ಬ್ರೇಕಿಂಗ್ ನ್ಯೂಸ್
15-06-24 05:00 pm Mangalore Correspondent ಕರಾವಳಿ
ಮಂಗಳೂರು, ಜೂನ್ 15: ಯುಟಿ ಖಾದರ್ ಕ್ಷೇತ್ರದಲ್ಲಿ ಪಾಕಿಸ್ತಾನದ ಕುನ್ನಿಗಳೇ ಅಂತ ಯಾರಾದ್ರೂ ಕೂಗಿದ್ರೆ ಯಾರು ಪಾಕಿಸ್ತಾನದ ಕುನ್ನಿಗಳಿದ್ದಾರೆ ಅಂಥವರು ಪ್ರಚೋದನೆಗೆ ಒಳಗಾಗಬೇಕು. ಅದು ಬಿಟ್ಟು ಉಳಿದವರು ಯಾಕೆ ಪ್ರಚೋದನೆಗೆ ಒಳಗಾಗಬೇಕು. ಇದನ್ನು ನೋಡಿದ್ರೆ ಖಾದರ್ ಸಾಮ್ರಾಜ್ಯದಲ್ಲಿ ಪಾಕಿಸ್ತಾನದ ಕುನ್ನಿಗಳು ಇದ್ದಾರೆ ಅನ್ನೋದು ಸ್ಪಷ್ಟವಾಗುತ್ತದೆ. ಪಾಕಿಸ್ತಾನಕ್ಕೆ ಬೈದರೆ ನಮಕ್ ಹರಾಮ್ ಗಳಿಗೆ ಪ್ರಚೋದನೆ ಆಗತ್ತೆ. ಅಂಥವರನ್ನು ಮೊದಲು ಬಂಧಿಸಿ ಪೊಲೀಸ್ ಕಮಿಷನರ್ ಅವ್ರೇ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.
ಯಾರೋ ಬಂದು ಪಾಕಿಸ್ತಾನದ ಕುನ್ನಿಗಳೆಂದು ಕರೆದಿದ್ದಾರೆ ಅಂತ ದೂರು ಕೊಟ್ಟರೆ ಕೇಸು ಹಾಕೋ ಮಂಗಳೂರಿನ ಪೊಲೀಸ್ ಕಮಿಷನರ್, ಇಲ್ಲಿರುವ ಪಾಕಿಸ್ತಾನದ ಕುನ್ನಿಗಳು ಯಾರೆಂದು ಗುರುತಿಸಬೇಕು. ಅಂಥವರನ್ನು ಕೇಸು ಹಾಕಿ ಕೂಡಲೇ ಗಡೀಪಾರು ಮಾಡಬೇಕು. ಖಾದರ್ ಅವರೇ, ಈ ಕುನ್ನಿಗಳನ್ನು ಗುರುತಿಸಿ ಪಾಕಿಸ್ತಾನಕ್ಕೆ ಕಳುಹಿಸುವ ಕೆಲಸ ಮಾಡಲಿ. ಪಾಕಿಸ್ತಾನಕ್ಕೆ ಹುಟ್ಟಿದವರಿಗೆ ಮಾತ್ರ ಭಾರತ್ ಮಾತಾಕೀ ಜೈ ಅನ್ನೋದು ಪ್ರಚೋದನೆ ಆಗುತ್ತೆ. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಭಾರತದ ಐಪಿಎಸ್ ಅಧಿಕಾರಿ, ಪಾಕಿಸ್ತಾನದ್ದಲ್ಲ. ನೀವು ಯಾಕೆ ಪಾಕಿಸ್ತಾನದ ಕಮಿಷನರ್ ಥರ ವರ್ತಿಸಿದ್ದೀರಿ ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
ಪಾಕಿ ಕುನ್ನಿಗಳಾಗ್ತಿದ್ದರೆ ಆಸ್ಪತ್ರೆಯಲ್ಲೇ ಇರ್ತಿದ್ರು..
