ಬ್ರೇಕಿಂಗ್ ನ್ಯೂಸ್
12-06-24 08:24 pm Mangalore Correspondent ಕರಾವಳಿ
ಮಂಗಳೂರು, ಜೂನ್ 12: ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣದಲ್ಲಿ ಮತ್ತೆ ಏಳು ಮಂದಿಯನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಒಟ್ಟು ಬಂಧಿತರ ಸಂಖ್ಯೆ 13ಕ್ಕೇರಿದೆ.
ತಾಜುದ್ದೀನ್ ಅಲಿಯಾಸ್ ಸಾದಿಕ್, ಸರ್ವಾನ್, ಮುಬಾರಕ್, ಅಶ್ರಫ್, ತಲ್ಲತ್, ಇಮ್ರಾನ್, ಕೋಲಿ ಇರ್ಶಾದ್ ಬಂಧಿತರು. ಇದಕ್ಕೂ ಮುನ್ನ ಆರು ಮಂದಿಯನ್ನು ಬಂಧಿಸಲಾಗಿತ್ತು. ಶಾಕೀರ್, ಅಬ್ದುಲ್ ರಜಾಕ್, ಅಬುಬಕ್ಕರ್ ಸಿದ್ದಿಕ್, ಸವಾದ್, ಮೋನು, ಅಬೂಬಕ್ಕರ್ ಎಂಬವರನ್ನು ಬಂಧನ ಮಾಡಲಾಗಿತ್ತು.
ಬೋಳಿಯಾರು ಬಾರ್ ಮುಂಭಾಗದಲ್ಲಿ ಹಲ್ಲೆ ಮತ್ತು ಚೂರಿ ಇರಿತ ಘಟನೆ ನಡೆದಿತ್ತು. ಇದರ ದೃಶ್ಯ ಬಾರ್ ನಲ್ಲಿದ್ದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು. ಸಿಸಿ ಟಿವಿಯ ಡಿವಿಆರ್ ಅನ್ನು ಪೊಲೀಸರು ಒಯ್ದಿದ್ದು ಅದರಲ್ಲಿ ದಾಖಲಾಗಿರುವ ದೃಶ್ಯವನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚೂರಿ ಇರಿತ ಸಂಬಂಧಿಸಿ ಮೂರು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಚೂರಿ ಇರಿತ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮಂಗಳೂರಿಗೆ ಬಂದು ಪೊಲೀಸರು ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರುತ್ತಿದ್ದು, ಇದರಿಂದಾಗಿ ಇರಿತ ಘಟನೆ ರಾಜ್ಯ ಸರಕಾರಕ್ಕೂ ಗಂಟಲಲ್ಲಿ ಸಿಕ್ಕಿಕೊಂಡ ಸ್ಥಿತಿಯಾಗಿಸಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ ಪೊಲೀಸರ ಮೂಲಕ ಶಿಸ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಆದರೆ, ಇದೇ ವೇಳೆ, ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆಂದು ಹೇಳಿ ಕೌಂಟರ್ ಕೇಸು ಹಾಕಿರುವುದು ಪೊಲೀಸರಿಗೆ ತಲೆನೋವಾಗಿಸಿದೆ.
Mangalore Boliyar Stabbing case, another seven arrested by police. In connection with the two BJP workers' stabbing incident registered under Cr. No. 80/24 at Konaje Police Station in connection with the Boliyar mosque altercation , authorities have secured seven more accused on Wednesday, June 12.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm