ಬ್ರೇಕಿಂಗ್ ನ್ಯೂಸ್
29-05-24 01:06 pm Mangalore Correspondent ಕರಾವಳಿ
ಮಂಗಳೂರು, ಮೇ.29: ಗಡಿಭಾಗ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿದ್ದ ಹಿಂದು ಯುವತಿಯನ್ನು ಮುಸ್ಲಿಂ ಯುವಕನೊಬ್ಬ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದು ಲವ್ ಜಿಹಾದ್ ಆರೋಪ ಕೇಳಿಬಂದಿದೆ.
ಮೇ 23ರಂದು ಬದಿಯಡ್ಕ ಬಳಿಯ ನಿವಾಸಿ ನೇಹಾ ಎಂಬ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಆನಂತರ, ಮೇ 27ರಂದು ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ನೇಹಾ ಮತ್ತು ಮಿರ್ಶಾದ್ ಎಂಬ ಯುವಕ ಮದುವೆಯಾಗಿರುವ ಬಗ್ಗೆ ನೋಟೀಸ್ ಹಾಕಲಾಗಿತ್ತು. ಇದಕ್ಕೂ ಮೊದಲೇ ಯುವತಿ ಮನೆಯವರು ಬದಿಯಡ್ಕ ಠಾಣೆಗೆ ದೂರು ನೀಡಿದ್ದು, ಮಗಳನ್ನು ಮಿರ್ಶಾದ್ ಎಂಬ ಯುವಕ ಅಪಹರಿಸಿರುವ ಶಂಕೆಯಲ್ಲಿ ದೂರು ನೀಡಿದ್ದರು. ಆದರೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು.
ಮದುವೆಯ ಬಳಿಕ ಯುವಕ- ಯುವತಿ ಬದಿಯಡ್ಕ ಠಾಣೆಗೆ ಹಾಜರಾಗಿದ್ದು, ಯುವತಿ ಗಂಡನ ಜೊತೆಗೆ ತೆರಳುವುದಾಗಿ ಹೇಳಿದ್ದರಿಂದ ಪೊಲೀಸರು ಅವರನ್ನು ಕಾಸರಗೋಡಿನಲ್ಲಿ ಕೋರ್ಟಿಗೆ ಹಾಜರುಪಡಿಸಿ ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಒಟ್ಟು ಪ್ರಕ್ರಿಯೆಗೆ ಮುಸ್ಲಿಂ ಲೀಗ್ ನಾಯಕರು ಬೆಂಗಾವಲು ನಿಂತಿದ್ದು, ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ಯುವತಿಯನ್ನು ಆಮಿಷ ತೋರಿಸಿ ಮದುವೆಯಾಗಿದ್ದು, ಮತಾಂತರ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಹಿಂದು ಸಂಘಟನೆ ನಾಯಕರು ಆರೋಪಿಸಿದ್ದಾರೆ.
ಯುವತಿ ನೇಹಾ ಕಾಸರಗೋಡಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿದ್ದಳು. ನೋಡಲು ಸ್ಫುರದ್ರೂಪಿಯಾಗಿದ್ದ ಯುವತಿಯನ್ನು ಮುಸ್ಲಿಂ ಯುವಕ ಪ್ರೀತಿ ನೆಪದಲ್ಲಿ ಪಟಾಯಿಸಿದ್ದು, ಈಗ ಸದ್ದಿಲ್ಲದೆ ಮದುವೆಯಾಗಿದ್ದಾನೆ. ಯುವತಿ ಮನೆಯವರು ಏನು ಮಾಡುವುದೆಂದು ತೋಚದೆ ಕಂಗಾಲಾಗಿದ್ದಾರೆ. ಬಜರಂಗದಳ ನಾಯಕರು, ಯುವತಿಯನ್ನು ಮರಳಿ ಬರುವಂತೆ ಬಹಿರಂಗ ಕರೆ ನೀಡಿದ್ದು, ಈಗ ಮರಳಿ ಬಂದರೂ ಇಡೀ ಹಿಂದು ಸಮಾಜ ನಿನ್ನ ಜೊತೆಗಿರುತ್ತದೆ ಎಂದು ಆಹ್ವಾನ ನೀಡಿದ್ದಾರೆ.
ಯಾಕೆ ಲವ್ ಜಿಹಾದ್ ಗಂಭೀರ ಸಮಸ್ಯೆ ?
ಕರಾವಳಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಲವ್ ಜಿಹಾದ್ ಮೂಲಕ ಹಿಂದು ಯುವತಿಯರನ್ನು ಪ್ರೀತಿಸಿ ಮದುವೆಯಾಗುವುದು, ಆನಂತರ ಅವರನ್ನು ಇಸ್ಲಾಮಿಗೆ ಮತಾಂತರಿಸುವ ಕೃತ್ಯ ನಡೆದುಬಂದಿದೆ. ಕೆಲವು ಕಡೆ, ಹಿಂದು ಯುವತಿಯರಿಗೆ ಎರಡು ಮಕ್ಕಳು ಕರುಣಿಸಿ ನಡು ನೀರಿನಲ್ಲಿ ಕೈಬಿಟ್ಟು ಮುಸ್ಲಿಂ ಯುವಕರು ಪರಾರಿಯಾಗಿರುವ ಉದಾಹರಣೆಯೂ ಇದೆ. ಕೆಲವು ಯುವತಿಯರನ್ನು ಮದುವೆಯಾಗಿ ಮುಸ್ಲಿಂ ಉಗ್ರವಾದಿಗಳಾಗಿಸಿದ ನಿದರ್ಶನವೂ ಇದೆ. ಈ ರೀತಿಯ ಉದಾಹರಣೆ ಇರುವ ಕಾರಣಕ್ಕೆ ಹಿಂದು ಸಂಘಟನೆಗಳು ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರಕಾರಗಳಿಗೆ ಒತ್ತಡ ಹೇರುತ್ತ ಬಂದರೂ, ಅದಿನ್ನೂ ಸಾಧ್ಯವಾಗಿಲ್ಲ. ಲವ್ ಜಿಹಾದ್ ಅನ್ನುವುದು ಕಠೋರ ಪರಿಕಲ್ಪನೆಯಾಗಿದ್ದರೂ, ಭಾರತೀಯ ಅಪರಾಧ ಕಾನೂನಿನಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಪೊಲೀಸರಿಗೂ ಕ್ರಮ ಕೈಗೊಳ್ಳುವುದು ಸಾಧ್ಯವಾಗಿಲ್ಲ.
Mangalore Love Jihad at Badiyadka in kasaragod, Hindu teacher marries muslim youth, sparks controversy. Hindu outfits have raged over the incident demanding the girl to come back home. But the boy has been backed by Muslim league organisations.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 09:13 pm
HK News Staffer
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm