ಬ್ರೇಕಿಂಗ್ ನ್ಯೂಸ್
29-06-24 10:54 pm Mangalore Correspondent ಕರಾವಳಿ
ಮಂಗಳೂರು, ಜೂನ್ 29: ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕವು ನೀಟ್ ಪರೀಕ್ಷಾ ವ್ಯವಸ್ಥೆಯಿಂದ ಹೊರಬಂದು ಪ್ರತ್ಯೇಕ ಪರೀಕ್ಷಾ ವ್ಯವಸ್ಥೆ ಮಾಡಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಪರಿಷತ್ತಿನಲ್ಲಿ ನಿಲುವಳಿ ಸೂಚನೆ ಮಂಡಿಸುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ. .
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಲುವಳಿ ಸೂಚನೆ ಮಂಡಿಸಲು ಈಗಾಗಲೇ ನಿರ್ಧಾರ ಮಾಡಿದ್ದು, ಅದಕ್ಕೆ ಬೇಕಾಗುವ ಅಂಕಿ ಅಂಶ ಪಡೆಯಲಿದ್ದೇನೆ ಎಂದು ತಿಳಿಸಿದರು. ನೀಟ್ ಪರೀಕ್ಷೆ ಅವ್ಯವಹಾರ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆ ಉಂಟಾಗಿರುವ ಪ್ರಕರಣದ ಬಗ್ಗೆ ಪಾರ್ಲಿಮೆಂಟ್‌ನಲ್ಲಿ ಚರ್ಚೆಗೇ ಅವಕಾಶ ಕೊಡುತ್ತಿಲ್ಲ. ಇಷ್ಟು ದೊಡ್ಡ ಅವ್ಯವಹಾರವನ್ನು ಚರ್ಚೆಗೆ ತೆಗೆದುಕೊಳ್ಳಲ್ಲ ಅಂತಾದರೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಈಗಾಗಲೇ ಕೆಲವು ರಾಜ್ಯಗಳು ನೀಟ್ ಪರೀಕ್ಷೆ ಬದಲಿಗೆ ತಾವೇ ತೀರ್ಮಾನ ಮಾಡುವುದಾಗಿ ಹೇಳಿದರೂ, ಅದಕ್ಕೂ ಕೇಂದ್ರ ಸರ್ಕಾರ ಅನುಮತಿ ಕೊಡುತ್ತಿಲ್ಲ. ಕರ್ನಾಟಕವೂ ನೀಟ್ ವ್ಯವಸ್ಥೆಯಿಂದ ಹೊರ ಬರಬೇಕಾಗಿದೆ ಅಂತ ಒತ್ತಾಯ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮುಖ್ಯಮಂತ್ರಿ ತ್ವರಿತವಾಗಿ ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೆಸ್ಕಾಂ ವೈಫಲ್ಯದಿಂದ ಸಾವು
ಜಿಲ್ಲೆಯಲ್ಲಿ ಮೆಸ್ಕಾಂ ನಿರ್ಲಕ್ಷ್ಯದಿಂದಾಗಿ ಮೂರು ಸಾವು ಸಂಭವಿಸಿದೆ. ವಿದ್ಯುತ್ ತಂತಿ ಕಳಚಿ ಬಿದ್ದು ಅಲ್ಲಿ ಬ್ರೇಕರ್ಸ್ ಇಲ್ಲದ ಕಾರಣ ತಂತಿಯಲ್ಲಿ ವಿದ್ಯುತ್ ಸಂಚಾರ ಆಗಿದೆ. ಈ ಪ್ರದೇಶದಲ್ಲಿ ಯಾಕೆ ಬ್ರೇಕರ್ಸ್ ಅಳವಡಿಸಿಲ್ಲ? ದುರ್ಘಟನೆ ಬಳಿಕ ಎಚ್ಚರಗೊಂಡಿರುವ ಅಧಿಕಾರಿಗಳು 1600 ಕಡೆ ಈಗ ಟ್ರಿಪರ್ ಹಾಕುವುದಾಗಿ ಹೇಳಿದಾರೆ. ಪ್ರಕರಣದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಉತ್ತರ ಪಡೆಯಲು ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರಿ ತಿಳಿಸಿದ್ದಾಗಿ ಹೇಳಿದರು.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಉಂಟಾದರೆ ಸೂಕ್ತ ಪರಿಹಾರ ಒದಗಿಸುವುದು ಮತ್ತಿತರ ಕೆಲಸಗಳಿಗಾಗಿ ಜಿಲ್ಲಾಡಳಿತದ ಅಕೌಂಟಲ್ಲಿ 17 ಕೋಟಿ ರು. ಹಣ ಇದೆ. ಪ್ರತಿ ತಾಲೂಕಲ್ಲೂ 50 ಲಕ್ಷ ರು.ಗೂ ಅಧಿಕ ಹಣ ಇದೆ. ತಾಲೂಕು ಮಟ್ಟದಲ್ಲಿ ಪ್ರಕೃತಿ ವಿಕೋಪ ಪರಿಹಾರ ನೀಡಲು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಮಳೆಯಿಂದ ಪ್ರಾಣ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ. ಎಲ್ಲ ವಿಚಾರಗಳ ಬಗ್ಗೆ ಜು.5ರಂದು ಉಸ್ತುವಾರಿ ಸಚಿವರು ಸಭೆ ನಡೆಸಲಿದ್ದಾರೆ ಎಂದರು.
ಮುಖಂಡರಾದ ವಿಕಾಸ್ ಶೆಟ್ಟಿ, ಅಲಿಸ್ಟರ್ ಡಿಕುನ್ಹ, ಭಾಸ್ಕರ ರಾವ್, ನಝೀರ್ ಬಜಾಲ್ ಇದ್ದರು.
MLC Ivan D'Souza expressed sharp criticism towards the central government for its handling of NEET (National Eligibility cum Entrance Test) irregularities, stating that they have failed miserably to secure the future of students and provide justice in light of the recent controversies.
04-04-26 07:33 pm
HK News Staffer
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 05:42 pm
HK News Staffer
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm