ಬ್ರೇಕಿಂಗ್ ನ್ಯೂಸ್
05-06-24 10:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 5: ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ. ಚುನಾವಣೆ ಎಂದ ಮೇಲೆ ಸೋಲು, ಗೆಲುವು ಸರ್ವೇ ಸಾಮಾನ್ಯ. ದಕ್ಷಿಣ ಕನ್ನಡದಲ್ಲಿ ಟಿಕೆಟ್ ಪಡೆಯುವ ಸಮಯದಲ್ಲಿ ಇಲ್ಲಿ ಟಿಕೆಟ್ ಪಡೆಯುವುದು ವೇಸ್ಟ್ ಅಂತಾ ಜನ ಹೇಳ್ತಾಯಿದ್ರು. ಇಲ್ಲಿ ಗೆಲುವು ಸಾಧ್ಯವಿಲ್ಲ ಅಂದಿದ್ರು. ಕೆಲವೇ ದಿನಗಳ ಪ್ರಚಾರದಲ್ಲಿ 6 ಲಕ್ಷದಷ್ಟು ಮತ ಪಡೆದಿದ್ದೇನೆ ಎಂದರೆ ಹೆಮ್ಮೆಯಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಸೋಲಿನ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಹೇಳಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಪದ್ಮರಾಜ್ ಅವರು, ಮೊದಲಿಗೆ ನಾನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರನ್ನ ಅಭಿನಂದಿಸುತ್ತೇನೆ. ಬಹಳಷ್ಟು ಗೌರವ ನನ್ನ ಪಕ್ಷ ನನಗೆ ಕೊಟ್ಟಿದೆ. ನನ್ನ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳನ್ನ ಹೇಳುತ್ತೇನೆ ಎಂದರು. ನನ್ನ ಪಕ್ಷದ ನಾಯಕರು ಕೆಲಸ ಮಾಡಿದ್ದಾರೆ. ಈ ಹಿಂದಿನ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತ ಪಡೆದಿದ್ದೇನೆ ಅನ್ನೋ ಹೆಮ್ಮೆಯಿದೆ. ನಾನು ಸೋತಿರಬಹುದು, ಆದರೆ ಪಕ್ಷದ ಕಾರ್ಯಕರ್ತರು ನನಗೆ ನೀಡಿದ ಬೆಂಬಲವನ್ನ ಮರೆಯುವಂತಿಲ್ಲ. ಇದು ಅಂತ್ಯವಲ್ಲ ಇದು ಆರಂಭ, ಪ್ರತಿ ಬೂತ್ ಮಟ್ಟದಲ್ಲೂ ಪಕ್ಷ ಸಂಘಟನೆ ಬಲಿಷ್ಠಗೊಳಿಸುತ್ತೇನೆ ಎಂದು ಹೇಳಿದ ಪದ್ಮರಾಜ್, ನನ್ನ ಸ್ಪರ್ಧೆ ಕಂಡು ರಾಷ್ಟ್ರೀಯ ನಾಯಕರು ಕರೆ ಮಾಡಿ ಶ್ಲಾಘಿಸಿದ್ದಾರೆ. ಯೂ ಫೂಟ್ ಲೈಕ್ ಎ ಲಯನ್ ಎಂದು ರಾಷ್ಟ್ರ ಮಟ್ಟದ ನಾಯಕರು ಕರೆ ಮಾಡಿದ್ದಾರೆ. ನಾವು ಪಕ್ಷ ಸಂಘಟನೆ ವಿಚಾರದಲ್ಲಿ ಹಿಂದೆ ಇದ್ದೇವೆ. ನಮ್ಮಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಇದನ್ನ ಬಲಿಷ್ಠಗೊಳಿಸುತ್ತೇವೆ. ರಾಜ್ಯ ಮಟ್ಟದಲ್ಲೂ ನಮ್ಮ ಸಾಧನೆ ಅಲ್ಲಗಳೆಯುವಂತದ್ದಲ್ಲ. ಗ್ಯಾರಂಟಿ ಯೋಜನೆಗಳ ನಡುವೆ 9 ಸೀಟ್ ಬಂದಿರೋದು ಜನರ ಮನಸ್ಸು ಏನು ಎಂದು ಅರಿತುಕೊಳ್ಳಬೇಕಾಗಿದೆ.
ಅಯೋದ್ಯೆ ಅಯೋಧ್ಯೆ ಅಂತಾ ಇದ್ದ ಬಿಜೆಪಿಯನ್ನ ಜನ, ಅಯೋಧ್ಯೆಯಲ್ಲೇ ಸೋಲಿಸಿದ್ದಾರೆ. ಆದರೆ ಮಂಗಳೂರಿನಲ್ಲಿ ಜನ ಬಿಜೆಪಿಯನ್ನ ಗೆಲ್ಲಿಸಿದ್ದಾರೆ. ಬುದ್ಧಿವಂತರು ಎನಿಸಿಕೊಳ್ಳುವ ಇಲ್ಲಿನ ಜನರು ಯೋಚಿಸಬೇಕಾಗಿದೆ ಎಂದು ಕೌಂಟರ್ ನೀಡಿದರು.
ಬ್ರಿಜೇಶ್ ಚೌಟರಿಗೆ ಮನವಿ ಮಾಡುತ್ತೇನೆ, ದಯವಿಟ್ಟು ಬೇರೆಲ್ಲಾ ವಿಚಾರ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಮಾಡಿ. ಸಾಮರಸ್ಯದ ಗತ ವೈಭವ ಮರಳಿ ತರುವ ಪ್ರಯತ್ನ ಮಾಡಿ. ಒಳ್ಳೆಯ ಕೆಲಸಕ್ಕೆ ನಾನು ಬ್ರಿಜೇಶ್ ಚೌಟ ಜೊತೆಗೆ ಇದ್ದೇನೆ. ಸೋಲಿನ ನೈತಿಕ ಹೊಣೆ ನಾನೇ ಹೊತ್ತುಕೊಳ್ಳುತ್ತೇನೆ. ಆದರೆ ಸುಮ್ಮನಾಗೋದಿಲ್ಲ ಪಕ್ಷ ಸಂಘಟನೆ ಬಲಿಷ್ಠಗೊಳಿಸುತ್ತೇವೆ. ಬಿಜೆಪಿಯ ಪಕ್ಷ ಸಂಘಟನೆ ನೋಡಿ ಕಲಿಯಬೇಕು, ಒಳ್ಳೆಯದನ್ನ ಅನುಸರಿಸುವುದರಲ್ಲಿ ತಪ್ಪಿಲ್ಲ. ಎಸ್ ಡಿ ಪಿ ಐ ನವರೂ ಅಸ್ಪೃಶ್ಯರಲ್ಲ ಎಂದು ಹೇಳಿದರು.
ಅಯೋಧ್ಯೆ ರಾಮ ಮಂದಿರ ಸಂದರ್ಭದಲ್ಲೇ ಬಿಜೆಪಿ ಪ್ರಚಾರ ಆರಂಭವಾಗಿದೆ. ಆದರೆ ರಾಮ ಮಂದಿರ ಕಟ್ಟಿಸಿ ರಾಜಕೀಯ ಮಾಡಬಾರದು. ಇದೇ ಕಾರಣಕ್ಕೆ ಅಯೋಧ್ಯೆಯ ಜನ ಬಿಜೆಪಿಯನ್ನ ಸೋಲಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.
Dakshina Kannada Congress MP candidate Padmaraj congratulated Capt Brijesh Chowta on winning the Lok Sabha elections and said, “This is not an end, but the beginning. I will work to strengthen the party.”
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
14-01-26 10:08 pm
HK News Desk
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 09:49 pm
Bangalore Correspondent
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm