ಬ್ರೇಕಿಂಗ್ ನ್ಯೂಸ್
07-07-24 06:58 pm Mangalore Correspondent ಕರಾವಳಿ
ಮಂಗಳೂರು, ಜು.6: 2024- 2025ನೇ ಸಾಲಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಅನಾಹುತ ಸಂಭವಿಸದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸಿಗರಿಗೆ ಗಿರಿತಾಣಗಳಿಗೆ ಚಾರಣ ಹೋಗುವುದನ್ನು, ನದಿ ದಡಗಳಿಗೆ ಭೇಟಿ ನೀಡುವುದನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಷೇಧಿಸಿದೆ.
ಮುಂಗಾರು ಮಳೆ ಚುರುಕಾಗಿರುವುದರಿಂದ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದ ಘಟನೆಗಳಾಗುತ್ತಿದ್ದು ಸಾರ್ವಜನಿಕರ ಹಿತಾಸಕ್ತಿ ಗಮನಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರ ಸುರಕ್ಷಾ ದೃಷ್ಟಿಯಿಂದ ಜಿಲ್ಲೆಯಲ್ಲಿ ಗಿರಿತಾಣ, ಶಿಖರಗಳಿಗೆ ಮಳೆಗಾಲದ ಅವಧಿಯಲ್ಲಿ ಚಾರಣ ಹೋಗುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.
ಮಳೆಗಾಲ ಮುಗಿಯುವವರೆಗೆ ಹೋಮ್ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಟ್ರೆಕ್ಕಿಂಗ್ ಸಾಹಸ ಚಟುವಟಿಕೆಗಳು ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಆದೇಶದ ಉಲ್ಲಂಘನೆ ಮಾಡಿದರೆ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ 2005 ಸೆಕ್ಷನ್ 51ಬಿ ಪ್ರಕಾರ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸೂಚಿಸಿದ್ದಾರೆ.
ಸಾರ್ವಜನಿಕರು-ಪ್ರವಾಸಿಗರು ನೀರಿಗೆ ಇಳಿಯದಿರಿ
ಇದಲ್ಲದೆ, ಮಳೆಗಾಲದ ಅವಧಿಯಲ್ಲಿ ಯಾವುದೇ ಅವಘಡಗಳಿಗೆ ಆಸ್ಪದವಿರದಂತೆ ಮುನ್ನಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇರುವ ಜಲಪಾತ, ಝರಿ, ನದಿ, ಸಮುದ್ರ, ಜಲಾಶಯದ ಪ್ರದೇಶಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ನೀರಿನಲ್ಲಿ ಇಳಿಯುವುದು, ಈಜುವುದು, ಸಾಹಸ ಚಟುವಟಿಕೆಗಳನ್ನು ನಡೆಸುವುದನ್ನು ನಿರ್ಬಂಧಿಸಿ ಮುಂದಿನ ಆದೇಶದ ವರೆಗೆ ಜಿಲ್ಲಾಧಿಕಾರಿ ಅದೇಶಿಸಿದ್ದಾರೆ.
Mangalore trekking, entry to water falls and mountain area restricted. The Dakshina Kannada district administration has issued a ban on trekking to peaks in the district until the end of the monsoon season. This order, issued under the Disaster Management Act by Deputy Commissioner and District Magistrate M.P. Mullai Muhilan, cites the risks of landslips, mudslides, and lightning due to heavy rains.
04-04-26 07:33 pm
HK News Staffer
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 05:42 pm
HK News Staffer
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm