ಬ್ರೇಕಿಂಗ್ ನ್ಯೂಸ್
10-06-24 08:09 pm Mangalore Correspondent ಕರಾವಳಿ
ಮಂಗಳೂರು, ಜೂನ್ 10: ನಾಗಾಲ್ಯಾಂಡ್ ರಾಜಧಾನಿ ಕೊಹಿಮಾದಲ್ಲಿ ಜೆಸೂಟ್ ಚರ್ಚ್ ಪಾದ್ರಿಯಾಗಿದ್ದ ಮಂಗಳೂರು ಮೂಲದ ಆನಂದ್ ಪಿರೇರಾ(56) ಅವರು ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
1986ರಲ್ಲಿ ಜೆಸೂಟ್ ಸೊಸೈಟಿಗೆ ಸೇರ್ಪಡೆಯಾಗಿದ್ದ ಆನಂದ್ ಪಿರೇರಾ ಅವರು 1995ರಲ್ಲಿ ಈಶಾನ್ಯ ಭಾರತದಲ್ಲಿ ಜೆಸೂಟ್ ಸೇವೆಗೆ ನಿಯೋಜನೆಗೊಂಡಿದ್ದರು. 2000ನೇ ಇಸವಿಯಲ್ಲಿ ಆನಂದ್ ಪಿರೇರಾ ಪಾದ್ರಿಯಾಗಿ ಸೇವೆ ಆರಂಭಿಸಿದ್ದರು. ಮಂಗಳೂರಿನ ಹೆಸರಾಂತ ಪಿರೇರಾ ಹೊಟೇಲ್ ಮಾಲೀಕ ದಿವಂಗತ ಚಾರ್ಲ್ಸ್ ಪಿರೇರಾ ಅವರ ಪುತ್ರನಾಗಿದ್ದು ಇವರ ತಾಯಿ ಜಾನೆಟ್ ಪಿರೇರಾ ಸೈಂಟ್ ಅಲೋಶಿಯಸ್ ಕಾಲೇಜು ಪ್ರೈಮರಿ ಸ್ಕೂಲ್ ನಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿಯಾಗಿದ್ದಾರೆ.
2010ರಲ್ಲಿ ಆನಂದ್ ಪಿರೇರಾ ಅವರು ನೆಬ್ರಾಸ್ಕದ ಕ್ರೆಗ್ಟನ್ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಅದರ ಬೆನ್ನಲ್ಲೇ ಉನ್ನತ ಅಧ್ಯಯನ ಮಾಡಿ ಪುಣೆ ಯುನಿವರ್ಸಿಟಿಯಿಂದ ಸಮಾಜಶಾಸ್ತ್ರ ವಿಷಯದಲ್ಲಿ ಪಿಎಚ್ ಡಿ ಗಳಿಸಿದ್ದರು. 2017-19ರಲ್ಲಿ ಮಣಿಪುರದ ಮೊಯಿರಾಂಗ್ ನಲ್ಲಿ ಸೈಂಟ್ ಕ್ಸೇವಿಯರ್ ಹೈಸ್ಕೂಲ್ ನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. 2019ರಲ್ಲಿ ಅಸ್ಸಾಂ ರಾಜ್ಯದ ಗುವಾಹಟಿಯ ಜೆಸೂಟ್ ಹೌಸ್ ಕಮ್ಯುನಿಟಿ ಇದರ ಮುಖ್ಯಸ್ಥರಾಗಿ ಮತ್ತು ರೀಜನ್ ಡೆವಲಪ್ಮೆಂಟ್ ಡೈರೆಕ್ಟರ್ ಆಗಿಯೂ ಕರ್ತವ್ಯದಲ್ಲಿದ್ದರು. 2023ರಲ್ಲಿ ಜೆಸೂಟ್ಸ್ ಅರುಣಾಚಲ ಮಿಶನ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. ಇದಲ್ಲದೆ, ನಾಗಾಲ್ಯಾಂಡಿನ ಕೊಹಿಮಾದಲ್ಲಿ ಜೆಸೂಟ್ ರೀಜನ್ ಇದರ ಮುಖ್ಯಸ್ಥರಾಗಿಯೂ ಜವಾಬ್ದಾರಿ ಹೊಂದಿದ್ದರು.
Mangalore son of pereira hotel owner Father Anand Pereira SJ dies of heart attack in Nagaland. Father Anand Pereira, SJ was currently rector of St. Paul Institute of Education Phesama in Kohima, Father Anand Pereira SJ is the son of the late Ignatius ('Inasam' - Pereira Hotel)
11-02-25 03:40 pm
HK News Desk
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
Mysuru stone pelting, Rahul Gandhi: ದೆಹಲಿ ಫಲಿ...
11-02-25 12:37 pm
Mandya suicide crime, Gym: ಗಂಡನ ಅನೈತಿಕ ಸಂಬಂಧಕ...
10-02-25 10:51 pm
BJ show cause notice, Yatnal; 'ಭಿನ್ನರ ಬಣ'ದ ನಾ...
10-02-25 10:19 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm