Mangalore Jokatte, Rain, landslide: ಜೋಕಟ್ಟೆಯಲ್ಲಿ ಭಾರೀ ಗಾಳಿ ಮಳೆಗೆ ತಡೆಗೋಡೆ ಕುಸಿದು ಮನೆ ನೆಲಸಮ ; ಮಲಗಿದ್ದ 17 ವರ್ಷದ ಬಾಲಕ ಸಾವು, ಸಂಬಂಧಿಕನಾಗಿ ಬಂದಿದ್ದಾಗಲೇ ಎಳೆದೊಯ್ದ ಜವರಾಯ 

25-07-24 11:03 am       Mangalore Correspondent   ಕರಾವಳಿ

ಭಾರೀ ಗಾಳಿ‌ ಮಳೆಗೆ ಮನೆಯ ಮೇಲೆ‌ ತಡೆಗೋಡೆ ಕುಸಿದು 17 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಸುರತ್ಕಲ್ ಬಳಿಯ ಹೊರವಲಯದ ಜೋಕಟ್ಟೆ ಬಳಿ ನಡೆದಿದೆ. 

ಮಂಗಳೂರು, ಜುಲೈ.25: ಭಾರೀ ಗಾಳಿ‌ ಮಳೆಗೆ ಮನೆಯ ಮೇಲೆ‌ ತಡೆಗೋಡೆ ಕುಸಿದು 17 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಸುರತ್ಕಲ್ ಬಳಿಯ ಹೊರವಲಯದ ಜೋಕಟ್ಟೆ ಬಳಿ ನಡೆದಿದೆ. 

ಘಟನೆಯಲ್ಲಿ ಸಂಬಂಧಿಕರ ಮನೆಗೆ ಅಥಿತಿಯಾಗಿ ಬಂದಿದ್ದ ಮೂಲ್ಕಿ ಕೊಲ್ನಾಡು‌ ಲಿಂಗಪ್ಪಯ್ಯ ಕಾಡು ನಿವಾಸಿ 17 ವರ್ಷದ ಬಾಲಕ ಶೈಲೇಶ್ ಸಾವನ್ನಪ್ಪಿದ್ದಾನೆ. ತಡರಾತ್ರಿ ಭಾರೀ ಮಳೆಯಾಗುತ್ತಿದ್ದಾಗ ಪಕ್ಕದ ತಡೆಗೋಡೆ ಮನೆ ಮೇಲೆ ಕುಸಿದು ಬಿದ್ದಿದ್ದು‌ ಮನೆ ನೆಲ‌ಸಮವಾಗಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಹಂಚು ಬಿದ್ದಿದ್ದು ಈ ವೇಳೆ ಶೈಲೇಶ್ ತೀವ್ರ ಗಾಯಗೊಂಡಿದ್ದ. ಅಗ್ನಿ ಶಾಮಕ‌ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಒಯ್ದಿದ್ದಾರೆ. 

ಮನೆಯಲ್ಲಿದ್ದ ಸಂಜೀವ (55), ಸುರೇಶ್ (20), ಸವಿತಾ (19), ಒಂದು ವರ್ಷದ ಮಗು ಸಖಿ ಅವರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ರಕ್ಷಣೆ ಮಾಡಲಾಗಿದೆ. ಮಧ್ಯರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ತಡೆಗೋಡೆ ಕುಸಿದು ಮನೆಯ ಮೇಲೆ ಬಿದ್ದಿದೆ. ಶೈಲೇಶ್ ಸಂಬಂಧಿಕ ಹುಡುಗನಾಗಿದ್ದು ಈ ಮನೆಗೆ ರಾತ್ರಿ ಕಳೆಯಲು ಬಂದು ದುರಂತ ಸಾವಿಗೀಡಾಗಿದ್ದಾನೆ.

Mangalore Jokatte landslide due to heavy rains, 17 year old boy dies after wall collapses. The deceased has been identified as Shailesh.