ಬ್ರೇಕಿಂಗ್ ನ್ಯೂಸ್
31-05-24 05:17 pm Mangalore Correspondent ಕರಾವಳಿ
ಮಂಗಳೂರು, ಮೇ 31: ರಸ್ತೆಯಲ್ಲಿ ನಮಾಜ್ ಮಾಡಿದ ಮಾತ್ರಕ್ಕೆ ರಂಪಾಟ ಮಾಡುವ ಅಗತ್ಯ ಏನಿತ್ತು. ಇಷ್ಟೊಂದು ವಿವಾದ ಎಬ್ಬಿಸಿದ್ದು ಅನಗತ್ಯ ಎನಿಸುತ್ತದೆ. ಪೊಲೀಸರು ಸುಮೊಟೋ ಕೇಸು ಹಾಕಿದ್ದೂ ತಪ್ಪೇ. ಅಗತ್ಯ ಇಲ್ಲದ ಉಸಾಬರಿಗೆ ಹೋಗಿ ವಿವಾದಕ್ಕೆ ಕಾರಣವಾಗಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ನಮಾಜ್ ವಿಚಾರದಲ್ಲಿ ಸುಮೊಟೋ ಕೇಸು ಹಾಕಿದ್ದ ಪೊಲೀಸ್ ಇನ್ಸ್ ಪೆಕ್ಟರನ್ನು ರಜೆಯಲ್ಲಿ ಕಳುಹಿಸಿದ್ದು ಸರಿಯೇ ಎಂದು ಕೇಳಿದ ಪ್ರಶ್ನೆಗೆ, ಇದೆಲ್ಲ ಅನಗತ್ಯ ವಿಚಾರ. ಎಲ್ಲರಿಗೂ ದೇವರು ಒಬ್ಬನೇ. ನಾವೆಲ್ಲ ಅದೇ ತತ್ವ ಅನುಸರಿಸಿಕೊಂಡು ಬಂದವರು. ಹಿಂದು ಮತ್ತು ಮುಸ್ಲಿಂ ಕೋಮುವಾದ ಎರಡನ್ನೂ ವಿರೋಧಿಸಿದ್ದೇವೆ. ಕೆಲವು ಸಂದರ್ಭದಲ್ಲಿ ನಮಾಜ್ ಮಾಡುತ್ತಾರೆ. ಕೆಲವೆಡೆ ಭಜನೆ, ಇನ್ನಿತರ ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆಲ್ಲ ಕೋರ್ಟು, ಕೇಸು ಹಾಕುತ್ತ ಹೋದರೆ ಸಾಮರಸ್ಯಕ್ಕೆ ತೊಂದರೆಯಾಗುತ್ತದೆ. ಪೊಲೀಸರು ಏನೋ ಮಾಡಲು ಹೋಗಿ ತಪ್ಪು ಮಾಡಿದ್ದಾರೆ ಎಂದರು.
ಇದೇ ವಿಚಾರದಲ್ಲಿ ಮಾತನಾಡಿದ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಸಣ್ಣ ವಿಷಯಗಳನ್ನು ರಾಜಕೀಯ ಕಾರಣಕ್ಕೆ ವಿವಾದ ಎಬ್ಬಿಸುವುದು ಸರಿಯಲ್ಲ. ವಿರೋಧ ಪಕ್ಷ ಎಂಬ ಕಾರಣಕ್ಕೆ ಎಲ್ಲವನ್ನೂ ರಾಜಕೀಯ ಮಾಡುವುದೂ ಸರಿಯಲ್ಲ. ನಾವು ಈ ಜಿಲ್ಲೆಯಲ್ಲಿ ಸಾಮರಸ್ಯ ಬೆಳೆಸುವ ಗುರಿ ಇಟ್ಟಿದ್ದೇವೆ. ಮಸೀದಿ ಒಳಗಡೆ ಜಾಗ ಇಲ್ಲವೆಂದು ಹೊರಗಡೆ ನಮಾಜ್ ಮಾಡಿದ ಕಾರಣಕ್ಕೆ ಗೊಂದಲ ಎಬ್ಬಿಸುವುದು, ಪೊಲೀಸರು ಕೇಸು ಹಾಕಿ ತೊಂದರೆ ಕೊಡುವುದು ಸರಿಯಲ್ಲ. ಎಲ್ಲ ಧರ್ಮದವರೂ ಜೊತೆಯಾಗಿ ಬಾಳಬೇಕಾಗುತ್ತದೆ ಎಂದರು. ಅಶ್ರಫ್, ಅಶೋಕ್, ಶಶಿಧರ್ ಹೆಗ್ಡೆ, ಅಪ್ಪಿ ಇದ್ದರು.
Mangalore Namaz in road, congress leader Ramanath rai padmaraj slams police behaviour over sumoto case against guys going namaz. He said this issue should not have been made so big by the police.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
12-09-26 01:10 pm
HK News Staffer
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
12-09-26 03:09 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm