ಬ್ರೇಕಿಂಗ್ ನ್ಯೂಸ್
30-07-24 09:00 pm Mangalore Correspondent ಕರಾವಳಿ
Photo credits : Thumbnail Photo: The Hindu
ಮಂಗಳೂರು, ಜುಲೈ 30: ನೇತ್ರಾವತಿ, ಫಲ್ಗುಣಿ ನದಿಗಳು ಮಂಗಳೂರು ನಗರಕ್ಕೆ ಒಂದಕ್ಕೊಂದು ಮುತ್ತಿಕ್ಕುವ ರೀತಿ ಸುತ್ತಿಬಳಸಿ ಹರಿಯುತ್ತವೆ. ಮಂಗಳೂರಿನ ಉತ್ತರಕ್ಕೆ ಫಲ್ಗುಣಿಯಾದರೆ, ದಕ್ಷಿಣದಿಂದ ನೇತ್ರಾವತಿ ಹರಿದು ಬಂದು ಪಶ್ಚಿಮದಲ್ಲಿ ಇವೆರಡೂ ಜೊತೆಯಾಗಿ ಕಡಲು ಸೇರುವುದೇ ರುದ್ರ ರಮಣೀಯ. ಮಳೆಗಾಲದಲ್ಲಂತೂ ಮಂಗಳೂರನ್ನು ಸುತ್ತಿಕೊಂಡು ಈ ನದಿಗಳು ತುಂಬಿಕೊಂಡು ಹರಿಯುವುದನ್ನು ನೋಡುವುದೇ ಚಂದ. ಇಂಥ ಸಹಜ ಸೌಂದರ್ಯ ನಮ್ಮಲ್ಲಿದ್ದರೂ, ನಾವು ಇದನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಆಕರ್ಷಣೀಯ ಆಗುವ ರೀತಿ ಮಾಡಿಲ್ಲ. ಪ್ಯಾರಿಸ್, ವೆನಿಸ್ ಎನ್ನುವಂಥ ಪ್ರಾಚೀನ ವೈಭವದ ನಗರಗಳು ನದಿಯನ್ನು ಬಳಸಿಕೊಂಡೇ ಬೆಳೆದು ಜನಾಕರ್ಷಣೀಯ ಆಗಿರುವುದನ್ನು ನಾವು ಓದಿದ್ದರೂ, ಮಂಗಳೂರನ್ನು ಆ ರೀತಿ ಮಾಡುವತ್ತ ಆಡಳಿತಗಳು ಮನಸ್ಸು ಮಾಡಿಲ್ಲ.
ಇತ್ತೀಚೆಗೆ ಭಾರೀ ಸುದ್ದಿಗೆ ಗ್ರಾಸವಾದ ನೇತ್ರಾವತಿ ರಿವರ್ ಫ್ರಂಟ್ ಎನ್ನುವ ಯೋಜನೆ ಅದೇ ದೃಷ್ಟಿಯಿಂದ ಮಾಡಲ್ಪಟ್ಟಿರುವುದು ಅನ್ನುವುದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ತಿಳಿದುಬಂದ ಮಾಹಿತಿ. ಆದರೆ, ಈ ರಿವರ್ ಫ್ರಂಟ್ ಯೋಜನೆ ಕಾಮಗಾರಿಗೆ ಪರಿಸರದ ನೆಪದಲ್ಲಿ ಸದ್ಯಕ್ಕೆ ಗ್ರೀನ್ ಟ್ರಿಬ್ಯುನಲ್ ಕೋರ್ಟ್ ತಡೆಯಾಜ್ಞೆಯ ಬರೆ ಬಿದ್ದಿದೆ. ಮಂಗಳೂರಿನ ಸ್ಥಳೀಯ ಕೋರ್ಟ್ ಬಳಿಕ ಚೆನ್ನೈ ಹಸಿರು ಪೀಠದ ನ್ಯಾಯಾಲಯ ಒಟ್ಟು ಯೋಜನೆಯ ಕಾಮಗಾರಿಗೆ ತಡೆ ಹಾಕಿದ್ದು, ಎರಡು ವರ್ಷಗಳಿಂದ ಕೋರ್ಟ್ ಜಟಾಪಟಿ ಸಾಗಿಬಂದಿದೆ. ನಿಜಕ್ಕಾದರೆ, ರಿವರ್ ಫ್ರಂಟ್ ಅನ್ನುವ ಪರಿಕಲ್ಪನೆಯೇ ವಿಶಿಷ್ಟ ಮತ್ತು ಮಂಗಳೂರು ನಗರದ ಸೌಂದರ್ಯ ಹೆಚ್ಚಿಸುವ ಆಕರ್ಷಕ ಯೋಜನೆ.
ನದಿ ಮತ್ತು ಪೋರ್ಟ್ ಆಧರಿತವಾಗಿ ನಗರವನ್ನು ಆಕರ್ಷಣೀಯವಾಗಿಸಬೇಕು ಎನ್ನುವ ಪರಿಕಲ್ಪನೆಯಡಿ ಮಂಗಳೂರು ನಗರಕ್ಕೆ ಸ್ಮಾರ್ಟ್ ಸಿಟಿ ಎನ್ನುವ ಯೋಜನೆ ಸಿಕ್ಕಿತ್ತು. ಇದರಂತೆ, ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ. ಅದರಲ್ಲೊಂದು ರಿವರ್ ಫ್ರಂಟ್ ಯೋಜನೆ. ಉಳ್ಳಾಲದ ನೇತ್ರಾವತಿ ನದಿಗೆ ಅಡ್ಡಲಾಗಿರುವ ರೈಲ್ವೇ ಸೇತುವೆ ಬಳಿಯಿಂದ ಬೋಳಾರ ಸೀ ವ್ಯೂ ವರೆಗಿನ 2.1 ಕಿಮೀ ಉದ್ದಕ್ಕೆ ನದಿಯ ದಡವನ್ನು ಆಕರ್ಷಣೀಯ ಮಾಡುವ ಪ್ರಯತ್ನ ಇದರ ಹಿಂದಿದೆ. ನದಿ ದಡದ ಉದ್ದಕ್ಕೂ ಸೈಕಲ್ ಪಾತ್, ಪಾರ್ಕ್, ವಾಕಿಂಗ್ ಟ್ರ್ಯಾಕ್, ಫುಡ್ ಕಿಯೋಸ್ಕ್, ಮರ, ಗಿಡಗಳನ್ನು ಬೆಳೆಸುವುದು ಇತ್ಯಾದಿಗಳ ಮೂಲಕ ಜನಸಾಮಾನ್ಯರು, ಪ್ರವಾಸಿಗರನ್ನು ಆಕರ್ಷಿಸುವ ಇಕೋ ಫ್ರೆಂಡ್ಲಿ ಯೋಜನೆ.
ಆದರೆ ಈ ಯೋಜನೆಗೆ ಪರಿಸರವಾದಿಗಳ ಸೋಗಿನಲ್ಲಿರುವ ಕೆಲವರು ಸ್ಥಳೀಯ ಕೋರ್ಟಿನಲ್ಲಿ ಆಕ್ಷಪ ವ್ಯಕ್ತಪಡಿಸಿ ಕೇಸು ಮಾಡಿದ್ದಾರೆ. ಅಲ್ಲದೆ, ಗ್ರೀನ್ ಟ್ರಿಬ್ಯುನಲ್ ನಲ್ಲಿಯೂ ಕೇಸು ಹಾಕಿದ್ದು, ಅದರಂತೆ 2024ರ ಮೇ 31ರಂದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ, ಗ್ರೀನ್ ಟ್ರಿಬ್ಯುನಲ್ ಕೋರ್ಟ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ವಿಭಾಗದ ಅಧಿಕಾರಿ ಮತ್ತು ವಿಜ್ಞಾನಿ ಆಗಿರುವ ಮಹಿಮಾ ಟಿ., ಪರಿಸರ ಮತ್ತು ಅರಣ್ಯ ಇಲಾಖೆಯ ವಿಜ್ಞಾನಿ ಡಾ.ಆರ್.ಶ್ರೀಧರ್, ಚೆನ್ನೈನ ನ್ಯಾಶನಲ್ ಸೆಂಟರ್ ಫಾರ್ ಕೋಸ್ಟಲ್ ರೀಸರ್ಚ್ ಸಂಸ್ಥೆಯ ವಿಜ್ಞಾನಿ ಸತ್ಯಕಿರಣ್ ರಾಜು ಇವರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಿ ಸ್ಥಳ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅಧಿಕಾರಿಗಳ ತಂಡವು ಆನಂತರ ಮಂಗಳೂರಿನಲ್ಲಿ ಕಾಮಗಾರಿಯ ನಡೆಯುವ ಸ್ಥಳವನ್ನು ತಪಾಸಣೆ ನಡೆಸಿ ವರದಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿದೆ. ಎರಡು ಕಿಮೀ ವ್ಯಾಪ್ತಿಯಲ್ಲಿ 133 ಮರಗಳಿದ್ದು, ಯಾವುದನ್ನೂ ತೆರವು ಮಾಡದಂತೆಯೂ ಸೂಚನೆ ನೀಡಿದೆ.
