Mogling, Mangalore Samachar paper, Stany Alvares: 'ಮಂಗಳೂರು ಸಮಾಚಾರ' ಹುಟ್ಟಿದ ಜಾಗದಲ್ಲೇ ಮೋಗ್ಲಿಂಗ್ ಸ್ಮರಣೆ ; ಕನ್ನಡ ಪತ್ರಿಕೆ ಜನಕನ ಹೆಸರಲ್ಲಿ ರಸ್ತೆ ನಿರ್ಮಾಣಕ್ಕೆ ಸ್ಟ್ಯಾನಿ ಅಲ್ವಾರಿಸ್ ಒತ್ತಾಯ 

01-07-24 10:15 pm       Mangalore Correspondent   ಕರಾವಳಿ

ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರದ  ಸಂಪಾದಕರಾಗಿದ್ದ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಹೆಸರಿನಲ್ಲಿ ಮಂಗಳೂರಿನ ಪ್ರಮುಖ ರಸ್ತೆಗೆ ಅವರ ಹೆಸರು ಹಾಗೂ ವೃತ್ತವೊಂದನ್ನು ನಿರ್ಮಿಸುವಂತೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾನಿ ಆಳ್ವಾರಿಸ್ ಒತ್ತಾಯಿಸಿದರು. 

ಮಂಗಳೂರು, ಜುಲೈ.1: ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರದ  ಸಂಪಾದಕರಾಗಿದ್ದ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಹೆಸರಿನಲ್ಲಿ ಮಂಗಳೂರಿನ ಪ್ರಮುಖ ರಸ್ತೆಗೆ ಅವರ ಹೆಸರು ಹಾಗೂ ವೃತ್ತವೊಂದನ್ನು ನಿರ್ಮಿಸುವಂತೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾನಿ ಆಳ್ವಾರಿಸ್ ಒತ್ತಾಯಿಸಿದರು. 

ಸೋಮವಾರ ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೋಗ್ಲಿಂಗ್ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್ ಮಾತನಾಡಿ, ಹರ್ಮನ್ ಮೋಗ್ಲಿಂಗ್ ಅವರು ಮಂಗಳೂರ ಸಮಾಚಾರ ಪತ್ರಿಕೆಯನ್ನು ಆರಂಭಿಸುವ ಮೂಲಕ ನೈಜ ಪತ್ರಿಕಾ ಧರ್ಮದ ಅಡಿಪಾಯ ಹಾಕಿದ್ದರು. ಇವತ್ತಿನ ಸಂದರ್ಭದಲ್ಲಿ ಪತ್ರಿಕಾ ಧರ್ಮವನ್ನು ಪಾಲಿಸುವ ಬಗ್ಗೆ ಬದ್ಧತೆಯಿಂದ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು. 

ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಮ್.ವಾಟ್ಸನ್ ಮಾತನಾಡಿ, ಕಿಟೆಲ್, ಮೋಗ್ಲಿಂಗ್, ಬ್ರಿಗೆಲ್, ಗುಂಡರ್ಟ್ ಮೊದಲಾದ  ಯುಗ ಪ್ರವರ್ತಕರ ನೆನಪಿನಲ್ಲಿ ಬಾಸೆಲ್ ಮಿಷನ್ ಮ್ಯೂಸಿಯಂ ಆರಂಭಿಸುವ ಉದ್ದೇಶ ಇದೆ ಎಂದು ಹೇಳಿದರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.

Karnataka Konkani Sahitya Akademi President Stany Alvares has requested that a circle be built in the name of Reverend Herman Mogling, who was the editor of Mangalore Samachar, the first Kannada newspaper.