ಬ್ರೇಕಿಂಗ್ ನ್ಯೂಸ್
02-12-20 10:41 pm Mangaluru Correspondent ಕರಾವಳಿ
ಮಂಗಳೂರು, ಡಿ.3: ನಾರಾಯಣ ಗುರುಗಳ ಹೆಸರನ್ನು ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ನಾಮಕರಣ ಮಾಡುವ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಇದೇ ವಿಚಾರದಲ್ಲಿ ಇಂದು ಮಹಾನಗರ ಪಾಲಿಕೆಯ ಸಭೆಯಲ್ಲಿ ನಡೆದ ಚರ್ಚೆ ಭಾರೀ ಗದ್ದಲ, ತಳ್ಳಾಟ, ವಾಗ್ವಾದಕ್ಕೆ ಕಾರಣವಾಯಿತು.
ಪಾಲಿಕೆಯ ಸಭೆಯ ಆರಂಭದಲ್ಲಿ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ನಾರಾಯಣ ಗುರುಗಳ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಗುರುಗಳ ಬಗ್ಗೆ ಸಮಾಜದ ಎಲ್ಲರಿಗೂ ಗೌರವ ಇದೆ. ಎಲ್ಲ ಸಮಾಜದ ಬಂಧುಗಳು ಒಪ್ಪುವ ನಾರಾಯಣ ಗುರುಗಳ ಹೆಸರನ್ನು ಮಂಗಳೂರಿನ ರೈಲ್ವೇ ನಿಲ್ದಾಣಕ್ಕೆ ಇಡಬೇಕು. ಇದರ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಮಂಡಿಸಬೇಕು ಎಂದು ಒತ್ತಾಯ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಬಿಜೆಪಿ ಸದಸ್ಯರು, ನಾರಾಯಣ ಗುರುಗಳ ಬಗ್ಗೆ ಗೌರವ ನಿಮಗೆ ಈಗ ಬಂದಿದ್ದೇ ಎಂದು ಪ್ರಶ್ನೆ ಮಾಡಿದ್ದಲ್ಲದೆ, ಲೇಡಿಹಿಲ್ ವೃತ್ತಕ್ಕೆ ಹೆಸರಿಡುವ ವಿಚಾರದಲ್ಲಿ ಸ್ಟಾಂಡಿಂಗ್ ಕಮಿಟಿ ಸಭೆಯಲ್ಲಿ ನೀವು ಆಕ್ಷೇಪ ಸೂಚಿಸಿದ್ದೀರಿ.. ನಿಮಗೆ ಗುರುಗಳ ಬಗ್ಗೆ ಗೌರವ ಇದ್ದರೆ ಅದನ್ನು ಮಾಡುತ್ತಿದ್ದಿರಾ ಎಂದು ತರಾಟೆಗೆತ್ತಿಕೊಂಡರು. ಇದೇ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಯ್ತು. ಗುರುಗಳು ದೊಡ್ಡವರು, ರಾಷ್ಟ್ರ ಮಟ್ಟದ ರೈಲ್ವೇ ನಿಲ್ದಾಣಕ್ಕೆ ಅವರ ಹೆಸರಿಡುವುದೇ ಸೂಕ್ತ ಎಂದು ಕಾಂಗ್ರೆಸಿಗರು ವಾದಿಸಿದರೆ, ನಾವು ಈಗಾಗ್ಲೇ ಲೇಡಿಹಿಲ್ ವೃತ್ತಕ್ಕೆ ಹೆಸರಿಡುವ ಬಗ್ಗೆ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದೇವೆ. ಈ ಬಗ್ಗೆ ಕೌನ್ಸಿಲ್ ಮೀಟಿಂಗಿನಲ್ಲಿ ನಿರ್ಣಯ ಕೈಗೊಳ್ಳುವಾಗ ನೀವ್ಯಾಕೆ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ಪ್ರತಿವಾದ ಮಾಡಿದರು. ಎರಡೂ ಪಕ್ಷಗಳ ನಾಯಕರ ಮೊಂಡು ವಾದಕ್ಕೆ ಇಡೀ ಸಭೆ ಬಲಿಯಾಯ್ತು. ಕಾಂಗ್ರೆಸ್ ನಾಯಕರು ಮೇಯರ್ ಬಳಿ ಬಂದು ಕೂಗಾಟ, ತಳ್ಳಾಟದಲ್ಲಿ ತೊಡಗಿದರೆ, ಬಿಜೆಪಿ ನಾಯಕರು ಸ್ವರ ಏರಿಸಿಕೊಂಡು ಗದ್ದಲಕ್ಕೆ ವೇದಿಕೆ ಒದಗಿಸಿದ್ದು ನಾರಾಯಣ ಗುರುಗಳಿಗೇ ಮುಜುಗರ ತರುವಂತಾಗಿತ್ತು.
ಇದೇ ವೇಳೆ, ಕಾಂಗ್ರೆಸಿಗರು ಉಗ್ರರ ಪರವಾದ ಗೋಡೆ ಬರಹದ ವಿಚಾರದಲ್ಲಿ ಬಿಜೆಪಿ ಸರಕಾರದ ವೈಫಲ್ಯದ ಬಗ್ಗೆ ಬೊಟ್ಟು ಮಾಡಿದ್ರು. ಗೋಡೆ ಬರಹದ ಪ್ರಕರಣ ಆಗಿ ವಾರ ಕಳೆದರೂ, ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಬಿಜೆಪಿ ಸರಕಾರ ಇರುವಾಗ ಮಾತ್ರ ಸಾಧ್ಯ. ನಿಮ್ಮ ಸರಕಾರದ ವೈಫಲ್ಯದಿಂದಾಗಿ ಗೋಡೆ ಬರಹಗಳು ಕಾಣಿಸಿಕೊಂಡಿವೆ ಎಂದು ಬಿಜೆಪಿ ನಾಯಕರನ್ನು ಛೇಡಿಸಿದರು. ಈ ವಿಚಾರದಲ್ಲೂ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ಗದ್ದಲ ಉಂಟಾಯಿತು.
Fight erupts between Congress and BJP leaders at the Mangalore city corporation Meeting in regards to renaming Mangalore Railway station as well as Mangalore Airport.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 07:25 pm
HK News Desk
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm