Mangalore DC, Rain: ಪ್ರವಾಸಿ ತಾಣಗಳಲ್ಲಿ ಅಪಾಯ ಲೆಕ್ಕಿಸದೆ ರೀಲ್ಸ್ ಮಾಡಿದರೆ ಎಫ್ಐಆರ್ ಹಾಕುತ್ತೇವೆ ; ಜಿಲ್ಲಾಧಿಕಾರಿ ಎಚ್ಚರಿಕೆ 

31-07-24 06:20 pm       Mangalore Correspondent   ಕರಾವಳಿ

​​​​​​​ಮಳೆಗಾಲದ ಸಂದರ್ಭ ಎಲ್ಲಿ ಏನಾಗುತ್ತದೆ ಅಂತ ಹೇಳಕ್ಕಾಗಲ್ಲ. ಜಲಪಾತ, ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಎಚ್ಚರಿಕೆ ಫಲಕ ಮೀರಿಯೂ ವಿಡಿಯೋ, ರೀಲ್ಸ್ ಮಾಡಿದರೆ ಅಂಥವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಮಂಗಳೂರು, ಜುಲೈ.31: ಮಳೆಗಾಲದ ಸಂದರ್ಭ ಎಲ್ಲಿ ಏನಾಗುತ್ತದೆ ಅಂತ ಹೇಳಕ್ಕಾಗಲ್ಲ. ಜಲಪಾತ, ಅಪಾಯಕಾರಿ ಪ್ರವಾಸಿ ತಾಣಗಳಲ್ಲಿ ಎಚ್ಚರಿಕೆ ಫಲಕ ಮೀರಿಯೂ ವಿಡಿಯೋ, ರೀಲ್ಸ್ ಮಾಡಿದರೆ ಅಂಥವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರವಾಸಿ ತಾಣ, ಬೀಚ್ ಗಳಲ್ಲಿ ಅಪಾಯಕಾರಿ ಇರುವ ಕಡೆ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಇದರ ಜೊತೆಗೆ ಎಚ್ಚರಿಕೆ ಸಹಿತ ಅದಕ್ಕೆ ಸಂಬಂಧಿಸಿ ಕಾಯ್ದೆ ವಿಚಾರವನ್ನೂ ಉಲ್ಲೇಖಿಸಲಾಗಿದೆ. ಇಂತಹ ಫಲಕ ಇರುವ ಪ್ರದೇಶಗಳಲ್ಲಿ ಕಾನೂನು ಮೀರಿ ರೀಲ್ಸ್ ಮಾಡಿದರೆ ಅವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

27 Best Places to visit in Mangalore | Top Tourist Attractions | 2024

Top 20 Places for One-Day Trip From Mangalore

ಕಾಡಿನ ಮಧ್ಯೆ ಹಾಗು ಇತರ ಜಲಪಾತ ಇರುವ ಕಡೆಗಳಲ್ಲಿ ವಿಡಿಯೋ ಮಾಡುವುದು ಡೆಂಜರ್ ಆಗಿದ್ದು, ಪ್ರಕೃತಿ ಯಾವಾಗ ಯಾವ ರೀತಿ ವರ್ತಿಸುತ್ತದೆ ಎನ್ನುವುದನ್ನು ಊಹಿಸಲು ಆಗುವುದಿಲ್ಲ. ಪ್ರಾಕೃತಿಕ ವಿಕೋಪ ಯಾವಾಗ, ಹೇಗೆ ನಡೆಯುತ್ತೆ ಅನ್ನೋದನ್ನು ಹೇಳೋಕಾಗಲ್ಲ. ಹೀಗಾಗಿ ಈ ರೀತಿಯ ಸಾಹಸಕ್ಕೆ ಯಾವತ್ತೂ ಮುಂದಾಗಬೇಡಿ ಎಂದು ಮನವಿ ಮಾಡುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುದ್ಧಿವಂತರಾಗಿದ್ದು ಈ ಸೂಚನೆಯನ್ನು ಪಾಲಿಸುತ್ತೀರಿ ಎಂಬ ನಂಬಿಕೆ ಇದೆಯೆಂದರು.

Heavy rain, FIR to be registered on those to visit tourist spots says Mangalore DC.