ಬ್ರೇಕಿಂಗ್ ನ್ಯೂಸ್
01-05-24 08:55 pm Mangalore Correspondent ಕರಾವಳಿ
ಉಳ್ಳಾಲ, ಮೇ 1: ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದ ಐದು ತಿಂಗಳ ಹಸುಗೂಸಿನ ಶಸ್ತ್ರಚಿಕಿತ್ಸೆಗೆ 50 ಲಕ್ಷದ ಅವಶ್ಯಕತೆ ಇದೆ ಎಂದು ಎರಡು ದಿನಗಳ ಹಿಂದಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಹೆತ್ತವರು ಮಾಡಿದ್ದ ಮನವಿಗೆ ದೇಶ, ವಿದೇಶದಿಂದ ಅಭೂತಪೂರ್ವ ಸ್ಪಂದನೆ ನೀಡಿದ್ದು, ಕೇವಲ 48 ಗಂಟೆಗಳಲ್ಲಿ 60.62 ಲಕ್ಷ ರೂ. ಸಂಗ್ರಹವಾಗಿದೆ. ಚಿಕಿತ್ಸೆಗೆ ಬೇಕಾದ ಹಣ ಸಂಗ್ರಹ ಆಗಿರುವುದರಿಂದ ಮುಂದೆ ಬ್ಯಾಂಕ್ ಖಾತೆಗೆ ಯಾರೂ ಹಣ ವರ್ಗಾಯಿಸುವುದು ಬೇಡ ಎಂದು ಮಗುವಿನ ಹೆತ್ತವರಾದ ಕೊಣಾಜೆ ನಿವಾಸಿ ಸಂತೋಷ್ ಮೊಂತೇರೋ ಮತ್ತು ಪ್ರಿಯಾ ಅವರು ತಿಳಿಸಿದ್ದಾರೆ.
ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು ಈ ಬಗ್ಗೆ ಮಾಹಿತಿ ನೀಡಿದರು. ಐದು ತಿಂಗಳ ಮಗು ಪ್ರಿಯೋನ್ ಸ್ಯಾಮ್ ಚಿಕಿತ್ಸೆಗೆ ಸಂಬಂಧಿಸಿದಂತೆ ಆತನ ಹೆತ್ತವರು ತನ್ನ ಬಳಿಗೆ ಬಂದು ಸಹಕರಿಸುವಂತೆ ಹೇಳಿದ್ದರು. ಅವರ ಒಪ್ಪಿಗೆಯ ಮೇರೆಗೆ ಮಗುವಿನ ತಾಯಿ ಪ್ರಿಯಾ ಅವರು ಮಗುವಿನ ಸ್ಥಿತಿಯ ಕುರಿತು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ವಿಡಿಯೋ ರೆಕಾರ್ಡ್ ಮಾಡಿ ನಮ್ಮ ಫೇಸ್‍ಬುಕ್ ಪೇಜ್ ಸೇರಿದಂತೆ ವಾಟ್ಸಪ್ ಗ್ರೂಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿದ್ದರು. ಪೋಸ್ಟ್ ಹಂಚಿದ 48 ಗಂಟೆಗಳಲ್ಲೇ ದೇಶ, ವಿದೇಶದಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು ಒಂದು ರೂ.ನಿಂದ ಒಂದು ಲಕ್ಷ ರೂಪಾಯಿ ವರೆಗಿನ ದಾನಿಗಳಿಂದ ಸಹಾಯಹಸ್ತ ಮಗುವಿನ ತಾಯಿ ಮತ್ತು ತಂದೆಯ ಬ್ಯಾಂಕ್ ಖಾತೆಗೆ ಹರಿದು ಬಂದಿದ್ದು ಒಟ್ಟು 60.62 ಲಕ್ಷ ರೂ. ಸಂಗ್ರಹಣೆಯಾಗಿದೆ.


ಹಣ ಸಂಗ್ರಹಕ್ಕೆ ಕ್ಯಾಥೋಲಿಕ್ ಸಂಘಟನೆಗಳು ಸೇರಿದಂತೆ ಎಲ್ಲಾ ಜಾತಿ ಧರ್ಮದ ಸಂಘ ಸಂಸ್ಥೆಗಳು, ದಾನಿಗಳು ಸಹಾಯಹಸ್ತ ನೀಡಿದ್ದು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಸಂಗ್ರಹವಾಗಿರುವುದು ವಿಶೇಷ ಎಂದು ಫಯಾಝ್ ತಿಳಿಸಿದರು.
ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ಒಂದು ಹಂತದ ಶಸ್ತ್ರಚಿಕಿತ್ಸೆ ನಡೆದಿದ್ದು, ಮಗು ಆರೋಗ್ಯವಾಗಿದೆ. ಮಗುವಿನ ಚಿಕಿತ್ಸೆಗೆ ಬೇಕಾದ ಹಣ ಜಮಾವಣೆಗೊಂಡ ಕಾರಣ ದಾನಿಗಳು ಇನ್ನು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ಬೇಡ. ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ಎಲ್ಲಾ ದಾನಿಗಳಿಗೂ ಮಗುವಿನ ಹೆತ್ತವರು ತುಂಬು ಹೃದಯದಿಂದ ಕೃತಜ್ಞತೆ ಅರ್ಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಗುವಿನ ಹೆತ್ತವರಾದ ಸಂತೋಷ್ ಮೊಂತೇರೋ, ಪ್ರಿಯಾ, ನೌಫಾಲ್ ದೇರಳಕಟ್ಟೆ, ಮೆರ್ಸಿ ಫ್ರೆಂಡ್ಸ್ ಅಸೈಗೋಳಿ ಇದರ ಗೌರವಾಧ್ಯಕ್ಷ ಐವನ್ ಮೊಂತೇರೋ ಉಪಸ್ಥಿತರಿದ್ದರು.
Mangalore Konje Baby seeking medical help goes viral on social media, 60 lakhs donations received to parents Santosh monterio and Priya after a video in which mother is crying for help to save her 5 month old baby for treatment which was estimated 50 lakhs but after her video went viral parents received 60 lakhs.
28-05-26 06:18 pm
HK News Staffer
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
CM Siddaramaiah resigns: ಸಿಎಂ ಸ್ಥಾನಕ್ಕೆ ಸಿದ್ದ...
28-05-26 03:24 pm
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 09:44 pm
HK News Desk
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm