Udupi fire, Ambalpady, wife: ಅಂಬಲಪಾಡಿ ಬೆಂಕಿ ಅವಘಡ ಪ್ರಕರಣ ; ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾರ್ ಮಾಲಕರ ಪತ್ನಿ, ಉಡುಪಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷೆ  ಸಾವು, ಯೂಟ್ಯೂಬ್, ರೀಲ್ಸ್ ನಲ್ಲಿ ಸಕ್ರಿಯವಾಗಿದ್ದ ಅಶ್ವಿನಿ ಶೆಟ್ಟಿ‌ ದುರಂತ ಅಂತ್ಯ 

16-07-24 03:46 pm       HK News Desk   ಕರಾವಳಿ

ಅಂಬಲಪಾಡಿಯಲ್ಲಿ ನಡೆದಿದ್ದ ಭಾರೀ ಬೆಂಕಿ ಅವಘಡದಲ್ಲಿ ತೀವ್ರ ಸುಟ್ಟ ಗಾಯಕ್ಕೀಡಾಗಿದ್ದ ಉಡುಪಿ ನಗರ ಘಟಕದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಶೆಟ್ಟಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.‌

ಉಡುಪಿ, ಜುಲೈ.16: ಅಂಬಲಪಾಡಿಯಲ್ಲಿ ನಡೆದಿದ್ದ ಭಾರೀ ಬೆಂಕಿ ಅವಘಡದಲ್ಲಿ ತೀವ್ರ ಸುಟ್ಟ ಗಾಯಕ್ಕೀಡಾಗಿದ್ದ ಉಡುಪಿ ನಗರ ಘಟಕದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಶೆಟ್ಟಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.‌

ಸೋಮವಾರ ನಸುಕಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲಕ ರಮಾನಂದ ಶೆಟ್ಟಿ(50) ಮೃತಪಟ್ಟಿದ್ದರು. ತೀವ್ರ ಸುಟ್ಟ ಗಾಯ ಮತ್ತು ಹೊಗೆಯಿಂದಾಗಿ ಉಸಿರು ಕಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತ್ನಿ ಅಶ್ವಿನಿ ಶೆಟ್ಟಿ (48) ಮಣಿಪಾಲ ಆಸ್ಪತ್ರೆಯಲ್ಲಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತಿಯ ಬೆನ್ನಲ್ಲೇ ಪತ್ನಿ ಅಶ್ವಿನಿ ಕೂಡ ಸಾವನ್ನಪ್ಪಿರುವುದು ಕುಟುಂಬಸ್ಥರು ಮತ್ತು ಸ್ನೇಹಿತ ವಲಯದಲ್ಲಿ ದಿಗ್ಭ್ರಾಂತಿ ಮೂಡಿಸಿದೆ. 

ಎರಡು ಅಂತಸ್ತಿನ ಮನೆಗೆ ಸೆಂಟ್ರಲೈಸ್ಡ್ ಎಸಿಯಲ್ಲಿ ಶಾರ್ಟ್ ಸರ್ಕಿಟ್ ಆಗಿದ್ದರಿಂದ ಬೆಂಕಿ ಹತ್ತಿಕೊಂಡಿತ್ತು. ಮೇಲಿನ ಮಹಡಿಯಿಂದ ಆವರಿಸಿದ್ದ ಬೆಂಕಿ ಇಡೀ ಮನೆಗೆ ಹರಡಿತ್ತು. ಭಾರೀ ಹೊಗೆಯ ನಡುವೆ ಉಸಿರು ಕಟ್ಟಿದ್ದರಿಂದ ರಮಾನಂದ ಶೆಟ್ಟಿ ಮನೆಯ ಒಳಗಡೆಯೇ ಬಾಗಿಲ ಬಳಿ ಕುಸಿದು ಬಿದ್ದಿದ್ದರು. ಬೆಡ್ ರೂಮ್ ಬಳಿಯಲ್ಲೇ ಅಶ್ವಿನಿ ಅವರು ನೆಲದಲ್ಲಿ ಕುಸಿದು ಬಿದ್ದಿದ್ದರು. ಇಬ್ಬರು ಮಕ್ಕಳು ಕೆಳ ಮಹಡಿಯ ಕೋಣೆಯಲ್ಲಿದ್ದು ಮನೆಯಲ್ಲಿ ಬೆಂಕಿ ಆವರಿಸಿದ್ದು ನೋಡಿ ಟಾಯ್ಲೆಟ್ ಒಳಗೆ ಹೋಗಿ ಕುಳಿತಿದ್ದರು. ಅಲ್ಲದೆ, ಅಲ್ಲಿಂದಲೇ ಪೊಲೀಸರಿಗೆ ಮತ್ತು ಇತರ ಸಂಬಂಧಿಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಬಳಿಕ ಮನೆಯಲ್ಲಿದ್ದ ಪತಿ- ಪತ್ನಿಯನ್ನು ಪೊಲೀಸರು ಆಸ್ಪತ್ರೆಗೆ ಒಯ್ದಿದ್ದರು. ರಮಾನಂದ ಶೆಟ್ಟಿ ಅಷ್ಟರಲ್ಲೇ ಮೃತಪಟ್ಟಿದ್ದರು. 

ಅಶ್ವಿನಿಗೆ ಚಿಕಿತ್ಸೆ ನೀಡಿದ ವೈದ್ಯರು, ಬೆಂಕಿ ಮತ್ತು ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೆ ಮೆದುಳು ಹಾಗೂ ಶ್ವಾಸಕೋಶ ಬ್ಲಾಕ್ ಆಗಿತ್ತು. ಇದರಿಂದಾಗಿ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ. ಸದ್ಯ ಮಕ್ಕಳಿಬ್ಬರಿಗೆ ಚಿಕಿತ್ಸೆ ಮುಂದುವರಿದಿದ್ದು ಅಪಾಯದಿಂದ ಪಾರಾಗಿದ್ದಾರೆ. ಸೆಂಟ್ರಲೈಸ್ ಎಸಿ ಮೆಷಿನ್ ಶಾರ್ಟ್ ಸರ್ಕ್ಯೂಟ್ ನಿಂದ ಬ್ಲಾಸ್ಟ್ ಆಗಿದ್ದರಿಂದ ಅಗ್ನಿ ಅವಘಡ ಉಂಟಾಗಿದೆ ಎನ್ನಲಾಗುತ್ತಿದೆ. 

ಅಶ್ವಿನಿ ಶೆಟ್ಟಿ ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ಇದರ ಜೊತೆಗೆ, Ballals Caboose ಎನ್ನುವ ಹೆಸರಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಬಿಜೆಪಿ ಮೂಲಕವೂ ಸಕ್ರಿಯವಾಗಿದ್ದರು. ಹಿರಿಯ ಮಗನೊಂದಿಗೆ ರೀಲ್ಸ್ ಮಾಡುತ್ತಿದ್ದುದರಿಂದ ಅಶ್ವಿನಿ ತನ್ನದೇ ಆದ ಅಭಿಮಾನಿ ಬಳಗವನ್ನು ಪಡೆದು ಖ್ಯಾತಿ ಪಡೆದಿದ್ದರು. ಈಗ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.

Ashwini Shetty (50), who was seriously injured in the fire mishap in Ambalpady, has succumbed to her injuries. Her husband, Ramananda Shetty (55), died on June 15 due to the same incident. The fire occurred in the house of Ramananda and Ashwini Shetty on June 15, resulting in major damage to the house and injuries to its residents. The three-story house was completely burnt from the inside. The exact cause of the incident is still under investigation.