ಬ್ರೇಕಿಂಗ್ ನ್ಯೂಸ್
28-07-24 06:37 pm Mangalore Correspondent ಕರಾವಳಿ
ಮಂಗಳೂರು, ಜುಲೈ 28: ಮೂಡಾ ಹಗರಣದ ಬಗ್ಗೆ ಮುಖ್ಯಮಂತ್ರಿಗಳು ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಿದ್ದಾರೆ. ವಿಚಾರಣೆ ಬಳಿಕ ಹಾಲು ಯಾವುದು, ನೀರು ಯಾವುದೆಂದು ಗೊತ್ತಾಗುತ್ತೆ. ಬಿಜೆಪಿ, ಜೆಡಿಎಸ್ ನವರಿಗೆ ಈ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಬೇರೆಯವರಿಗೆ ಕಲ್ಲು ಹೊಡೆಯುವ ಮೊದಲು ಅವರು ಗಾಜಿನ ಮನೆಯಲ್ಲಿದ್ದಾರೆಂದು ತಿಳಿದುಕೊಂಡ್ರೆ ಬಹಳ ಒಳ್ಳೇದು ಎಂದು ವಿಧಾನ ಪರಿಷತ್ ಸದಸ್ಯ, ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಹಗರಣ ಆಗಿದೆಯೋ ಗೊತ್ತಿಲ್ಲ, ಆದ್ರೆ ಆಪಾದನೆ ಮಾಡಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತೆ. ಸಿಬಿಐ, ಇಡಿ ಎಲ್ಲವು ವಿಚಾರಣೆಗೆ ಮುಂದೆ ಬಂದಿದೆ. ಅಂತಿಮವಾದ ನಿರ್ಣಯ ಬಂದ ಬಳಿಕ ಯಾರು ಎಲ್ಲಿದ್ದಾರೆಂದು ಗೊತ್ತಾಗುತ್ತೆ. ರಾಜ್ಯ ಸರ್ಕಾರಕ್ಕೆ ಮಸಿ ಬಳಿಯಬೇಕೆಂದು ನಿರಂತರ ಪ್ರಯತ್ನ ಆಗ್ತಿದೆ. ಬಿಜೆಪಿ, ಸಂಘಪರಿವಾರ, ಕಾಂಗ್ರೆಸ್ ಪಕ್ಷದ ವಿರೋಧಿಗಳು ಮಾಡ್ತಿದ್ದಾರೆ. ಇದೇನು ಹೊಸದೇನು ಅಲ್ಲ.
2ಜಿ, 3ಜಿ ಆಗಿ, ಹತ್ತು ವರ್ಷ ಆಯ್ತು. ಆ ಮಹಾನುಭಾವ ವಿಶ್ವಗುರು ಯಾರನ್ನಾದರೂ ಜೈಲಿಗೆ ಕಳುಹಿಸಿದ್ರಾ..? ನೀವು ತೊಳೆದುಕೊಂಡಿರಿ ಎಂದು ಮಸಿ ಬಳಿದು ಬಿಡೋದು. ಈ ನಾಟಕಕ್ಕೆ ಲೋಕಸಭಾ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟಿದ್ದಾರೆ. ಕಟ್ಟಿಟ್ಟು ಕೊಟ್ಟ ಬುತ್ತಿ ಹೇಳಿಕೊಟ್ಟ ಮಾತು ಬಹಳ ದೂರ ಬರೋದಿಲ್ಲ. ಸುಳ್ಳು ಬಹಳ ದಿವಸ ಇರೋದಿಲ್ಲ. ಕರ್ನಾಟಕದಲ್ಲಿ ಆಗಿರುವ ಘಟನೆಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದರು.
ಹೈಕಮಾಂಡ್ ಮುಖ್ಯಮಂತ್ರಿ, ಕೆ.ಪಿ.ಸಿ.ಸಿ ಅಧ್ಯಕ್ಷರನ್ನು ಕರೆಯೋದು ಸಂಪ್ರದಾಯ. ಯಾವ ವಿಚಾರ ಮಾತನಾಡ್ತಾರೆಂದು ನೋಡಬೇಕಾಗಿದೆ. ಭೂಮಿ ಅಂತ ಬಂದಾಗ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬಹಳಷ್ಟು ಜನ ಇರ್ತಾರೆ. ಅದರ ಬಗ್ಗೆ ಮಾತನಾಡಿ ಏನು ಪ್ರಯೋಜನ ಇಲ್ಲ. ಆತರ ಮಾಡಬೇಕಾದ್ರೆ ಬೇರೆ ರೀತಿಯ ವೇದಿಕೆ ಬೇಕಾಗುತ್ತೆ. ಮಾಡಿರುವ ಅಪಾದನೆಗೆ ತನಿಖೆ ವರದಿ ಬಂದ ಬಳಿಕ ನೋಡೋಣ ಎಂದರು. ಬಿಜೆಪಿಯ 40% ಕಮಿಷನ್ ಆರೋಪದ ಬಗ್ಗೆ ಕೇಳಿದ ತನಿಖೆ ಯಾಕೆ ಇನ್ನು ನಡೆದಿಲ್ಲ ಅಂತ ಸಿಎಂ , ಡಿಸಿಎಂ ಅವರನ್ನ ಕೇಳಬೇಕು. ಯಾಕೆ ತನಿಖೆ ಈವರೆಗೆ ಆಗಿಲ್ಲ ಅನ್ನೋದು ಅವರೇ ಉತ್ತರಿಸುತ್ತಾರೆ. ನಾನು ಸರಕಾರದ ಪರವಾಗಿ ಇರೋನು. ಆದರೆ ಸರಕಾರದಲ್ಲಿ ಇಲ್ಲ ಎಂದರು ಬಿಕೆ.
ನೀತಿ ಆಯೋಗದ ಸಭೆಗೆ ಸಿ.ಎಂ ಸಿದ್ದರಾಮಯ್ಯ ಗೈರು ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀತಿ ಆಯೋಗ ಎಂಬುದು ಪ್ರಧಾನಮಂತ್ರಿಗಳು ಹೇಳಿದ್ದಕ್ಕೆ ತಾಳ ಹಾಕುವ ಹಾಗೆ ಮಾಡೋದಕ್ಕೆ ಇರೋದು. ನೀತಿ ಆಯೋಗ ಸರಿ ಇದ್ದಿದ್ರೆ ಬಜೆಟ್ ನಲ್ಲಿ ಅತೀ ಹೆಚ್ಚು ತೆರಿಗೆ ಮೂಲಕ ಖಜಾನೆ ತುಂಬಿಸುವ ರಾಜ್ಯಗಳಿಗೆ ಸಹಾಯ ಮಾಡಬೇಕಿತ್ತು. ರೋಗಗ್ರಸ್ತ ರಾಜ್ಯಗಳಿಗೆ ಹೆಚ್ಚಿನ ಹಣ ಕೊಟ್ಟಿದ್ದಾರೆ. ರಕ್ತ, ಬೆವರು ಸುರಿಸಿ ಟ್ಯಾಕ್ಸ್ ಕಟ್ಟೋದು ಅಭಿವೃದ್ಧಿ ಹೊಂದಿದ ರಾಜ್ಯಗಳು. ನಾವು ಬೇರೆಯವರಿಗೆ ಕೊಡಬೇಡಿ ಎಂದು ಹೇಳಲ್ಲ. ನಮ್ಮ ಶೇರ್ ನಮಗೆ ಕೊಡಿ ಎಂದು ಕೇಳಿದ್ರೆ ಕೊಟ್ಟಿಲ್ಲ. ಅದಕ್ಕೆ ನಾವು ನೀತಿ ಆಯೋಗವನ್ನು ಬಾಯ್ಕಾಟ್ ಮಾಡಿದ್ದೇವೆ.
ಪ್ಲ್ಯಾನಿಂಗ್ ಕಮೀಷನ್ ಹೆಸರಿಟ್ಟಿದ್ದು ಸಾವರ್ಕರ್ ಅಲ್ಲ
ಮಮತಾ ಬ್ಯಾನರ್ಜಿ ವಿರೋಧ ಮಾಡಿ ಹೋಗೋದು ಅದು ಅವರಿಗೆ ಬಿಟ್ಟಿರೋದು. ಪ್ಲ್ಯಾನಿಂಗ್ ಕಮೀಷನ್ ಅನ್ನೋದು ಸಾವರ್ಕರ್ ಹೆಸರಿಟ್ಟಿದ್ದು ಅಲ್ಲ. ದೇಶದ ಸ್ವತಂತ್ರ ಹೋರಾಟದ ಉತ್ತುಂಗ ನಾಯಕ ಸುಭಾಷ್ಚಂದ್ರ ಬೋಸ್. ಆ ಪ್ಲ್ಯಾನಿಂಗ್ ಕಮೀಷನ್ ಹೆಸರೇ ತೆಗಿತಾರೆ. ಮಹಾತ್ಮಗಾಂಧಿ, ನೆಹರು ಇಟ್ಟಿರೋದನ್ನು ಬದಲಾವಣೆ ಮಾಡ್ತಿದ್ದಾರೆ. ಸುಭಾಷ್ ಚಂದ್ರ ಬೋಸ್ ಮೇಲೆ ಇವರಿಗೇನು ಕೋಪ. ಪ್ಲ್ಯಾನಿಂಗ್ ಕಮೀಷನ್ ಹೆಸರಿಟ್ಟಿದ್ದು ಅವರು. ಅದನ್ನು ಯಾಕೆ ಬದಲಾವಣೆ ಮಾಡ್ತಿದ್ದಾರೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
The chief minister has ordered a probe by a retired judge into the Muda scam. After inquiry it will be known which is milk and which is water. BJP and JDS have no moral right to talk about this corruption says BK Hariprasad in Mangalore
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
14-07-26 01:37 pm
HK News Staffer
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
14-07-26 02:43 pm
HK News Staffer
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm