ಬಗಂಬಿಲ: ಎಕ್ಕೂರು ಬಾಬಾ ಸ್ಮರಣೆ,ಬೃಹತ್ ರಕ್ತದಾನ ಶಿಬಿರ

08-12-20 11:07 am       Mangalore Correspondent   ಕರಾವಳಿ

ಬಾಬಾ ಅವರ ಸಮಾಜಮುಖಿ ಕಾರ್ಯಗಳು ಎಂದಿಗೂ ಜೀವಂತ. ಸಮಾಜಕ್ಕೆ ಪೂರಕವಾದ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿರುವುದು ಅವರಿಗೆ ಸಲ್ಲಿಸುವ ಗೌರವ

ಉಳ್ಳಾಲ: ಡಿ.8: ಬಾಬಾ ಅವರ ಸಮಾಜಮುಖಿ ಕಾರ್ಯಗಳು ಎಂದಿಗೂ ಜೀವಂತ. ಅವರ ಸ್ಮರಣಾರ್ಥ ಕ್ರೀಡಾಕೂಟಗಳನ್ನು ಆಯೋಜಿಸದೆ ಸಮಾಜಕ್ಕೆ ಪೂರಕವಾದ ಕಾರ್ಯದಲ್ಲಿ ಕಾರ್ಯಕರ್ತರು ಜಿಲ್ಲೆಯುದ್ದಕ್ಕೂ ತೊಡಗಿಸಿಕೊಂಡಿರುವುದು ಅವರಿಗೆ ಸಲ್ಲಿಸುವ ಗೌರವ ಎಂದು ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ ಹೇಳಿದರು.

ದಿ|ಎಕ್ಕೂರು ಬಾಬಾ(ಶುಭಕರ ಶೆಟ್ಟಿ) ಸ್ಮರಣಾರ್ಥವಾಗಿ ಹಿಂದೂಯುವಸೇನೆ ಮಹಾದೇವಿ ಶಾಖೆ ಬಗಂಬಿಲ, ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಸಹಯೋಗದೊಂದಿಗೆ ಬಗಂಬಿಲ ಫ್ರೆಂಡ್ಸ್ ಸರ್ಕಲ್ ಮೈದಾನದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ,ಆಯುಷ್ಮಾನ್ ಕಾರ್ಡ್ ಹಾಗೂ ಪ್ರಧಾನಮಂತ್ರಿ ಜನಧನ್ ಖಾತೆಗೆ ಉಚಿತ ನೋಂದಾವಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ್ ಚೌಟ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಜನಾರ್ದನ್ ಅರ್ಕುಳ, ಕುಂಪಲ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಅಧ್ಯಕ್ಷ ಸತ್ಯನಾರಾಯಣ ಹೂಡೆ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ವೀರಪ್ಪ ಮೂಡುಶೆಡ್ಡೆ, ರವಿಚಂದ್ರ ಎಕ್ಕೂರು, ಶ್ರೀ ಮಹಾದೇವಿ ಮಂದಿರ ಬಗಂಬಿಲದ ಅರ್ಚಕ ಬಾಲಕೃಷ್ಣ, ಕಿರಣ್ ರೈ ಬಜಾಲ್, ಸಂದೀಪ್ ಶೆಟ್ಟಿ ಎಕ್ಕೂರು, ಯೆನೆಪೋಯ ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ಡಾ. ವಿದ್ಯಾ, ಶ್ರೀ ಮಹಾದೇವಿ ಭಜನಾ ಮಂದಿರದ ಅಧ್ಯಕ್ಷ ಸುನಂದಾ ಬಗಂಬಿಲ, ಉಳ್ಳಾಲ ಪುರಸಭೆ ಮಾಜಿ ಸದಸ್ಯ ಪ್ರಶಾಂತ್ ಕಾಪಿಕಾಡ್, ಹಿಂ.ಯು.ಸೇ ಬಗಂಬಿಲ ಶಾಖೆ ಅಧ್ಯಕ್ಷ ಪ್ರವೀಣ್ ದಾಸ್ ಬಗಂಬಿಲ, ಶ್ರೀಕಾಂತ್ ಉಳ್ಳಾಲ್, ಚಂದ್ರಶೇಖರ್ ಶೆಟ್ಟಿ,ಸಂದೀಪ್ ಕುಂಪಲ ಮುಖ್ಯ ಅತಿಥಿಗಳಾಗಿದ್ದರು. 

ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ವತಿಯಿಂದ 944 ಯುನಿಟ್ ರಕ್ತದಾನ ನಡೆಸಲು ಪ್ರೇರೇಪಿಸಿದ ನಿಶಾಂತ್  ಜೆಪ್ಪಿನಮೊಗರು ಇವರನ್ನು ಸನ್ಮಾನಿಸಲಾಯಿತು.