ಬ್ರೇಕಿಂಗ್ ನ್ಯೂಸ್
19-07-24 12:20 pm Mangalore Correspondent ಕರಾವಳಿ
ಮಂಗಳೂರು, ಜುಲೈ 19: ಇತ್ತೀಚೆಗೆ ರಿಯಲ್ ಎಸ್ಟೇಟ್ ಬಿಲ್ಡರುಗಳ ಸಿಟ್ಟಿನ ಕಾರಣಕ್ಕೆ ವರ್ಗಾವಣೆಯಾದರೂ, ಅದಕ್ಕೆ ಟ್ರಿಬ್ಯುನಲ್ ಮೂಲಕ ತಡೆ ತಂದುಕೊಂಡು ಮಂಗಳೂರಿನಲ್ಲೇ ಝಂಡಾವೂರಿದ್ದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದಾರೆ.
ಬೆಂಗಳೂರಿನ ಲೋಕಾಯುಕ್ತ ಪೊಲೀಸರು ಮಂಗಳೂರು ಪಾಲಿಕೆಯ ಕಚೇರಿ ಮತ್ತು ಮಣ್ಣಗುಡ್ಡದ ಆಯುಕ್ತರ ಬಂಗಲೆಗೆ ಏಕಕಾಲದಲ್ಲಿ ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಆನಂದ ಸಿ.ಎಲ್ ಮೂಲತಃ ಮಂಡ್ಯದವರಾಗಿದ್ದು ಸೈನಿಕನಾಗಿ ನಿವೃತ್ತಿ ಪಡೆದು ಕೆಎಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಆರಂಭಿಸಿದ್ದರು. ಮೈಸೂರಿನಲ್ಲಿ ವಿಭಾಗಾಧಿಕಾರಿ ಮತ್ತು ಬೆಂಗಳೂರು ಬಿಡಿಎಯಲ್ಲಿ ಅಧಿಕಾರಿಯಾಗಿದ್ದ ವೇಳೆ ಅಕ್ರಮ ಆಸ್ತಿ ಮಾಡಿಕೊಂಡ ಬಗ್ಗೆ ಆನಂದ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಹೋಗಿತ್ತು.
ಇದೀಗ ರಾಜ್ಯಾದ್ಯಂತ 54 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆಂಬ ಆರೋಪದಲ್ಲಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಸೇರಿದಂತೆ ಆನಂದ ಸಿಎಲ್ ಅವರು ಅಕ್ರಮ ಆಸ್ತಿ ಮಾಡಿಟ್ಟ ಮೈಸೂರು, ಬೆಂಗಳೂರು, ಮಂಗಳೂರಿನಲ್ಲಿ ದಾಳಿ ಮಾಡಿದ್ದಾರೆ. ಮಂಗಳೂರಿನಲ್ಲಿ ಡಿವೈಎಸ್ಪಿ ಬಸವರಾಜ ಮಗ್ದುಂ ನೇತೃತ್ವದಲ್ಲಿ ದಾಳಿಯಾಗಿದೆ. 


ಇತ್ತೀಚೆಗೆ ಮಂಗಳೂರಿನ ಬಲ್ಮಠದಲ್ಲಿ ಪ್ರಭಾವಿ ಬಿಲ್ಡರ್ ಒಬ್ಬರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪಾಲಿಕೆ ಕಮಿಷನರ್ ಆನಂದ ಸಿ.ಎಲ್ ಅವರು ಬಿಲ್ಡರ್ ಗೆ ನೋಟೀಸ್ ನೀಡಿದ್ದಲ್ಲದೆ, ಮುಂದಿನ ಆದೇಶದ ವರೆಗೆ ಕಾಮಗಾರಿ ನಡೆಸದಂತೆ ಸೂಚಿಸಿದ್ದರು. ಇದಲ್ಲದೆ, ಮಂಗಳೂರಿನ ಒಬ್ಬ ಪ್ರಭಾವಿ ಇಂಜಿನಿಯರ್, ಇತರ ಬಿಲ್ಡರುಗಳ ಮೇಲೆಯೂ ಕಮಿಷನರ್ ನೋಟಿಸ್ ಮಾಡಿದ್ದರು. ಇದರ ಬೆನ್ನಲ್ಲೆ ಕಮಿಷನರ್ ಹುದ್ದೆಯಿಂದ ವರ್ಗಾವಣೆ ಆಗಿದ್ದರು. ಆದರೆ, ಆನಂದ ಸಿಎಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದು ತನ್ನ ವರ್ಗಾವಣೆಯನ್ನು ತಡೆ ಹಾಕಿದ್ದರು.
Mangaluru City Corporation Commissioner C L Ananda house and office raided by Lokayukta. The Karnataka Lokayukta on Friday morning launched massive search operations in 55 places in six districts across the state. This is the second large-scale raid targetting erring government officials in over a week
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
14-07-26 07:55 pm
HK News Staffer
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
14-07-26 02:43 pm
HK News Staffer
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm