ಬ್ರೇಕಿಂಗ್ ನ್ಯೂಸ್
22-05-24 07:29 pm Mangalore Correspondent ಕರಾವಳಿ
ಮಂಗಳೂರು, ಮೇ.22: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಪೊಲೀಸರ ಬಂಧಿಸುವ ಪ್ರಯತ್ನಕ್ಕೆ ಬಿಜೆಪಿ ಕಾರ್ಯಕರ್ತರು ತಡೆಯೊಡ್ಡಿದ್ದಾರೆ. ಬೆಳಗ್ಗಿನಿಂದ ಇಡೀ ದಿನ ಪೊಲೀಸರು ಶಾಸಕರನ್ನು ಬಂಧಿಸಲು ಗರ್ಡಾಡಿಯ ಮನೆಯಲ್ಲಿ ಜಮಾಯಿಸಿದ್ದರೆ, ನೂರಾರು ಕಾರ್ಯಕರ್ತರು ಸೇರಿದ್ದು ಶಾಸಕರನ್ನು ಬಂಧಿಸಲು ಬಿಡುವುದಿಲ್ಲ ಎಂದು ಟೊಂಕ ಕಟ್ಟಿ ನಿಂತಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಬೆಳ್ತಂಗಡಿ ಠಾಣೆ ಇನ್ಸ್ ಪೆಕ್ಟರ್ ಸುಬ್ರಪುರ ಮಠ್ ಗರ್ಡಾಡಿಯ ಶಾಸಕರ ನಿವಾಸಕ್ಕೆ ತಮ್ಮ ತಂಡದೊಂದಿಗೆ ಆಗಮಿಸಿದ್ದರು. ಅದೇ ಹೊತ್ತಿನಲ್ಲಿ ಒಂದಷ್ಟು ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದು, ಬಂಧನಕ್ಕೆ ಬಿಡುವುದಿಲ್ಲ ಎಂದು ಪೊಲೀಸರಿಗೆ ಘೆರಾವ್ ಹಾಕಿದ್ದಾರೆ. ಕೆಲಹೊತ್ತಿನಲ್ಲೇ ಜಿಲ್ಲೆಯ ಇತರ ಬಿಜೆಪಿ ಶಾಸಕರು, ಪ್ರಮುಖ ನಾಯಕರು ಮತ್ತು ಮಂಗಳೂರಿನಿಂದ ವಕೀಲರು ಆಗಮಿಸಿದ್ದು, ಪೊಲೀಸರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಮನೆಯ ಒಳಗಡೆ ಬೆಳ್ತಂಗಡಿ ಇನ್ಸ್ ಪೆಕ್ಟರ್, ಡಿವೈಎಸ್ಪಿ ವಿಜಯಪ್ರಸಾದ್ ಮತ್ತು ಬಿಜೆಪಿ ನಾಯಕರು ಹಾಗೂ ವಕೀಲರು ನಿರಂತರ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವಕೀಲ ಶಂಭು ಶರ್ಮ, ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತೇವೆ ಎಂದು ಬಂದಿದ್ದಾರೆ. ವಿಚಾರಣೆಗೆ ಕರೆದೊಯ್ಯಲು ನೋಟೀಸ್ ನೀಡಬೇಕು, ನೋಟೀಸ್ ಕೇಳಿದರೆ ಅವರಲ್ಲಿ ಇಲ್ಲ. ಸೆಕ್ಷನ್ 41 ಪ್ರಕಾರ, ಯಾವ ಕಾರಣಕ್ಕೆ ವಿಚಾರಣೆ ಎಂದು ಅಪರಾಧದ ಬಗ್ಗೆ ಮಾಹಿತಿ ಬರೆದು ನೋಟೀಸ್ ನೀಡಬೇಕಾಗುತ್ತದೆ. ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಬಲ್ಲ ಸೆಕ್ಷನ್ ಇರುವ ಎಫ್ಐಆರ್ ಗಳಲ್ಲಿ ಬಂಧನದ ಬಗ್ಗೆ ನಿಶ್ಚಿತ ಗೈಡ್ ಲೈನ್ಸ್ ಇದೆ ಎಂದು ಹೇಳಿದರು.
ಮಧ್ಯಾಹ್ನದಿಂದ ಸಂಜೆಯ ವರೆಗೂ ಪೊಲೀಸರು ಮತ್ತು ವಕೀಲರ ಮಾತುಕತೆ ನಡೆದರೂ ಯಾವುದೇ ಫಲಕಾರಿಯಾಗಿಲ್ಲ. ಪೊಲೀಸರು ಸಂಜೆಯಾಗುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಸ್ಥಳಕ್ಕೆ ಬಂದಿದ್ದು, ಶಾಸಕರನ್ನು ಅರೆಸ್ಟ್ ಮಾಡುವುದಕ್ಕೆ ಸಿದ್ಧರಾದಂತಿದ್ದರು. ಇದೇ ವೇಳೆ, 500ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು ಯಾವುದೇ ಕಾರಣಕ್ಕೂ ಶಾಸಕರನ್ನು ಬಂಧನ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇಡೀ ಜಿಲ್ಲೆ ಬಂದ್ ಮಾಡುತ್ತೇವೆ- ನಳಿನ್
ಇದೇ ವೇಳೆ ಸ್ಥಳದಲ್ಲಿದ್ದ ಸಂಸದ ನಳಿನ್ ಕುಮಾರ್, ಕಾಂಗ್ರೆಸ್ ಷಡ್ಯಂತ್ರ ಮಾಡಿ ಶಾಸಕರನ್ನು ಬಂಧಿಸಲು ಮುಂದಾಗಿದೆ. ಶಾಸಕರನ್ನೇ ಬಂಧನ ಮಾಡಿದ್ದೇ ಆದರೆ ನಾಳೆ ಇಡೀ ಜಿಲ್ಲೆಯನ್ನು ಬಂದ್ ಮಾಡುತ್ತೇವೆ ಎಂದಿದ್ದಾರೆ. ಪೊಲೀಸರು ಕಾನೂನು ಮೀರಿ ವರ್ತನೆ ಮಾಡುತ್ತಿದ್ದಾರೆ,. ಕಾನೂನಿಗೆ ಗೌರವ ಕೊಟ್ಟು ಹರೀಶ್ ಪೂಂಜ ನೋಟಿಸ್ ತೆಗೆದುಕೊಂಡಿದ್ದಾರೆ. ಶಾಸಕರು ಐದು ದಿನಗಳ ಕಾಲಾವಕಾಶ ಕೇಳಿದ್ದಾರೆ, ಇದಕ್ಕೂ ಮೀರಿ ಒತ್ತಡ ಹಾಕಿದರೆ ಇಡಿ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ, ಜಿಲ್ಲೆಯನ್ನು ಬಂದ್ ಮಾಡುತ್ತೇವೆ, ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಸ್ಥಳದಲ್ಲಿ ಗಣೇಶ್ ಕಾರ್ಣಿಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರು ಸೇರಿದ್ದಾರೆ.
Harish Poonja possible arrest, high drama between Belthangady police and BJP workers after police entered Harish Poonja house to arrest him for allegedly making threats to the police.In response to the police presence, supporters of MLA Harish Poonja have gathered outside his residence. To maintain order, additional police forces have been summoned to the scene.
21-09-25 10:23 pm
HK News Desk
ಅಳಂದ ವಿಧಾನಸಭೆ ಕ್ಷೇತ್ರದಲ್ಲಿ ಮತ ಕಳ್ಳತನ ; ತನಿಖೆಗ...
21-09-25 01:28 pm
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm