ಬ್ರೇಕಿಂಗ್ ನ್ಯೂಸ್
07-12-20 10:43 am Mangalore Correspondent ಕರಾವಳಿ
ಮಂಗಳೂರು, ಡಿ.7: ಮಂಗಳೂರು ನಗರದ ಪಾಲಿಗೆ ಹೆಗ್ಗುರುತು, 50 ವರ್ಷಗಳಿಂದ ಕರಾವಳಿ ಜನರ ಲ್ಯಾಂಡ್ ಮಾರ್ಕ್ ಆಗಿದ್ದ ಜ್ಯೋತಿ ಟಾಕೀಸ್ ಶಾಶ್ವತವಾಗಿಯೇ ಬಂದ್ ಆಗುತ್ತಿದೆ. ಲಾಕ್ಡೌನ್ ಬಳಿಕ ಮುಚ್ಚುಗಡೆ ಆಗಿದ್ದ ಜ್ಯೋತಿ ಟಾಕೀಸ್ ಅನ್ನು ಮತ್ತೆ ತೆರೆದಿರಲಿಲ್ಲ. ಈಗ ಅದನ್ನು ಪೂರ್ತಿಯಾಗಿ ಕೆಡಹಲು ಯೋಜನೆ ಹಾಕಿದ್ದಾಗಿ ತಿಳಿದುಬಂದಿದೆ.
ಕೆಲವು ವರ್ಷಗಳ ಹಿಂದೆ ಮುಂಬೈ ಮೂಲದ ಬಿಲ್ಡರ್ ಒಬ್ಬರ ಜೊತೆಗೆ ಕರ್ನಾಟಕ ಥಿಯೇಟರ್ಸ್ ಯೂನಿಟ್ ಲಿಮಿಟೆಡ್ ನವರು ಜ್ಯೋತಿ ಟಾಕೀಸ್ ಇರುವಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿದ್ದರು. ತಾಂತ್ರಿಕ ಕಾರಣಗಳಿಂದ ಉಳಿದುಕೊಂಡಿದ್ದ ಜಂಟಿ ಪಾಲುದಾರಿಕೆಯ ಈ ಒಪ್ಪಂದ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಲಾಕ್ಡೌನ್ ಬಳಿಕ ಥಿಯೇಟರ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹಳೆ ಕಟ್ಟಡವನ್ನು ಕೆಡವಿ ಕಾಂಪ್ಲೆಕ್ಸ್ ನಿರ್ಮಾಣದ ಕಾಮಗಾರಿ ನಡೆಸಲು ಯೋಜನೆ ಹಾಕಿದ್ದಾರೆ.
ಮಂಗಳೂರಿನ ಹೃದಯ ಭಾಗದಲ್ಲಿರುವ ಥಿಯೇಟರ್ ಕಾರಣದಿಂದಾಗಿ ಕಳೆದ 50 ವರ್ಷಗಳಿಂದ ಆ ಜಾಗಕ್ಕೆ ಜ್ಯೋತಿ ಸರ್ಕಲ್ ಎಂದೇ ಹೆಸರಾಗಿತ್ತು. ಇತ್ತೀಚೆಗೆ ಅಲ್ಲಿನ ವೃತ್ತಕ್ಕೆ ಅಂಬೇಡ್ಕರ್ ವೃತ್ತ ಎಂದು ಮರು ನಾಮಕರಣ ಮಾಡಿದರೂ, ಜ್ಯೋತಿ ಹೆಸರು ಜನರ ಬಾಯಿಂದ ಮರೆಯಾಗಿರಲಿಲ್ಲ. ಬಹುತೇಕ ತುಳು ಭಾಷೆಯ ಚಿತ್ರಗಳು ಇದೇ ಜ್ಯೋತಿ ಟಾಕೀಸ್ ನಲ್ಲಿ ಬಿಡುಗಡೆ ಕಾಣುತ್ತಿದ್ದವು. ನಗರಕ್ಕೆ ಬರುವ ಜನರಿಗೆ ದೊಡ್ಡ ಬಂಟಿಂಗ್ಸ್, ಕಟೌಟ್ ಮೂಲಕ ಅಲ್ಲಿ ಹಾಕುತ್ತಿದ್ದ ಚಿತ್ರಗಳ ಪರಿಚಯ ಆಗುತ್ತಿದ್ದವು. ಪ್ರತೀ ವಾರದ ತುಳು- ಕನ್ನಡ ಹೊಸ ಚಿತ್ರಗಳನ್ನು ಜನರಿಗೆ ತೆರೆದಿಡುತ್ತಿದ್ದವು.
ಹಿಂದೆಲ್ಲಾ ತಮ್ಮ ಕನ್ನಡ ಚಿತ್ರಗಳು ಕರಾವಳಿಯಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಆಗಿನ ಕಾಲದ ಖ್ಯಾತ ನಟ- ನಟಿಯರು ಜ್ಯೋತಿ ಚಿತ್ರಮಂದಿರಕ್ಕೆ ಬರುತ್ತಿದ್ದರು. ಮಂಗಳೂರಿನ ಮಟ್ಟಿಗೆ ಜ್ಯೋತಿ ಥಿಯೇಟರ್ ನಲ್ಲಿ ಚಿತ್ರದ ರಿಲೀಸ್ ಆಗೋದಂದ್ರೆ ದೊಡ್ಡ ಹೆಗ್ಗಳಿಕೆಯೇ ಆಗಿತ್ತು. ಮಂಗಳೂರಿನಲ್ಲಿ ಇತ್ತೀಚೆಗೆ ಹಿಂದಿ ಚಿತ್ರಗಳ ಸರದಾರನಂತಿದ್ದ ಸೆಂಟ್ರಲ್ ಟಾಕೀಸ್ ಮುಚ್ಚುವ ಸುದ್ದಿ ಬಂದಿತ್ತು. ಇದೀಗ ತುಳು- ಕನ್ನಡ ಚಿತ್ರಗಳ ಥಿಯೇಟರ್ ಜ್ಯೋತಿಯೂ ಮುಚ್ಚುತ್ತಿದ್ದು ತುಳು ಚಿತ್ರ ಪ್ರೇಮಿಗಳು ಮತ್ತು ಚಿತ್ರೋದ್ಯಮದ ಪಾಲಿಗೆ ದೊಡ್ಡ ನಷ್ಟವೇ ಸರಿ.
ಮಲ್ಟಿಪ್ಲೆಕ್ಸ್ ಆದಷ್ಟು ಬೇಗ ಬರಲಿ..
ಈ ಬಗ್ಗೆ ತುಳು ಚಿತ್ರೋದ್ಯಮದ ಹಲವು ಗಣ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಜ್ಯೋತಿ ಬಂದ್ ಆಗುವುದೆಂದು ಹೇಳುತ್ತಿದ್ದಾರೆ. ಆದರೆ, ಥಿಯೇಟರ್ ಮಾಲೀಕರು ಇದನ್ನು ದೃಢಪಡಿಸಿಲ್ಲ. ಜ್ಯೋತಿ ಬಂದ್ ಆಗುವುದಂದ್ರೆ ನಮಗೆಲ್ಲ ನೋವು ಕೊಡುವ ವಿಚಾರ. ಜ್ಯೋತಿ ಥಿಯೇಟರ್ ತುಳು ಚಿತ್ರೋದ್ಯಮದ ಪಾಲಿಗೆ ಹೆಡ್ ಆಫೀಸ್ ಇದ್ದಂತೆ. ನಮಗೆ ಅತಿ ಹೆಚ್ಚು ಗಳಿಕೆ ಸಿಗುತ್ತಿದ್ದುದು ಇದೇ ಚಿತ್ರ ಮಂದಿರದಲ್ಲಿ. ತುಳು ಮೂವಿಯನ್ನು ಜ್ಯೋತಿಯಲ್ಲಿ ರಿಲೀಸ್ ಮಾಡುವುದು ಪ್ರತಿ ನಿರ್ಮಾಪಕನ ಕನಸು ಆಗಿರುತ್ತಿತ್ತು. ಜ್ಯೋತಿಯಲ್ಲಿ ರಿಲೀಸ್ ಭಾಗ್ಯ ಸಿಗದ ಕಾರಣ ಕೆಲವು ಚಿತ್ರಗಳು ಪ್ರಚಾರ ಸಿಗದೆ ಹೋಗಿದ್ದವು. ಅದೇ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಬರೋದಿದ್ರೆ ಆದಷ್ಟು ಬೇಗ ಬರಲೆಂದು ಹಾರೈಸುತ್ತೇನೆ ಎಂದಿದ್ದಾರೆ, ಖ್ಯಾತ ತುಳು ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್.
Mangalore, one of the city's best-known landmarks for over 50 years, Jyothi Theatre, popularly known as 'Jyothi Talkies', is being permanently closed down as a result of the lockdown.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm