ಕುಂಪಲ: 'ತಂಬೂರಿ' ತುಳು ಭಜನಾ ಸ್ಫರ್ಧೆಗೆ ಚಾಲನೆ 

06-12-20 07:55 pm       Mangaluru Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಎರಡು ದಿವಸಗಳ ತುಳು ಭಜನಾ ಸ್ಪರ್ಧೆ(ತಂಬೂರಿ)ಗೆ ಚಾಲನೆ ನೀಡಲಾಯಿತು. 

ಉಳ್ಳಾಲ, ಡಿಸೆಂಬರ್,6: ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಲಾದ ಜಿಲ್ಲಾ ಮಟ್ಟದ ಎರಡು ದಿವಸಗಳ ತುಳು ಭಜನಾ ಸ್ಪರ್ಧೆ(ತಂಬೂರಿ)ಗೆ ಚಾಲನೆ ನೀಡಲಾಯಿತು. 

ಇಸ್ಕಾನ್ ನ ಅಕ್ಷಯ ಪಾತ್ರೆ ಮುಖ್ಯಸ್ಥರಾದ ಕಾರುಣ್ಯ ದಾಸ್ ಸಾಗರ ಸ್ವಾಮೀಜಿ ಮತ್ತು ಸನಾಂದನ ಕಾರುಣ್ಯ ದಾಸ ಸ್ವಾಮೀಜಿಯವರು ಭಜನಾ ಸ್ಫರ್ಧೆಗೆ ಚಾಲನೆ ನೀಡಿದರು.

ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿದ್ದರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ದಯಾನಂದ ಕತ್ತಲ್ ಸಾರ್ ಮಾತನಾಡಿ ಭಜನೆಗೆ ಸೂತಕದ ಅಡ್ಡಿ ಬಾರದು, ಹೆಣ್ಣಾಗಲಿ, ಗಂಡಾಗಲಿ ಯಾವಾಗ ಬೇಕಾದರೂ ಭಜಿಸುವ ಹಕ್ಕನ್ನು ಹೊಂದಿರುತ್ತಾರೆ. ಭಜನೆಯಿಂದ ಮಾನಸಿಕ, ನೆಮ್ಮದಿ ಸಿಗುವುದು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಪಿ.ಎಸ್ ಪ್ರಕಾಶ್ ಮಾತನಾಡಿ ದೇಶದ ಭವಿಷ್ಯವನ್ನು ಭಜನೆಯ ಮುಖಾಂತರ ನೋಡಬಹುದು. ಇಂತಹ ಕಾರ್ಯಕ್ರಮಗಳ ಆಯೋಜನೆ ನೋಡುವಾಗ ದೇಶಕ್ಕೆ ಸಾಂಸ್ಕೃತಿಕ ಭವಿಷ್ಯ ಇದೆ ಎಂಬುದು ಖಾತ್ರಿಯಾಗಿದೆ. ಯುವಕರು ಮನಸು ಮಾಡಿದ್ದಲ್ಲಿ ಊರಿಗೊಂದು ಮಂದಿರ ರಚಿಸಿ ಕಾರ್ಯಕ್ರಮಗಳನ್ನು ಆಯೋಜಿಸಬಹುದೆಂಬುದಕ್ಕೆ ಇದು ಸಾಕ್ಷಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಶಿಕ್ಷಣ ,ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗೋಪಾಲ್ ಕುತ್ತಾರ್, ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್, ಉಪಾಧ್ಯಕ್ಷರಾದ ಸುರೇಶ್ ಭಟ್ನಗರ, ಹರೀಶ್ ನಿಸರ್ಗ, ಚಂದ್ರಹಾಸ್ ಅಡ್ಯಂತಾಯ, ಉದ್ಯಮಿ ಭಾಸ್ಕರ ದೇವಸ್ಯ, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಉದ್ಯಮಿ ಶಾನು ಶೆಟ್ಟಿ ತಲಪಾಡಿ, ಲ| ಕೆ.ಸಿ ನಾರಾಯಣ್, ದೇವದಾಸ್ ಕೊಲ್ಯ, ಉಮೇಶ್ ಗಾಂಭೀರ್, ಹಿಂದು ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷರಾದ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷರಾದ ಯಶೋಧರ ಚೌಟ ಮೊದಲಾದವರು ಇದ್ದರು.

ಬಾಲಕೃಷ್ಣ ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ಪ್ರಸ್ತಾಪಿಸಿದರು. ಅರುಣ್ ಉಳ್ಳಾಲ್ ನಿರೂಪಿಸಿದರು.