Mangalore rain, schools holiday: ಕರಾವಳಿಯಲ್ಲಿ ಜಿಟಿ ಜಿಟಿ ಮಳೆ ; ಪಶ್ಚಿಮ ಘಟ್ಟದಲ್ಲಿ ಮಳೆ ಬಿರುಸು, ಬೆಳ್ತಂಗಡಿ, ಬಂಟ್ವಾಳ, ಬೈಂದೂರಿನಲ್ಲಿ ಶಾಲೆಗಳಿಗೆ ರಜೆ 

04-07-24 01:54 pm       Mangalore Correspondent   ಕರಾವಳಿ

ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಮಂಗಳೂರು ಭಾಗದಲ್ಲಿ ಸೋನೆ ಮಳೆಯ ರೀತಿ ಸುರಿಯುತ್ತಿದ್ದು ಜನರು ಹಳೆಕಾಲದ ಮಳೆಯ ಅನುಭವ ಪಡೆದಿದ್ದಾರೆ.

ಮಂಗಳೂರು, ಜುಲೈ.4: ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಮಂಗಳೂರು ಭಾಗದಲ್ಲಿ ಸೋನೆ ಮಳೆಯ ರೀತಿ ಸುರಿಯುತ್ತಿದ್ದು ಜನರು ಹಳೆಕಾಲದ ಮಳೆಯ ಅನುಭವ ಪಡೆದಿದ್ದಾರೆ. ‌ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಗಾಳಿ ಮಳೆ ಜೋರಾಗಿದೆ. ಹೀಗಾಗಿ ಬೆಳ್ತಂಗಡಿ, ಬಂಟ್ವಾಳ ಮತ್ತು ಬೈಂದೂರು ಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 4ರಂದು ರಜೆ ನೀಡಲಾಗಿದೆ. ತಗ್ಗು ಪ್ರದೇಶ ಇರುವ ಬೈಂದೂರು ಶಿಕ್ಷಣ ವಲಯದಲ್ಲಿ ಮಾತ್ರ ರಜೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ. 

ನಿನ್ನೆ ರಾತ್ರಿಯೂ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬಂಟ್ವಾಳ ಭಾಗದಲ್ಲಿ ನೇತ್ರಾವತಿ ನದಿ ಈಗಷ್ಟೇ ತುಂಬಿ ಹರಿಯತೊಡಗಿದೆ. ಇದೇ ವೇಳೆ, ಹವಾಮಾನ ಇಲಾಖೆ ಜುಲೈ 9ರ ವರೆಗೆ ಗಾಳಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಜೂನ್ ತಿಂಗಳಲ್ಲಿ ಮಳೆ ಕಡಿಮೆಯಾಗಿದ್ದು ಜುಲೈನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ.‌

Mangalore heavy rains, Belthangady, Bantwal and  bybdoor schools declared holiday. The tahsildar and block education officer (BEO) of Beltangady taluk has declared a holiday for all schools due to incessant rains.