ಪಾಕಿಸ್ತಾನದ ಕುನ್ನಿಗಳೇ ಅನ್ನೋದು ಪ್ರಚೋದನೆ ಅಂತ ಹೇಳ್ತೀರಲ್ವಾ? ನೈಜ ಮುಸ್ಲಿಮರು ಪಾಕಿಸ್ತಾನದ ಕುನ್ನಿಗಳಲ್ಲ. ಕುನ್ನಿಗಳಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳಿ. ಈಗ ದೂರು ಕೊಟ್ಟವರ ಮೇಲೂ ಕೇಸು ಹಾಕಬೇಕು. ಆ ದೂರಿಗೆ ತಕ್ಷಣ ಬಿ ರಿಪೋರ್ಟ್ ಹಾಕಬೇಕು. ಇರಿತಕ್ಕೆ ಒಳಗಾದ ಹರೀಶ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ರಾಜಧರ್ಮ ಮಾತನಾಡುವ ಸ್ಪೀಕರ್ ಹಾಗೂ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಬಂದರೂ ಗಾಯಾಳುಗಳನ್ನ ಭೇಟಿಯಾಗಿಲ್ಲ. ಗಾಯಾಳುಗಳು ಪಾಕಿಸ್ತಾನದ ಕುನ್ನಿಗಳಾಗಿದ್ರೆ ಇವರು ಆಸ್ಪತ್ರೆಯಲ್ಲೇ ಇರ್ತಿದ್ದರು. ಇಲ್ಲಿ ಗಾಯಗೊಂಡವರು ಭಾರತ ಮಾತೆಯ ಸುಪುತ್ರರಾದ ಕಾರಣ ಇವರು ಆಸ್ಪತ್ರೆಗೆ ಬಂದಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರ ಬಂದ 13 ತಿಂಗಳಲ್ಲಿ ಕರ್ನಾಟಕ ಹತ್ಯೆ ಮತ್ತು ಆತ್ಮಹತ್ಯೆಯಲ್ಲಿ ನಂಬರ್ ವನ್ ಆಗಿದೆ. ನ್ಯಾಶನಲ್ ಕ್ರೈಮ್ ರೇಟ್ ಪ್ರಕಾರ, ನಾಲ್ಕು ತಿಂಗಳಲ್ಲಿ 40 ಪರ್ಸೆಂಟ್ ಕ್ರೈಮ್ ಹೆಚ್ಚಿದೆ. ಕೊಲೆ, ಸುಲಿಗೆ, ಭಯ ಇಲ್ಲದ ಕ್ರಿಮಿನಲ್ ಹಾಗೂ ಕಮ್ಯುನಲ್ ನಡವಳಿಕೆ ಹೆಚ್ಚಾಗಿದೆ. ಚುನಾವಣೆ ಬಳಿಕ ಬಿಜೆಪಿ ಹಾಗೂ ಹಿಂದುತ್ವದ ಕಾರ್ಯಕರ್ತರು ಟಾರ್ಗೆಟ್ ಆಗ್ತಿದ್ದಾರೆ. ಚುನಾವಣೆ ಆದ ತಕ್ಷಣ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರ ಕಾರುಗಳಿಗೆ ಬೆಂಕಿ ಹಾಕಲಾಯ್ತು. ಬೆಳಗಾವಿಯಲ್ಲಿ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಯ್ತು. ಸರ್ಕಾರದ ಕಮ್ಯುನಲ್ ನೀತಿಯೇ ಮತಾಂಧರಿಗೆ ಬೆಂಬಲ ನೀಡಿದಂತಿದೆ.
ರಾಮೇಶ್ವರ ಬಾಂಬ್ ಸ್ಫೋಟ ಆದಾಗ ಅದು ಸಿಲಿಂಡರ್ ಸ್ಫೋಟ ಎಂದು ಮುಚ್ಚಿ ಹಾಕಲು ನೋಡಿದ್ದರು. ಎನ್ಐಎ ತನಿಖೆಯಿಂದ ಐಸಿಸ್ ಸಂಚು ಬಯಲಾಗಿದೆ. ತನಿಖೆಯ ವೇಳೆ ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ಸ್ಲೀಪರ್ ಸೆಲ್ ಸಕ್ರಿಯವಾಗಿರೋದು ಪತ್ತೆಯಾಗಿದೆ. ಸ್ಪೀಕರ್ ಖಾದರ್ ಹೊರಗಿನವರು ಅಂತ ಹೇಳಬೇಕಾಗಿದ್ದು ಐಸಿಸ್ ಜೊತೆ ನಂಟಿರೋರನ್ನ. ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ಉದ್ದೇಶಕ್ಕೆ ಮತಾಂಧರನ್ನ ಬೆಂಬಲಿಸ್ತಿದ್ದು ಇದು ದೇಶಕ್ಕೆ ಬಹಳ ಅಪಾಯಕಾರಿ. ಲವ್ ಜಿಹಾದ್ ಸನಾತನ ಧರ್ಮ, ಹಿಂದುತ್ವವನ್ನ ಮುಗಿಸುವ ಸಂಚು ಹೊಂದಿದ್ದರೆ, ಓಟ್ ಜಿಹಾದ್ ಭಾರತದಲ್ಲಿ ಸಂವಿಧಾನವನ್ನೇ ಮುಗಿಸಲಿದೆ.
ರಾಜ್ಯ ಸರ್ಕಾರ ರಸ್ತೆ ಮಧ್ಯೆ ನಮಾಜ್ ಮಾಡಿದವರ ಕೇಸ್ ವಾಪಸ್ ಪಡೆದಿತ್ತು. ಆದರೆ ಅದನ್ನು ಪ್ರಶ್ನೆ ಮಾಡಿದ ಶರಣ್ ಪಂಪ್ವೆಲ್ ಮೇಲೆ ಕೇಸ್ ಹಾಕಿತ್ತು. ನಮಾಜ್ ವಿರುದ್ಧ ಕೇಸ್ ಹಾಕಿದ್ದ ಪೊಲೀಸ್ ಅಧಿಕಾರಿಯನ್ನು ರಜೆಯಲ್ಲಿ ಕಳಿಸಿದ್ರಿ. ಆ ಮೂಲಕ ಪೊಲೀಸರಿಗೆ ನೀವು ಏನು ಸಂದೇಶ ಕೊಟ್ರಿ? ಮತಾಂಧರ ಬೆಂಬಲಿಸಿ ಅವರಿಗೂ ಒಂದು ಸಂದೇಶ ಕೊಟ್ಟಿದ್ದೀರಿ. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತೀಯ ಶಕ್ತಿಗಳ ಕೈಗೊಂಬೆ ಅಲ್ಲ ಅನ್ನೋದನ್ನ ನಿರೂಪಿಸಿ. ಬೋಳಿಯಾರು ಘಟನೆಯ ಸಿಸಿಟಿವಿ ದೃಶ್ಯಗಳಿದ್ದರೆ ಸತ್ಯ ಏನು ಅನ್ನೋದನ್ನ ನಿರೂಪಿಸಿ. ನಿಮ್ಮಲ್ಲಿ ದಾಖಲೆ ಇದ್ದರೆ, ಮಾಧ್ಯಮಕ್ಕೂ ತೋರಿಸಿ ಬಿಡಿ. ಕಮ್ಯುನಲ್ ಗಳಿಗೆ ಬಿಜೆಪಿ ನಂತರ ಪೊಲೀಸರೇ ಮುಂದಿನ ಟಾರ್ಗೆಟ್ ಎಂದು ಎಚ್ಚರಿಸಿದರು.
ಅಹಂಕಾರ ಇದ್ದವರು ಸುಧಾರಿಸಿಕೊಳ್ತಾರೆ
ಲೋಕಸಭೆ ಚುನಾವಣೆ ಬಳಿಕ ಆರೆಸ್ಸೆಸ್, ಬಿಜೆಪಿ ಬಗ್ಗೆ ಟೀಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ, ಸಂಘ ಒಂದು ದೇಶಭಕ್ತ ಸಂಘಟನೆ, ಸಂಸ್ಕಾರ ಕೊಡುವ ಸಂಘಟನೆ. ಅವರೇನು ಹೇಳಿದ್ದಾರೋ, ಅದು ಒಳ್ಳೆಯದಕ್ಕೆ ಹೇಳಿದ್ದಾರೆ, ನಾವದನ್ನು ಸ್ವೀಕರಿಸುತ್ತೇವೆ ಎಂದರು. ಯಾರಿಗಾದ್ರೂ ಅಹಂಕಾರ ಬಂದಿದ್ದರೆ, ಅಂಥವರು ಸುಧಾರಿಸಿಕೊಳ್ತಾರೆ. ಅದನ್ನು ಬಿಜೆಪಿಯವರಿಗೆ ಅಂತ ಹೇಳಿಲ್ಲ ಎಂದರು. ಮೀಸಲಾತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ, ಮತೀಯ ಆಧರಿತ ಮೀಸಲಾತಿ ಎನ್ನುವುದು ಸಂವಿಧಾನಕ್ಕೆ ವಿರುದ್ಧ. ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲ. ಮತೀಯ ಆಧಾರದ ಓಲೈಕೆ ದೇಶವನ್ನು ವಿಭಜನೆ ಮಾಡಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡುವುದರಲ್ಲಿ ನಾವು ಪರವಾಗಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಕಿಶೋರ್ ಪುತ್ತೂರು ಮತ್ತಿತರರಿದ್ದರು.
Mangalore Boliyar Stabbing case, CT Ravi questions if police commissioner Anupam Agrwal is a Pakistani officer, says to exile Pakistan dogs from U T Khader Constituency in ullal.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm