ಬ್ರೇಕಿಂಗ್ ನ್ಯೂಸ್
15-05-24 05:13 pm Udupi Correspondent ಕರಾವಳಿ
ಉಡುಪಿ, ಮೇ.15: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದೆ ಬಂಡಾಯ ಎದ್ದು ಪಕ್ಷೇತರ ಸ್ಪರ್ಧೆ ಘೋಷಣೆ ಮಾಡಿರುವ ಮಾಜಿ ಶಾಸಕ ರಘುಪತಿ ಭಟ್, ಕರಂಬಳ್ಳಿಯ ತಮ್ಮ ನಿವಾಸದ ಬಳಿ ಚುನಾವಣಾ ಕಚೇರಿಯನ್ನು ಆರಂಭಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಜನಸಂಘದ ಕಾಲದಿಂದ ಪಕ್ಷ ಕಟ್ಟಿದವರು ಚುನಾವಣೆ ಕಚೇರಿ ಉದ್ಘಾಟಿಸಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಇಲ್ಲಿ ಸೇರಿರುವ ಕಾರ್ಯಕರ್ತರೇ ಸಾಕ್ಷಿ. ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎಂಬ ಸಂಶಯ ಯಾರಿಗೂ ಬೇಡ. ನಾಳೆ(ಮೇ 16) ಮೈಸೂರಿನಲ್ಲಿ ಮಧ್ಯಾಹ್ನ 1.30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಐದು ಜಿಲ್ಲೆಗಳ 28 ವಿಧಾನಸಭಾ ಕ್ಷೇತ್ರದಿಂದ ಬೆಂಬಲಿಗರು ಮೈಸೂರಿಗೆ ಬರುತ್ತಾರೆ.
ಜನಸಂಘದ ಪ್ರಮುಖರು ಕಚೇರಿ ಉದ್ಘಾಟನೆಗೆ ಬಂದಿರುವುದರಿಂದ ಆತ್ಮಸ್ಥೈರ್ಯ ಹೆಚ್ಚಿದೆ. ಪ್ರಧಾನಿ ಮೋದಿ ನನ್ನ ಆದರ್ಶ, ಅವರ ಅಭಿಮಾನಿಯಾಗಿ ಮೋದಿ ಫೋಟೋ ಹಾಕಿಕೊಳ್ಳುವ ಅರ್ಹತೆ ನನಗೆ ಇದೆ. ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಶಿವಮೊಗ್ಗದಲ್ಲಿ ಹಗಲಿರುಳು ಕೆಲಸ ಮಾಡಿದ್ದೇನೆ. ಡಾ.ವಿ.ಎಸ್ ಆಚಾರ್ಯ, ಕರಂಬಳ್ಳಿ ಸಂಜೀವ ಶೆಟ್ಟಿ ನನ್ನ ರಾಜಕೀಯದ ಪ್ರೇರಕರಾಗಿದ್ದವರು.
ಪ್ರತಿ ವರ್ಷ ನಮ್ಮ ಮನೆಯಲ್ಲಿ ದೈವದ ಕೋಲ ನಡೆಯುತ್ತದೆ. ಮನೆಯ ಗೃಹಪ್ರವೇಶದ ಪ್ರಯುಕ್ತವೂ ಕೋಲ ಮಾಡಿಸಿದ್ದೇವೆ. ನನಗೆ ಕಲ್ಕುಡ ದೈವದ ಆಶೀರ್ವಾದ ಸಿಕ್ಕಿದೆ. ನಿನ್ನ ನಿಲುವು ಸರಿ ಇದೆ, ನೂರಕ್ಕೆ ನೂರು ಗೆದ್ದು ಬರುತ್ತಿ ಎಂಬ ಅಭಯ ಸಿಕ್ಕಿದೆ. ನಾನು ದೈವವನ್ನು ಬಹಳ ನಂಬುತ್ತೇನೆ, ದೈವದ ಅಭಯದಿಂದ ನನಗೆ ಹುಮ್ಮಸ್ಸು ಬಂದಿದೆ ಎಂದು ರಘುಪತಿ ಭಟ್ ಹೇಳಿದರು.
ಪಕ್ಷದಲ್ಲಿ ದುಡಿದವರಿಗೆ, ಕಾರ್ಯಕರ್ತರಿಗೆ ಬೆಲೆ ಇಲ್ಲದಾಗಿದೆ. ಲೋಕಸಭೆ, ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆ ನೋಡಿದರೆ ಪಕ್ಷದಲ್ಲಿ ಆಗುತ್ತಿರುವ ಬದಲಾವಣೆ ಕಾಣಿಸ್ತಾ ಇದೆ. ಹಿಂದೆ ಬೂತ್ ಮಟ್ಟದಲ್ಲಿ ಅಭಿಪ್ರಾಯ ಕೇಳಿ ನಿರ್ಧಾರ ಮಾಡುತ್ತಿದ್ದರು. ಈ ಸಲ ವಿಧಾನಸಭಾ ಅಭ್ಯರ್ಥಿ ಆಯ್ಕೆಗಾಗಿ ವೋಟಿಂಗ್ ಮಾಡಿದರೂ ಆ ವೋಟನ್ನು ಲೆಕ್ಕವೇ ಮಾಡಿಲ್ಲ. ಹಿರಿಯ ಕಾರ್ಯಕರ್ತರನ್ನು ಬಿಟ್ಟು ಚಮಚಾಗಿರಿ ಮಾಡುವವರಿಗೆ ಟಿಕೆಟ್ ಕೊಡುತ್ತಿದ್ದಾರೆ. ನಾನು ಯಾವುದೇ ನಾಯಕರ ಮನೆ ಬಾಗಿಲಿಗೆ ಹೋಗುವ ಸ್ವಭಾವದವನಲ್ಲ. ಸದಾ ಕಾರ್ಯಕರ್ತರ ಜೊತೆ ಇರುತ್ತೇನೆ, ಹಾಗಾಗಿ ಪ್ರತಿ ಬಾರಿ ಟಿಕೆಟ್ ನಿರಾಕರಣೆ ಆಗುತ್ತದೆ. ನಾನು ಚಮಚಾಗಿರಿ ಮಾಡಲ್ಲ. ಚಮಚಾಗಿರಿ ಮಾಡಿದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ ಎಂದು ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು.
Former MLA Raghupathi Bhat, who rebelled against the South West Graduates constituency and announced his candidature as an independent candidate, has opened an election office near his residence in Karamballi.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm