ಬ್ರೇಕಿಂಗ್ ನ್ಯೂಸ್
29-04-24 09:41 pm Mangaluru Correspondent ಕರಾವಳಿ
ಉಳ್ಳಾಲ, ಎ.29: ಗುರುಪುರದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಆಟೋ ರಿಕ್ಷಾ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸೋಮೇಶ್ವರ ಪುರಸಭೆ ಸದಸ್ಯೆಯ ಪತಿ ಮೃತಪಟ್ಟ ಘಟನೆ ನಡೆದಿದೆ.
ಕುಂಪಲ ಹನುಮಾನ್ ನಗರ ನಿವಾಸಿ ಅಶೋಕ್ ಶೆಟ್ಟಿ(53) ಮೃತ ವ್ಯಕ್ತಿ. ಸೋಮೇಶ್ವರ ಪುರಸಭೆಯ ಬಿಜೆಪಿ ಸದಸ್ಯೆ ಮಾಲತಿ ನಾಯ್ಕ್ ಅವರ ಪತಿಯಾಗಿರುವ ಅಶೋಕ್ ಅವರು ಹಿಂದೆ ಬಸ್ಸು ಚಾಲಕರಾಗಿದ್ದು ಇತ್ತೀಚೆಗೆ ಆಟೋ ರಿಕ್ಷಾ ಚಲಾಯಿಸುತ್ತಿದ್ದರು. ಭಾನುವಾರ ರಾತ್ರಿ ಅವರು ಹಿರಿಯ ಮಗಳನ್ನ ಕಾರ್ಕಳದ ಅಳಿಯನ ಮನೆಗೆ ಆಟೋ ರಿಕ್ಷಾದಲ್ಲೇ ಬಿಟ್ಟು ಹಿಂದಿರುಗುತ್ತಿದ್ದ ವೇಳೆ ಗುರುಪುರದಲ್ಲಿ ಅಪಘಾತ ಸಂಭವಿಸಿದೆ. ತಡರಾತ್ರಿ ಅಪಘಾತ ಸಂಭವಿಸಿದ್ದರಿಂದ ಯಾರೂ ಅಶೋಕ್ ಅವರನ್ನ ಗಮನಿಸಿಲ್ಲ. ಬಳಿಕ ರಕ್ತದ ಮಡುವಿನಲ್ಲಿದ್ದ ಅಶೋಕ್ ಅವರನ್ನ ಯಾರೋ ಗಮನಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಅಶೋಕ್ ಅವರು ಮೂವರು ಪುತ್ರಿಯರು, ಪತ್ನಿಯನ್ನ ಅಗಲಿದ್ದಾರೆ.


ಕುಂಪಲದಲ್ಲಿ ಒಂದೇ ದಿನ ಎರಡು ಸಾವು;
ಕುಂಪಲ ಹನುಮಾನ್ ನಗರದ ಅಶೋಕ್ ಅವರು ಭಾನುವಾರ ರಾತ್ರಿ ಅಪಘಾತಕ್ಕೀಡಾಗಿ ಸೋಮವಾರ ಸಂಜೆ ವೇಳೆ ಮೃತ ಪಟ್ಟಿದ್ದರೆ, ಸೋಮವಾರ ಬೆಳಗ್ಗೆ ಅಶೋಕ್ ಅವರ ಎದುರು ಮನೆ ನಿವಾಸಿ ಯೋಗೀಶ್ ಅವರು ನೇಣು ಬಿಗಿದು ಆತ್ಮಹತ್ಯೆಗೈದಿದ್ದು ಒಂದೇ ದಿನದಲ್ಲಿ ಕುಂಪಲದ ಹನುಮಾನ್ ನಗರ ಪ್ರದೇಶದಲ್ಲಿ ಎರಡು ಸಾವು ಸಂಭವಿಸಿದೆ.
Mangalore In an auto accident in Gurupura, a Someshwara town municipal council member's husband was killed. The deceased has been identified as Ashok Shetty from Kumpala.
28-05-26 06:18 pm
HK News Staffer
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
CM Siddaramaiah resigns: ಸಿಎಂ ಸ್ಥಾನಕ್ಕೆ ಸಿದ್ದ...
28-05-26 03:24 pm
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 09:44 pm
HK News Desk
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm