು. ತಾಯಿ ರಜಿ ರಾವ್ ಹಿರಿಯ ಚಲನಚಿತ್ರ ನಿರ್ದೇಶಕ ಬಿ. ವಿಠಲ ಆಚಾರ್ಯರ ಪುತ್ರಿ. ಅಜ್ಜ ದಿವಂಗತ ಜಿ. ಲಕ್ಷ್ಮೀನಾರಾಯಣ್ ಅವರು ಕೂಡ ಪ್ರತಿಭಾವಂತರಾಗಿದ್ದು ಇಂಡಿಯನ್ ಬ್ಯಾಂಕ್ ಚೇರ್ಮೆನ್ ಆಗಿದ್ದರು.
Contentful Appoints Karthik Rau As CEO from Udupi. Karthik brings more than 20 years of leadership experience to Contentful as a company founder and seasoned operating executive. Most recently, Karthik served as founder and CEO of SignalFx, a cloud monitoring company focused on DevOps teams that was acquired by Splunk for $1.05 billion. Previously, Karthik held several leadership roles in the industry, including Vice President of Product Management and Worldwide Marketing at VMware during its early growth years. Karthik was one of the principal executives who led the VMware IPO, the largest technology IPO of 2007.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm