Fire Mangalore, SEZ: ಎಸ್ಇಝೆಡ್ ಒಳಗಡೆ ಭಾರೀ ಬೆಂಕಿ ಅವಘಡ ; ಮೀನು ಉತ್ಪನ್ನ ಘಟಕಕ್ಕೆ ಬೆಂಕಿ, ಆಗಸದೆತ್ತರಕ್ಕೆ ಚಾಚಿದ ಹೊಗೆ, ಕೋಟ್ಯಂತರ ಮೌಲ್ಯದ ಸೊತ್ತು ಭಸ್ಮ 

14-07-24 10:06 pm       Mangalore Correspondent   ಕರಾವಳಿ

ಸುರತ್ಕಲ್ ಬಳಿಯ ಎಸ್ಇಝೆಡ್ ವ್ಯಾಪ್ತಿಯಲ್ಲಿ ಮೀನು ಆಹಾರ ಉತ್ಪನ್ನ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಕೋಟ್ಯಾಂತರ ರೂ.ಗಳ ನಷ್ಟ ಉಂಟಾಗಿದೆ.

ಮಂಗಳೂರು, ಜುಲೈ 14: ಸುರತ್ಕಲ್ ಬಳಿಯ ಎಸ್ಇಝೆಡ್ ವ್ಯಾಪ್ತಿಯಲ್ಲಿ ಮೀನು ಆಹಾರ ಉತ್ಪನ್ನ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಕೋಟ್ಯಾಂತರ ರೂ.ಗಳ ನಷ್ಟ ಉಂಟಾಗಿದೆ.

ಜೋಕಟ್ಟೆ ಬಳಿಯ ಅಥೆಂಟಿಕ್ ಓಷನ್ ಟ್ರೆಷರ್ ಎಂಬ ಮೀನು ಉತ್ಪನ್ನ ಘಟಕದಲ್ಲಿ ಭಾನುವಾರ ಸಂಜೆ ಬೆಂಕಿ ದುರಂತ ಸಂಭವಿಸಿದೆ. ಸುಮಾರು 10 ಕೋಟಿ ಮೌಲ್ಯದ ಮತ್ಸ್ಯ ಉತ್ಪನ್ನಗಳು ಬೆಂಕಿಗೆ ತುತ್ತಾಗಿದೆ ಎನ್ನಲಾಗಿದೆ.‌ ಕಂಪೆನಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದರಿಂದ ಭಾನುವಾರ ರಜೆ ಕೊಡಲಾಗಿತ್ತು. ಹೀಗಾಗಿ ನೌಕರರು ಯಾರೂ ಇರಲಿಲ್ಲ ಎನ್ನಲಾಗಿದೆ. ಹಾಗಾಗಿ ಪ್ರಾಣ ಹಾನಿ ಸಂಭವಿಸಿಲ್ಲ. 

ಅಥೆಂಟಿಕ್ ಓಷನ್ ಟ್ರೆಷರ್ ಕಂಪೆನಿಯು ಮೀನುಗಳನ್ನು ಸ್ವಚ್ಛಗೊಳಿಸಿ ಮಾಂಸದ ರೂಪಕ್ಕೆ ತಂದು ಅದನ್ನು 10 ಕೆ.ಜಿ. ಪ್ಯಾಕೆಟ್ ಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಕಂಪೆನಿಯಾಗಿದೆ. ಕಂಪೆನಿಯ ಕೋಲ್ಡ್ ಸ್ಟೋರ್ ಸೆಕ್ಷನ್ ಮತ್ತು ಕಟ್ಟಿಂಗ್ ಸೆಕ್ಷನ್ ಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಸುಮಾರು 10 ಕೋಟಿ ರೂ. ಮೌಲ್ಯದ ಮತ್ಸ್ಯ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ. ಬಳಿಕ ಎಂಆರ್ ಪಿಎಲ್, ಗೇಲ್ ಇಂಡಿಯಾ ಕಂಪೆನಿಗಳ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಹೊರ ಭಾಗದಲ್ಲಿ ಮಳೆಯ ನಡುವೆಯೂ ಬಾನೆತ್ತರಕ್ಕೆ ಹಾರುತ್ತಿದ್ದ ಬೆಂಕಿ ಮತ್ತು ಹೊಗೆ ಸ್ಥಳೀಯರನ್ನು ಅಚ್ಚರಿಗೆ ನೂಕಿತ್ತು.‌

SEZ massive fire erupts, fish factory catches fire in Mangalore. Fire personals had come in large number to off the fire