ಸದ್ಯದಲ್ಲೇ ತಡೆಯಾಜ್ಞೆ ತೆರವು ಖಚಿತ ;
ಕೋರ್ಟಿಗೆ ಸಲ್ಲಿಸಿದ ಆಕ್ಷೇಪದಲ್ಲಿ ಕಾಮಗಾರಿ ನಡೆಯುವಲ್ಲಿ ಕಾಂಡ್ಲಾ ವನಗಳಿದ್ದು, ಅವುಗಳನ್ನು ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ತೆರವು ಮಾಡುತ್ತಿದ್ದಾರೆ. ನದಿಯ ಭಾಗಕ್ಕೆ ಮಣ್ಣು ತುಂಬಿಸಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆಯೂ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ಸಿಆರ್ ಝೆಡ್ ನಿಯಮದ ಪ್ರಕಾರ ಕಾಂಕ್ರೀಟ್ ಗೋಡೆ ರೀತಿಯ ಪರ್ಮನೆಂಟ್ ರಚನೆಗಳನ್ನು ಕಟ್ಟಬಾರದು ಎಂಬುದನ್ನೂ ಸೂಚಿಸಿದೆ. ಅಲ್ಲದೆ, ದೂರಿನಲ್ಲಿ ಆರೋಪಿಸಿದಂತೆ ಯಾವುದೇ ಅಕ್ರಮ, ಉಲ್ಲಂಘನೆ ಆಗಿಲ್ಲ ಎಂಬುದನ್ನು ವರದಿಯಲ್ಲಿ ನೀಡಿದ್ದಾರೆ. ಇದೆಲ್ಲವೂ ಸದ್ಯಕ್ಕೆ ಹಸಿರು ಪೀಠದ ಅಂಗಳದಲ್ಲಿದ್ದು, ಅಧ್ಯಯನ ತಂಡದ ವರದಿ ಆಧರಿಸಿ ತಡೆಯಾಜ್ಞೆ ತೆರವಾಗಲಿದೆ ಎನ್ನುವ ವಿಶ್ವಾಸದಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದ್ದಾರೆ. ಈಗಾಗಲೇ ಒಟ್ಟು ಪ್ರಸ್ತಾವಿತ ಯೋಜನೆಯ 2.1 ಕಿಮೀ ಪೈಕಿ 1.6 ಕಿಮೀ ಉದ್ದಕ್ಕೆ 60 ಶೇಕಡಾದಷ್ಟು ಕಾಮಗಾರಿ ಮುಗಿಸಲಾಗಿದೆ. ಕೋರ್ಟ್ ತಡೆಯಾಜ್ಞೆ ತೆರವಾದ ಆರು ತಿಂಗಳಲ್ಲಿ ಪೂರ್ತಿ ಕಾಮಗಾರಿ ಮುಗಿಸಲಾಗುವುದು ಎಂದು ಮಂಗಳೂರು ಸ್ಮಾರ್ಟ್ ಸಿಟಿ ಎಂಡಿ ರಾಜು ಕೆ. ಹೇಳುತ್ತಾರೆ.
ಇದಲ್ಲದೆ, ನೇತ್ರಾವತಿ ನದಿಗೆ ಹೊಯ್ಗೆಬಜಾರ್, ಬೋಳಾರದಲ್ಲಿ ನೇರವಾಗಿ ಚರಂಡಿ ನೀರನ್ನು ಪೂರೈಕೆ ಮಾಡುವ ಕಾಲುವೆಗಳಿದ್ದು, ರಿವರ್ ಫ್ರಂಟ್ ಯೋಜನೆಯಡಿ ಚರಂಡಿ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವ ಪ್ರಸ್ತಾವನೆಯೂ ಇದೆ. ಉಳ್ಳಾಲದ ನೇತ್ರಾವತಿ ಸೇತುವೆಯ ಇಕ್ಕೆಲಗಳಲ್ಲಿ ಮಲಿನ ನೀರನ್ನು ನೇರವಾಗಿ ನದಿಗೆ ಬಿಡಲಾಗುತ್ತಿದ್ದು, ಇದಕ್ಕೆಲ್ಲ ರಿವರ್ ಫ್ರಂಟ್ ಯೋಜನೆಯಿಂದ ಉತ್ತರ ಸಿಗುವ ಸಾಧ್ಯತೆಯಿದೆ. ಅಲ್ಲದೆ, ಬಯೋಡೈವರ್ಸಿಟಿ ಪಾರ್ಕ್ ನಿರ್ಮಾಣ, ನದಿಯಲ್ಲಿ ಬೋಟ್ ರೈಡಿಂಗ್ ಮಾಡುವುದಕ್ಕೂ ಅವಕಾಶ ಇದ್ದು, ಆಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ರಿವರ್ ಫ್ರಂಟ್ ಪಾಥ್ ತಲುಪಲು ಅಲ್ಲಲ್ಲಿ ಪ್ರತ್ಯೇಕ ರಸ್ತೆ ಸಂಪರ್ಕ ಇದ್ದರೂ, ವಾಹನಗಳನ್ನು ಪಾಥ್ ಬಳಿಗೊಯ್ಯಲು ಅವಕಾಶ ಇರುವುದಿಲ್ಲ.
70 ಕೋಟಿ ಬದಲು 38 ಕೋಟಿಯಲ್ಲೇ ಯೋಜನೆ ;
ಈ ಹಿಂದೆ ಒಟ್ಟು ರಿವರ್ ಫ್ರಂಟ್ ಯೋಜನೆಗೆ 70 ಕೋಟಿ ಎಂದು ಅಂದಾಜಿಸಲಾಗಿದ್ದರೂ, ಸದ್ಯಕ್ಕೆ 38 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಮುಗಿಸಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆಮೂಲಕ ಮಂಗಳೂರು ನಗರದ ದಕ್ಷಿಣಕ್ಕಿರುವ ನೇತ್ರಾವತಿ ನದಿಯ ಎರಡು ಕಿಮೀ ಉದ್ದಕ್ಕೆ ರಿವರ್ ಫ್ರಂಟ್ ಅನಾವರಣಗೊಳ್ಳಲಿದೆ. ಭವಿಷ್ಯದಲ್ಲಿ ರಿವರ್ ಫ್ರಂಟ್ ಒಳಭಾಗದಿಂದಲೇ ಮಂಗಳಾ ಕಾರ್ನಿಶ್ ಎನ್ನುವ ಇಡೀ ನಗರವನ್ನು ಸುತ್ತು ಹಾಕುವ ರೀತಿ, ಈಗಾಗಲೇ ಇರುವ ರಸ್ತೆಯನ್ನು ಮರು ನಿರ್ಮಿಸುವ ಪ್ರಸ್ತಾಪವೂ ಇದೆ. ಆ ಸಂದರ್ಭದಲ್ಲಿ ಸುಲ್ತಾನ್ ಬತ್ತೇರಿಯಿಂದ ಬೆಂಗ್ರೆಗೆ ಸೇತುವೆ ಕಲ್ಪಿಸುವ ಯೋಜನೆಯನ್ನೂ ಅಧಿಕಾರಿಗಳು ಮಾಡಿಕೊಂಡಿದ್ದಾರೆ.
ನೇತ್ರಾವತಿ ನದಿಯ ತಟವನ್ನು ಬಂದರು ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದ್ದು ಸ್ಥಳೀಯ ಕೆಲವು ಉದ್ಯಮಿಗಳು ಟೈಲ್ ಫ್ಯಾಕ್ಟರಿ ಇನ್ನಿತರ ಉದ್ದೇಶಕ್ಕೆ ಜಾಗವನ್ನು ಲೀಸಿಗೆ ಪಡೆದು ಬಳಸುತ್ತಿದ್ದರು. ಆದರೆ, ಈಗ ಟೈಲ್ ಫ್ಯಾಕ್ಟರಿ ಕ್ಲೋಸ್ ಆಗಿದೆ. ಅದರ ಬದಲು ನದಿಯಂಚಿನ ಲಾಭ ಪಡೆದು ಈವೆಂಟ್ ಆಯೋಜನೆಯನ್ನು ಮಾಡಿ ಲಾಭ ಗಳಿಸುತ್ತಿದ್ದರು. ಸದ್ಯಕ್ಕೆ ಇವರ ಲೀಸ್ ಅವಧಿ ಮುಗಿದಿದ್ದರೂ, ಇಲ್ಲಿನ ಕೆಲವರು ತಮ್ಮ ಸುಪರ್ದಿಗೆ ಪೆಟ್ಟು ಬೀಳುವ ಭಯದಲ್ಲಿ ರಿವರ್ ಫ್ರಂಟ್ ಯೋಜನೆಗೆ ತಡೆ ಒಡ್ಡುತ್ತಿದ್ದಾರೆ. ಮಂಗಳೂರಿನ ಕೋರ್ಟಿನಲ್ಲಿ ಸ್ಥಳೀಯ ಒಂದಿಬ್ಬರ ವ್ಯಾಜ್ಯಗಳಿದ್ದು, ಸಾರ್ವಜನಿಕ ಹಿತದ ಬದಲು ಸ್ವಾರ್ಥ ದೃಷ್ಟಿಯಿಟ್ಟುಕೊಂಡು ಯೋಜನೆಗೆ ತಡೆ ಹೇರುತ್ತಿದ್ದಾರೆ ಎನ್ನುವ ವಿಚಾರವನ್ನು ಸ್ಥಳೀಯರೇ ಹೇಳುತ್ತಿದ್ದಾರೆ.
A joint committee, constituted by the National Green Tribunal (NGT) to probe allegations of violations in the implementation of the Netravathi riverfront promenade work by Mangaluru Smart City Ltd., has said it did not find any violations of conditions imposed by the Karnataka State Coastal Zone Management Authority in its CRZ clearance.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm