ಬ್ರೇಕಿಂಗ್ ನ್ಯೂಸ್
30-04-24 08:04 pm Mangalore Correspondent ಕರಾವಳಿ
ಉಳ್ಳಾಲ, ಎ.30: ಹೊನ್ನು, ಮಣ್ಣಿಗೆ ಹೂಡಿದ ಹೂಡಿಕೆಯಿಂದ ಎಂದಿಗೂ ನಷ್ಟ ಸಾಧ್ಯವಿಲ್ಲ. ನಾವು ಖರೀದಿಸುವ ಭೂಮಿ ಮತ್ತು ಚಿನ್ನವು ನಮ್ಮ ಜೀವನಕ್ಕೆ ಭದ್ರತೆಯಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಆರಂಭಗೊಂಡ ನೂತನ ಸೂಪರ್ ಗೋಲ್ಡ್ & ಡೈಮಂಡ್ಸ್ "ನ ಎರಡನೇ ಜ್ಯುವೆಲ್ಲರಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಸೂಪರ್ ಗೋಲ್ಡ್ ಜ್ಯುವೆಲ್ಲರಿಯು ಅತ್ಯುತ್ತಮ ಗುಣಮಟ್ಟ ವಿಶ್ವಾಸದ ವ್ಯವಹಾರ ನಡೆಸುತ್ತ ಬಂದಿದೆ. ಕಲ್ಲಾಪುವಿನಲ್ಲಿ ನೂತನ ಶಾಖೆ ಆರಂಭಿಸುವುದರೊಂದಿಗೆ ಊರಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದಂತಾಗಿದೆ. ಹೊಸ ಜ್ಯುವೆಲ್ಲರಿ ಮಳಿಗೆಗಳ ಆರಂಭದಿಂದ ಮಾಲಕರಿಗೆ ಮಾತ್ರವಲ್ಲದೆ ಉದ್ಯೋಗಿಗಳಿಗೂ ಅನುಕೂಲವಾಗಿ ಅನೇಕ ಕುಟುಂಬಗಳ ಜೀವನ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಅಲ್ಲದೆ ಇಲ್ಲಿನ ಜಮೀನಿನ ಮೌಲ್ಯವೂ ವೃದ್ಧಿಯಾಗುತ್ತದೆ. ಇಂತಹ ಇನ್ನಷ್ಟು ವಾಣಿಜ್ಯ ಕೆಂದ್ರಗಳು ಸ್ಥಾಪನೆಗೊಂಡು ಜನರ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸೇವೆ ನೀಡಲಿ. ಸೂಪರ್ ಗೋಲ್ಡ್ ಶಾಖೆಗಳು ರಾಜ್ಯ, ದೇಶಕ್ಕೆ ವ್ಯಾಪಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ಪಸರಿಸಲಿ. ಇಂದಿನ ಯುವಕರು ಬೇಗನೆ ಶ್ರೀಮಂತರಾಗಲು ಶಾರ್ಟ್ ಕಟ್ ದಾರಿಯನ್ನು ಅವಲಂಬಿಸಿ ಅಷ್ಟೇ ಬೇಗನೆ ನೆಲಕಚ್ಚಿ ಹೋಗುತ್ತಾರೆ. ಆದರೆ ಕಷ್ಟ ಪಟ್ಟು ಹಂತ ಹಂತವಾಗಿ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಸೂಪರ್ ಸಮೂಹ ಸಂಸ್ಥೆಗಳೇ ನಿದರ್ಶನವಾಗಿದೆ ಎಂದರು.





ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಚೆಯರ್ ಮ್ಯಾನ್ ಟಿ.ಎಂ ಬಾವಾ ಅವರು 2016 ರಲ್ಲಿ ತೊಕ್ಕೊಟ್ಟುವಿನಲ್ಲಿ ಚಿನ್ನದ ಮಳಿಗೆ ಆರಂಭಿಸಿ ತಯಾರಿ ವೆಚ್ಚ ಕಡಿಮೆ ಮಾಡಿ ಗ್ರಾಹಕರಿಗೆ ನೀಡುವ ಮೂಲಕ ಯಶಸ್ಸು ಕಂಡಿದ್ದೇವೆ. ಇದೀಗ ಕಲ್ಲಾಪು ಬಳಿ ನಿರ್ಮಾಣಗೊಂಡ ಸ್ವಂತ ಕಟ್ಟಡ ದಲ್ಲಿ ಎರಡನೇ ಮಳಿಗೆ ಆರಂಭಿಸಿದ್ದೇವೆ. ಮದುವೆ ಸಮಾರಂಭಕ್ಕಾಗಿ ಚಿನ್ನ ಖರೀದಿ ಮಾಡುವವರಿಗೆ ವಿಶೇಷವಾದ ರಿಯಾಯಿತಿ ಕೂಡ ಇದೆ. ಚಿನ್ನ ಖರೀದಿಯಲ್ಲಿ ಗ್ರಾಹಕರಿಗೆ ಖುಷಿ ಸಿಗಬೇಕು. ಮುಂದಿನ ಹಂತದಲ್ಲಿ ಚಿನ್ನಾಭರಣ ಖರೀದಿಯಡಿ ಲಕ್ಕಿ ಕೂಪನ್ ಮೂಲಕ ಬೈಕ್ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳ ಡ್ರಾ ಕಾರ್ಯಕ್ರಮ ಇಡಲಾಗುವುದು. ಚಿನ್ನಾಭರಣ ಖರೀದಿ ಮಾಡಿದವರಿಗೆ ವಿಶೇಷ ಉಡುಗೊರೆ ಕೂಡ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಪದ್ಮರಾಜ್, ಹೈದರ್ ಪರ್ತಿಪ್ಪಾಡಿ, ಇಬ್ರಾಹಿಂ ಕೋಡಿಜಾಲ್, ದಿನೇಶ್ ರೈ, ನಾಸೀರ್ ಅಹ್ಮದ್ ಸಾಮಣಿಗೆ, ಸಲೀಂ ಯು.ಬಿ., ಶರೀಫ್ ವೈಟ್ ಸ್ಟೋನ್, ಸಾಗರ್ ಇಸ್ಮಾಯಿಲ್, ಪಾಲುದಾರರಾದ ಯು.ಎನ್.ತಯ್ಯುಬ್ ಹಾಜಿ , ಫೈಝಲ್, ಯು.ಎಂ.ಹಸನಬ್ಬ ಹಾಜಿ, ಯು.ಎ.ಮೊಹಮ್ಮದ್, ಯು.ಎಂ.ಸೀದಿಯಬ್ಬ, ಅಬ್ದುಲ್ ರಹಿಮಾನ್ ಹಾಜಿ, ಮಾರ್ಕೆಟಿಂಗ್ ಮ್ಯಾನೇಜಿಂಗ್ ಪಾರ್ಟ್ನರ್ಸ್ ಮೊಹಮ್ಮದ್ ಖಲಂದರ್, ಮೊಹಮ್ಮದ್ ನದೀಂ ಮತ್ತಿತರರು ಉಪಸ್ಥಿತರಿದ್ದರು. ವಿಜೆ ಶಿಶಾನ್ ಕೌಡೂರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಆಸೀಫ್ ವಂದಿಸಿದರು.
Mangalore Super gold and diamound showroom inaugurated at Thokottu by speaker UT Khader.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm