ಬ್ರೇಕಿಂಗ್ ನ್ಯೂಸ್
11-07-24 10:30 pm Mangalore Correspondent ಕರಾವಳಿ
ಮಂಗಳೂರು, ಜುಲೈ.11: ಕೊಂಕಣ ರೈಲ್ವೇ ಮತ್ತು ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ಬೇಡಿಕೆಯ ಕುರಿತು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ರೈಲು ಯಾತ್ರಿಕರ ಸಮಸ್ಯೆಗಳ ಕುರಿತಾಗಿ ಚರ್ಚಿಸಲು ಮಂಗಳೂರಿನಲ್ಲಿಯೇ ಸಭೆ ಏರ್ಪಡಿಸುವಂತೆ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಅವರಿಗೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರ ಬರೆದಿದ್ದಾರೆ.
ಕೊಂಕಣ ರೈಲು ಮಂಡಳಿಯನ್ನು ಭಾರತೀಯ ರೈಲ್ವೇ ಜೊತೆಗೆ ಸೇರ್ಪಡೆ ಮಾಡುವುದು ಮುಖ್ಯ ಬೇಡಿಕೆ. ಕೊಂಕಣ ರೈಲ್ವೇ ನಿಗಮ ಲಿಮಿಟೆಡ್ (ಕೆಆರ್‌ಸಿಎಲ್) ಸ್ವತಂತ್ರ ಸಂಸ್ಥೆಯಾಗಿರುವುದರಿಂದ ಎದುರಿಸುತ್ತಿರುವ ಹಣಕಾಸು ಅಡಚಣೆಗಳನ್ನು ನಿವಾರಿಸಲು ವಿಲೀನ ಅವಶ್ಯವಾಗಿದೆ. ಮುಂಬೈ- ಮಂಗಳೂರು ಮಧ್ಯೆ 741 ಕಿಮೀ ಉದ್ದದ ಕೊಂಕಣ ರೈಲ್ವೇ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿದ್ದು, ಭಾರತೀಯ ರೈಲ್ವೇ ವಿಭಾಗದಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ. ಇನ್ನಿತರ ರೈಲು ಸಂಪರ್ಕದ ಅಭಿವೃದ್ಧಿಗೂ ಬೇರೆ ವಲಯಗಳನ್ನು ಅವಲಂಬಿಸುವ ಸ್ಥಿತಿಯಿದೆ. ಹೀಗಾಗಿ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜೊತೆಗೆ ವಿಲೀನಗೊಳಿಸಿದರೆ, ಕರಾವಳಿಯ ರೈಲ್ವೇ ವಲಯ ಅಭಿವೃದ್ಧಿ ಸಾಧ್ಯವಾಗಲಿದೆ.
ಇದಲ್ಲದೆ, ಮಂಗಳೂರು- ಬೆಂಗಳೂರು ರೈಲ್ವೇ ಮಾರ್ಗದ ಅಭಿವೃದ್ಧಿ ದೃಷ್ಟಿಯಿಂದ ಶಿರಾಡಿ ಘಾಟ್ ಭಾಗದ ಕಾರ್ಯಯೋಜನೆ ಬಗ್ಗೆ ಅಧ್ಯಯನ ಅಗತ್ಯವಿದೆ. ಶಿರಾಡಿ ಘಾಟ್ ನಲ್ಲಿ ಸದ್ಯ ಒಂದೇ ರೈಲು ಮಾರ್ಗವಿದ್ದು, ಸುಬ್ರಹ್ಮಣ್ಯ- ಸಕಲೇಶಪುರ ನಡುವೆ ಪ್ರತ್ಯೇಕ ರೈಲು ಹಳಿ ನಿರ್ಮಾಣಗೊಂಡರೆ ಪ್ರಯಾಣ ಮತ್ತು ಸರಕು ಸಾಕಣೆ ಸುಗಮವಾಗುತ್ತದೆ. ಇದರಿಂದ ಸಂಚಾರಕ್ಕೆ ಇರುವ ಪ್ರಮುಖ ಅಡಚಣೆ ನೀಗಿದಂತಾಗುತ್ತದೆ. ಮಂಗಳೂರು ಬಂದರು, ಏರ್ಪೋರ್ಟ್, ರೈಲ್ವೇ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆ ಇರುವ ನಗರವಾಗಿದ್ದು, ಕರಾವಳಿ ಅಭಿವೃದ್ಧಿ ದೃಷ್ಟಿಯಿಂದ ರಾಜಧಾನಿ ಬೆಂಗಳೂರಿಗೆ ಅತಿ ವೇಗದಲ್ಲಿ ತಲುಪಲು ರೈಲು ವ್ಯವಸ್ಥೆಯಾಗಬೇಕಿದೆ. ಇದಕ್ಕಾಗಿ ಮಂಗಳೂರು – ಬೆಂಗಳೂರು ರೈಲ್ವೇ ಹಾದಿಯನ್ನು ಅಭಿವೃದ್ಧಿ ಮಾಡಲೇಬೇಕಿದೆ ಎಂದು ಸಂಸದ ಚೌಟ ಪತ್ರದಲ್ಲಿ ಸಚಿವರಿಗೆ ಮನವಿ ಮಾಡಿದ್ದಾರೆ.
ಉಳಿದಂತೆ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ರೈಲ್ವೇ ಕಾಮಗಾರಿಗಳ ಪರಿಶೀಲನೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಯ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ರೈಲ್ವೇ ಸಚಿವರಾಗಿ ತಾವು ಮಂಗಳೂರಿನಲ್ಲೇ ಸಭೆ ನಡೆಸಿದರೆ, ಅದರಲ್ಲಿ ದಕ್ಷಿಣ, ನೈರುತ್ಯ, ಕೊಂಕಣ ರೈಲ್ವೇ ವಿಭಾಗದ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಪಿಡಬ್ಲ್ಯುಡಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸುವ ಅವಕಾಶ ಸಿಗುತ್ತದೆ. ಎಲ್ಲ ಇಲಾಖೆಗಳನ್ನು ಒಟ್ಟು ಸೇರಿಸಿ ಮಂಗಳೂರಿನಲ್ಲಿ ಸಭೆಯನ್ನು ಮಾಡಲು ಉದ್ದೇಶಿಸಿದ್ದು ಈ ಸಭೆಯಲ್ಲಿ ಸಚಿವರಾಗಿ ತಾವು ಪಾಲ್ಗೊಳ್ಳಬೇಕೆಂದು ಪತ್ರ ಬರೆದು ಸಂಸದರು ಕೇಳಿಕೊಂಡಿದ್ದಾರೆ.
MP Brijesh Chowta writes letter to railway minister to improve Bangalore mangalore line.
20-09-25 10:57 pm
HK News Desk
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm