ಬ್ರೇಕಿಂಗ್ ನ್ಯೂಸ್
25-07-24 05:04 pm Udupi Correspondent ಕರಾವಳಿ
ಉಡುಪಿ, ಜುಲೈ.25: ವಿಧಾನಸಭೆ ಅಧಿವೇಶನದಲ್ಲಿ ತನ್ನ ಮೇಲೆ ಕಾರ್ಕಳ ಸುನಿಲ್ ಕುಮಾರ್ ಮುಡಾ ಸೈಟ್ ಬಗ್ಗೆ ಆರೋಪ ಮಾಡಿದಾಗ, ಸಿಎಂ ಸಿದ್ದರಾಮಯ್ಯ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರದ ಬಗ್ಗೆ ಪ್ರಶ್ನೆ ಎತ್ತಿದ್ದರು. ಮುಖ್ಯಮಂತ್ರಿ ಕಾಲ ಬುಡಕ್ಕೆ ಬಂದಾಗ ಥೀಮ್ ಪಾರ್ಕ್ ಜ್ಞಾನೋದಯ ಆಗಿದೆ, ಕಾಂಗ್ರೆಸಿಗರು ಪ್ರತಿಭಟನೆ ಮಾಡಿದರೂ ಎಚ್ಚರ ಆಗಿರಲಿಲ್ಲ ಎಂಬ ಟೀಕೆಯೂ ಬಂದಿತ್ತು. ಇದರ ಬೆನ್ನಲ್ಲೇ ನಕಲಿ ಪರುಶುರಾಮ ಮೂರ್ತಿ ವಿವಾದಕ್ಕೆ ಸಂಬಂಧಿಸಿ ಅಧಿಕಾರಿಯೊಬ್ಬರ ತಲೆದಂಡ ಮಾಡಲಾಗಿದೆ.
ಪರುಶುರಾಮ ಥೀಮ್ ಪಾರ್ಕ್ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಒಂದ್ಕಡೆ ಸಿಓಡಿಗೆ ಒಪ್ಪಿಸಿದ್ದರೆ, ಇನ್ನೊಂದೆಡೆ ನ್ಯಾ.ನಾಗಮೋಹನ್ ದಾಸ್ ವಿಚಾರಣಾ ಆಯೋಗವನ್ನು ನೇಮಿಸಿತ್ತು.
ನಕಲಿ ಮೂರ್ತಿ ನಿರ್ಮಿಸಿದ್ದಾರೆ, ಧಾರ್ಮಿಕ ಭಾವನೆಗೆ ಅಪಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದರೂ, ರಾಜ್ಯ ಸರ್ಕಾರ ಮೌನ ವಹಿಸಿತ್ತು. ತರಾತುರಿಯಲ್ಲಿ ಥೀಮ್ ಪಾರ್ಕ್ ಉದ್ಘಾಟನೆ ನೆರವೇರಿಸಿದ್ದೂ ಟೀಕೆಗೆ ಗುರಿಯಾಗಿತ್ತು. ಆನಂತರ, ಮೂರ್ತಿಯನ್ನು ಅಲ್ಲಿಂದ ತೆರವುಗೊಳಿಸಿ ವರ್ಷ ಕಳೆಯುತ್ತಾ ಬಂತು. ಒಟ್ಟು ತನಿಖೆಯೇ ಹಳ್ಳ ಹಿಡಿದು ಹೋಗುತ್ತಿದ್ದರೂ ಮೌನ ವಹಿಸಿದ ಸರ್ಕಾರ ಇದೀಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿ ಆ ಜಾಗಕ್ಕೆ ಬೇರೊಬ್ಬರನ್ನು ನೇಮಕ ಮಾಡಿದೆ.
ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಂ ಪಾರ್ಕ್ ಕಾಮಗಾರಿ ನಡೆಸಲು 11.05 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತ್ತು. ಆದರೆ ಅನುದಾನ ಬಿಡುಗಡೆಯಾಗಿದ್ದು 6.72 ಕೋಟಿಯಾಗಿತ್ತು. ಕಾಮಗಾರಿ ಪೂರ್ಣಗೊಳಿಸದೇ ಸಂಬಂಧಪಟ್ಟ ಇಲಾಖೆಗೂ ಹಸ್ತಾಂತರ ಮಾಡದೇ ಉದ್ಘಾಟನೆ ಮಾಡಿರುವುದರಿಂದ ನಿರ್ಮಾಣದ ಗುಣಮಟ್ಟದ ಬಗ್ಗೆ, ಮತ್ತು ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಅಲ್ಲದೆ, ಹೈಕೋರ್ಟಿಗೂ ದೂರು ಹೋಗಿತ್ತು. ಸದ್ರಿ ಪ್ರಕರಣದ ತನಿಖೆಗೆ ಅಡ್ಡಿಯಾಗುವ ನೆಪದಲ್ಲಿ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತು ಮಾಡಿದ್ದು ಆ ಹುದ್ದೆಗೆ ಸಹಾಯಕ ಯೋಜನಾ ನಿರ್ದೇಶಕರಾಗಿದ್ದ ದಿವಾಕರ ಪಿ. ಅವರನ್ನು ನೇಮಿಸಲಾಗಿದೆ.
Karkala Parashurama Theme Park scam under MLA Sunil Kumar has now got a big update where the project director has been suspended over poor work by the government. Chief minister (CM) Siddaramaiah had ordered chief secretary of the tourism department to hold investigation into the alleged scam in the construction of Parashuram Theme Park at Karkala.
20-09-25 10:57 pm
HK News Desk
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm