ಬ್ರೇಕಿಂಗ್ ನ್ಯೂಸ್
11-06-24 06:23 pm Mangalore Correspondent ಕರಾವಳಿ
ಉಳ್ಳಾಲ, ಜೂ.11: ಭಾರತ ಮಾತೆಗೆ ಜೈಕಾರ ಕೂಗಿದವರನ್ನ ಇರಿದು ಕೊಲೆಗೆ ಯತ್ನಿಸುತ್ತಾರೆಂದರೆ ಇದು ಸ್ಟೇಟ್ ಸ್ಪಾನ್ಸರ್ ಜಿಹಾದಿಸಂ. ಹಿಂದೂ ಸಮಾಜ ಇನ್ನು ಕೈ ಕಟ್ಟಿ ಕೂರಲ್ಲ, ಹಿಂದೂಗಳು ಕಾನೂನನ್ನ ಕೈಗೆತ್ತಿಕೊಳ್ಳಲು ಸರಕಾರವೇ ಪ್ರೋತ್ಸಾಹಿಸುತ್ತಿದ್ದು, ಮುಂದೆ ನಡೆಯುವ ಅನಾಹುತಗಳಿಗೆ ಪೊಲೀಸರು ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ಮಂಗಳೂರು ಉತ್ತರದ ಬಿಜೆಪಿ ಶಾಸಕ ವೈ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನಗೈದ ಸಂದರ್ಭದಲ್ಲಿ ಕಳೆದ ಆದಿತ್ಯವಾರ ರಾತ್ರಿ ಮುಡಿಪು ಸಮೀಪದ ಬೋಳಿಯಾರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಅನ್ಯಕೋಮಿನ ಗುಂಪಿನಿಂದ ಇರಿತಕ್ಕೊಳಗಾಗಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರಾದ ಹರೀಶ್ ಮತ್ತು ನಂದ ಕುಮಾರ್ ಅವರನ್ನ ಭರತ್ ಶೆಟ್ಟಿ ಅವರು ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಸ್ಥೈರ್ಯ ತುಂಬಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಸಿದ್ಧರಾಮಯ್ಯ ನೇತೃತ್ವದ ಸರಕಾರ ಬಂದ ಮೇಲೆ ಇಂತಹ ಘಟನೆಗಳು ಪದೇ ಪದೇ ನಡೀತಿದೆ. ಸುಮ್ನೆ ಮಾತನಾಡಿ ರಾಜಕೀಯ ಮಾಡೋದು ಬೇಡ ಎಂದು ನಾವು ಸುಮ್ನೆ ಕುಳಿತರೂ ಮತ್ತೆ ಹಿಂದೂಗಳ ಮೇಲೆ ದೌರ್ಜನ್ಯ ನಡೀತಾನೆ ಇದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಜೈಕಾರ ಕೂಗಿದವರ ವಿರುದ್ಧ ಕೇಸು ಹಾಕಲು ಹಿಂದೆ ಮುಂದೆ ನೋಡ್ತಾರೆ. ಆದರೆ ಭಾರತದಲ್ಲೇ ಭಾರತಾಂಬೆಗೆ ಜೈಕಾರ ಹಾಕಿದವರಿಗೆ ಕೇಸು ಜಡಿಯುತ್ತಾರೆಂದರೆ ನಾವು ಪಾಕಿಸ್ತಾನದಲ್ಲಿದ್ದೇವಾ ಎಂಬ ಸಂಶಯ ಬರುತ್ತದೆ. ಕಾಂಗ್ರೆಸಿಗರು ಪ್ರತೀ ಭಾಷಣಗಳಲ್ಲಿ ಬಂಧುತ್ವ, ಸೋದರತ್ವ ಅಂತ ಬೋಂಗು ಬಿಡುತ್ತಾರೆ. ಆದರೆ ತಾರತಮ್ಯ ನೀತಿ ಬಿಟ್ಟು ಕೊಡ್ತಿಲ್ಲ. ಬರೀ ತುಷ್ಟೀಕರಣದ ಓಟ್ ಬ್ಯಾಂಕ್ ರಾಜಕೀಯ ನಡೆಸುತ್ತಿದ್ದಾರೆ.
ಬಿಜೆಪಿ ಶಾಸಕರುಗಳನ್ನೇ ಬಿಡದೆ ಅವರ ವಿರುದ್ಧ ಸುಳ್ಳು ಕೇಸುಗಳನ್ನ ಜಡಿಯುವ ರಾಜ್ಯದ ಕಾಂಗ್ರೆಸ್ ಸರಕಾರ ಬೋಳಿಯಾರ್ ಘಟನೆಯಲ್ಲೂ ಭಾರತ ಮಾತೆಗೆ ಜೈಕಾರ ಹಾಕಿದವರನ್ನು ಇರಿದ ದುಷ್ಕರ್ಮಿಗಳ ಬೆಂಬಲಕ್ಕೆ ನಿಂತಿದ್ದು, ಘೋಷಣೆ ಕೂಗಿದ್ದ ಬಿಜೆಪಿಯ ಐದು ಕಾರ್ಯಕರ್ತರ ವಿರುದ್ಧವೇ ಪ್ರಕರಣ ದಾಖಲಿಸಿದ್ದು ಖಂಡನೀಯ. ಭಾರತ ಮಾತೆಗೆ ಜೈಕಾರ ಹಾಕಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಲು ಕಾಂಗ್ರೆಸ್ ನಾಯಕರ ಕುಮ್ಮಕ್ಕೇ ಕಾರಣ ಎಂದು ಆರೋಪಿಸಿದರು. ಪೊಲೀಸ್ ಇಲಾಖೆಗೆ ನಾವು ಎಚ್ಚರಿಕೆ ಕೊಟ್ಟು ಸಾಕಾಯ್ತು. ಮುಂದೆ ಹಿಂದು ಸಮಾಜವು ಕಾನೂನನ್ನ ಕೈಗೆತ್ತಿಕೊಂಡರೆ ಅದಕ್ಕೆ ಪೊಲೀಸ್ ಇಲಾಖೆ ಮತ್ತು ರಾಜ್ಯದ ಸಿದ್ರಾಮಯ್ಯ ಸರಕಾರ ನೇರ ಹೊಣೆ ಆಗಲಿದೆ ಎಂದರು.
ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಹರೀಶ್ ಮತ್ತು ನಂದ ಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಉಳ್ಳಾಲದಲ್ಲಿ ಜಿಹಾದಿ ಚಟುವಟಿಕೆಗಳು ಜೀವಂತವಾಗಿದೆ ಎಂಬುದಕ್ಕೆ ಬೋಳಿಯಾರಿನ ಘಟನೆಯೇ ನಿದರ್ಶನವಾಗಿದೆ. ಭಾರತ್ ಮಾತಾ ಕೀ ಜೈ ಎಂದ ಬಿಜೆಪಿ ಕಾರ್ಯಕರ್ತರ ವಿರುದ್ಧ ಹಾಕಿರುವ ಕೇಸನ್ನು ವಾಪಸ್ ತೆಗೆಯಬೇಕೆಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯುವಮೋರ್ಚಾ ಕ್ಷೇತ್ರಾಧ್ಯಕ್ಷರಾದ ಮುರಳಿ ಕೊಣಾಜೆ, ಬಜರಂಗದಳದ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಮೊದಲಾದವರು ಉಪಸ್ಥಿತರಿದ್ದರು.
Mangalore Boliyar Stabbing, MLA Bharath Sheety, Sharan Pumpwell visit hospital to see victims. The police on Monday have arrested five persons in connection with the stabbing of two BJP workers by a group of 20 to 25 Muslim youths following an altercation at Boliyar in Konaje police station limits, located in Mangalore taluka of Dakshina Kannada district in Karnataka.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm